ಹಣಕ್ಕಾಗಿ ಏನು ಬೇಕಾದರೂ ಆಗಬಹುದು ಎಷ್ಟು ಕೀಳುಮಟ್ಟಕ್ಕೆ ಬೇಕಾದರೂ ಇಳಿಯಬಹುದು ಅದಕ್ಕಾಗಿ ಅಪರೂಪ ಎನ್ನುವಂತ ಭಾವನಾತ್ಮಕ ಸಂಬಂದವನ್ನು ಬಳಸಿಕೊಂಡು ಸಾಂಸಾರಿಕ ಮೋಸ ಎನ್ನಬಹುದಾದ ಪ್ರಕರಣ ಇದಾಗಿದ್ದು ಪತ್ನಿಯೇ ತನ್ನ ಪತಿಯ ಮೂತ್ರಪಿಂಡ(ಕಿಡ್ನಿ)ಯನ್ನು ಮಾರಿಸಿ ಆ ಹಣ ತಗೆದುಕೊಂಡು ಪ್ರಿಯಕರನೊಂದಿಗೆ ಓಡಿಹೋಗಿರುವ ಅಪರೂಪದ ವಂಚನೆಯ ಪ್ರಕರಣ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ನ್ಯೂಜ್ ಡೆಸ್ಕ್:ಮೂಲಗಳ ಪ್ರಕಾರ,ಹೌರಾ ಜಿಲ್ಲೆಯ ಶಂಕರೈಲ್ ಗ್ರಾಮದ ಮಹಿಳೆ ತನ್ನ ಪತಿಗೆ ಪ್ರೀತಿಯ ಮಾತುಗಳನ್ನು ಹೇಳಿ ಕುಟುಂಬದ ಆರ್ಥಿಕ ತೊಂದರೆಗಳನ್ನು ಎದುರಿಸಿ ಕಷ್ಟಗಳಿಂದ ಹೊರಬರುವುದಲ್ಲದೆ ಹಣ ಬಂದರೆ ಅದನ್ನು ಬ್ಯಾಂಕಿನಲ್ಲಿ ಠೇವಣಿ ಮಾಡಿ ಮಗಳ ಶಿಕ್ಷಣ ಮತ್ತು ಮದುವೆಗೆ ಸಹಾಯವಾಗುತ್ತದೆ ಎಂದು ಗಂಡನ ಮೇಲೆ ಭಾವನಾತ್ಮಕವಾಗಿ ಒತ್ತಡ ಹಾಕಿ ಮನವೊಲಿಸಿ ಆತನ ಮೂತ್ರಪಿಂಡವನ್ನು ಮಾರಾಟ ಮಾಡಲು ಪುಸಲಾಯಿಸಿದ್ದಾಳೆ ಹೆಂಡತಿಯ ಮಾತು ನಿಜವೆಂದು ನಂಬಿ ಒಪ್ಪಿದ ಪತಿರಾಯ ಸತತ 3 ತಿಂಗಳುಗಳ ಕಾಲ ಕಿಡ್ನಿ ಕೊಳ್ಳುವವರನ್ನು ಹುಡುಕಿ ಕಿಡ್ನಿಯನ್ನು ಮಾರಾಟ ಮಾಡಿದ್ದಾನೆ. ಅದರಿಂದ ಬಂದ 10 ಲಕ್ಷ ರೂ.ಗಳನ್ನು ಬ್ಯಾಂಕಿಗೆ ಹಾಗುವುದಾಗಿ ಹೇಳಿದ ಹೆಂಡತಿ ಹಣ ತೆಗೆದುಕೊಂಡು ತನ್ನ ತನ್ನ ಫೇಸ್ ಬುಕ್ ಲವರ್ ರವಿದಾಸ್ ಜೊತೆ ರಾತ್ರೋರಾತ್ರಿ ಓಡಿ ಹೋಗಿದ್ದಾಳೆ.
ಮನೆ ಬಳಿ ಪರಿಪರಿ ಬೇಡಿಕೊಂಡ ಗಂಡ
ಪತ್ನಿಯ ನಿಜಬಣ್ಣ ಬಯಲಾದ ಬಳಿಕ ಪತ್ನಿ ಪ್ರಿಯಕರ ರವಿದಾಸ್ ಜೊತೆ ಇರುವ ಮಾಹಿತಿ ತಿಳಿದುಕೊಂಡ ಪತಿ ಅವರಿದ್ದ ಮನೆ ಬಳಿಗೆ ತನ್ನ 10 ವರ್ಷದ ಮಗಳನ್ನು ಹಾಗು ಬಂದುಗಳನ್ನು ಕರೆದುಕೊಂಡು ಹೋಗಿ ವಾಪಸ್ಸು ಬರುವಂತೆ ಪರಿಪರಿಯಾಗಿ ಬೇಡಿಕೊಂಡಿದ್ದಾನೆ. ಇದಕ್ಕೆ ಆತನ ಪತ್ನಿ ಮತ್ತು ರವಿದಾಸ್ ಬಾಗಿಲನ್ನೇ ತೆಗೆಯದೆ ಅವಮಾನಿಸಿ ನಿನ್ನ ಕೈಯಲ್ಲಿ ಆನಾಗುತ್ತದೋ ಅದನ್ನು ಮಾಡಿಕೋ ಲವರ್ ಜೊತೆಯೇ ಇರುತ್ತೇನೆ ಎಂದು ಹೇಳಿ ನಿನಗೆ ಡಿವೋರ್ಸ್ ಲೆಟರ್ ಕಳುಹಿಸುತ್ತೇನೆ ಎಂದು ಹೇಳಿ ಮನೆಯ ಒಳಗಿನಿಂದಲೆ ಬೆದರಿಸಿ ಕಳೆಸಿದ್ದಾಳೆ.ಈ ಬಗ್ಗೆ ಪತಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿದ್ದಾನೆ.