ಶ್ರೀನಿವಾಸಪುರ:ಒಂಟಿ ಮನೆ ಗುರಿಯಾಗಿಸಿಕೊಂಡು ದರೋಡೆ ಮಾಡಿರುವ ಘಟನೆ ಬೆಂಗಳೂರು-ಕಡಾಪ ಹೈವೆ ರಸ್ತೆಯಲ್ಲಿ ಶ್ರೀನಿವಾಸಪುರ ತಾಲೂಕಿನ ತಾಡಿಗೋಳ್ ಕ್ರಾಸ್ ನಲ್ಲಿ ನಡೆದಿರುತ್ತದೆ.
ಬುಧವಾರ ರಾತ್ರಿ ಸುಮಾರು ಎಂಟುಗಂಟೆ ಸಮಯದಲ್ಲಿ ತಾಡಿಗೋಳ್ ಕ್ರಾಸ್ ಸಮೀಪದಲ್ಲಿರುವ ಭಗವಾನ್ ಶಾಲೆ ಬಳಿಯ ಒಂಟಿಮನೆಯಲ್ಲಿ ಮನೆಯ ಯಜಮಾನ ರೇಷನ್ ತರಲು ಅಂಗಡಿಗೆ ಹೋಗಿದ್ದ ವೇಳೆ ನಾಲ್ಕು ಜನರಿದ್ದ ಅಪರಿಚಿತರ ಗುಂಪು ಮನೆಯ ಬಳಿ ಕುರಿಶೆಡ್ ಜಾಗದಲ್ಲಿ ಅವಿತಿರುತ್ತಾರೆ ಈ ಸಮಯದಲ್ಲಿ ನಾಯಿ ಬೊಗಳಿದ್ದು ಅನುಮಾನಗೊಂಡ ಮನೆಯ ಯಜಮಾನಿ ಶೆಡ್ ಬಳಿ ನೋಡಿದಾಗ ಅಲ್ಲಿದ್ದ ದಾಂಡಿಗರ ಗುಂಪು ಆಕೆಯನ್ನು ಹೆದರಿಸಿದ್ದಾರೆ ಆಕೆ ಭಯದಿಂದ ಮನೆಯತ್ತಿರ ಓಡಿಬಂದಿದ್ದಾರು ದಾಂಡಿಗರ ಗುಂಪು ಅಟ್ಟಿಸಿಕೊಂಡು ಬಂದು ಮನೆಯೊಳಗೆ ನುಗ್ಗಿದ್ದಾರೆ ತಮ್ಮಲ್ಲಿದ್ದ ಪಿಸ್ತೂಲ್ ಲಾಂಗುಗಳು ತೋರಿಸಿ ಮನೆಯಲ್ಲಿದ್ದ ಇಬ್ಬರು ಮಹಿಳೆಯರನ್ನು ಬೆದರಿಸಿದ ಖದೀಮರು ಮನೆ ಯಜಮಾನಿ ಹಾಕಿಕೊಂಡಿದ್ದ ಮಾಂಗಲ್ಯ,3 ಜೊತೆ ಓಲೆ,6 ಉಂಗುರ,1 ನಕ್ಲೆಸ್, 55 ಸಾವಿರ ಹಣವನ್ನು ತಗೆದುಕೊಂಡು ಹೋಗಿದ್ದಾರೆ.ಮನೆಯಲ್ಲಿದ್ದ ವಸ್ತುಗಳನ್ನು ಚಲ್ಲಾಪಿಲ್ಲಿ ಮಾಡಿದ್ದಾರೆ
ಘಟನಾ ಸ್ಥಳಕ್ಕೆ ಗೌನಿಪಲ್ಲಿ ಪೊಲೀಸರು ಭೇಟಿ ಕೊಟ್ಟು ಪರಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Trending
- ಶ್ರೀನಿವಾಸಪುರ:ಕಸ ಹಾಕುವ ವಿಚಾರಕ್ಕೆ ಜಗಳ ಒಬ್ಬನ ಕೊಲೆ!
- ಶ್ರೀನಿವಾಸಪುರ:ವೇಶ್ಯಾವಾಟಿಕೆ ದಂಧೆ ಪೊಲೀಸ್ ದಾಳಿ, ಕಿಂಗ್ ಪಿನ್ ಮಹಿಳೆ ಬಂಧನ!
- ಶ್ರೀನಿವಾಸಪುರ:ವಾಹನ ಡಿಕ್ಕಿಯಾಗಿ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಪೇದೆ ನಿಧನ!
- ಶ್ರೀನಿವಾಸಪುರ:ಕರ್ನಾಟಕ ಬ್ಯಾಂಕ್ ಉದ್ಯೋಗಿ ಅಪಘಾತದಲ್ಲಿ ಸಾವು!
- ಲಂಚ ಪಡೆಯುತ್ತಿದ್ದ ಬಿಜೆಪಿ ಶಾಸಕ ಲೋಕಾಯುಕ್ತ ಬಲೆಗೆ!
- ಯಾವ ಐಟಿ-ಬಿಟಿ ಗೂ ಕಡಿಮೆ ಇಲ್ಲ,Dairy Farm ಆದಾಯ ಲಕ್ಷಗಟ್ಟಲೆ!
- ಬೆಂಗಳೂರಿನಲ್ಲಿ ಕುಬೇರರು ವಾಸಿಸುವ“ಬಿಲಿಯನೇರ್ಸ್ ಸ್ಟ್ರೀಟ್”ಎಲ್ಲಿದೆ?
- ಶ್ರೀನಿವಾಸಪುರ:ನೌಕರರ ಸಂಘದ ಹಾಲಿ-ಮಾಜಿ ಅಧ್ಯಕ್ಷರ ನಡುವೆ ಬಿದಿ ಜಗಳ!
Saturday, March 7



