ಶ್ರೀನಿವಾಸಪುರ:ಗ್ರಾಮಗಳ ಅಭಿವೃದ್ಧಿಗೆ ಸರ್ಕಾರದಿಂದ ಬಿಡುಗಡೆಯಾಗುವಂತ ಅನುದಾನಗಳನ್ನು ದುರುಪಯೋಗ ಆಗಲು ಅವಕಾಶ ನೀಡಬಾರದು, ಒಂದು ವೇಳೆ ದುರುಪಯೋಗ ಆಗಿರುವುದು ಸಾಬಿತಾದರೆ ಅಂತಹ ಅಧಿಕಾರಿಗಳ ವಿರುದ್ದ ನಿರ್ಧಾಕ್ಷಿಣ್ಯವಾಗಿ ಕಾನೂನಾತ್ಮಕವಾದ ಕ್ರಮ ಜರುಗಿಸಲಾಗುವುದು ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ Justice B.Veerappa Upalokayukta ಹೆಚ್ಚರಿಸಿದರು.
ಅವರು ಮಂಗಳವಾರ ಒಂದೇ ದಿನ ತಾಲೂಕಿನ ಸುಮಾರು 13 ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ, ಪಂಚಾಯಿತಿ ಅಧಿಕಾರಿಗಳ ಕಾರ್ಯನಿರ್ವಹಣೆ ಹಾಗು ಅಲ್ಲಿನ ಅಡಳಿತ ಕಾರ್ಯವೈಕರಿ ಕುರಿತಾಗಿ ಖುದ್ದು ಪರಶೀಲನೆ ನಡೆಸಿದ ಸಂದರ್ಭದಲ್ಲಿ ಮಾತನಾಡಿದರು. ಗ್ರಾಮಗಳಲ್ಲಿ ಸ್ವಚ್ಚತೆ ಹಾಗು ನೈರ್ಮಲ್ಯ ಕಾಪಾಡಲು ಪಂಚಾಯಿತಿ ಅಧಿಕಾರಿಗಳು ಆದ್ಯತೆ ನೀಡಬೇಕಿದೆ ಸರ್ಕಾರದ ಯೋಜನೆಗಳನ್ನು ಸದ್ಭಳಕೆ ಮಾಡಿಕೊಂಡು ಗ್ರಾಮದ ಅಭಿವೃದ್ದಿಗೆ ಸರ್ವತಾ ಸಹಕಾರ ನೀಡುವಂತೆ ತಿಳಿಸಿದರು.
ಲಕ್ಷ್ಮೀಸಾಗರ,ಯಲ್ದೂರು ಸೋಮಯಾಜಲಪಲ್ಲಿ, ಕೊಳತೂರು ಮತ್ತು ಮುತ್ತಕಪಲ್ಲಿ ಗ್ರಾ.ಪಂ ಕಚೇರಿಯಲ್ಲಿನ ದಾಖಲೆಗಳ ನಿರ್ವಹಣೆಯಲ್ಲಿ ಅಧಿಕಾರಿಗಳ ಬೇಜವಾಬ್ದಾರಿ ಎದ್ದು ಕಾಣುತ್ತಿದೆ ಎಂಬ ದೂರುಗಳು ಬಂದ ಹಿನ್ನಲೆಯಲ್ಲಿ ಉಪಲೋಕಾಯುಕ್ತ ನ್ಯಾಯಮೂರ್ತಿ Justice B Veerappa, ಪಂಚಾಯಿತಿಗಳ ಭೇಟಿ ವೇಳೆ ವಿಶೇಷ ಪರಶೀಲನೆ ಮಾಡಿದರು.ಗ್ರಾಮ ಪಂಚಾಯಿತಿ ಅಧಿಕಾರಿಗಳು ಗ್ರಾಮಸ್ಥರ ಹಾಗು ಸ್ಥಳೀಯ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತಗೆದುಕೊಂಡು ರಾಜಕೀಯ ರಹಿತವಾಗಿ ಕಾರ್ಯನಿರ್ವಹಣೆ ಮಾಡುವಂತೆ ಸೂಚಿಸಿದರು.
ಯಲ್ದೂರು ಗ್ರಾಮ ಪಂಚಾಯಿತಿ ಭೇಟಿ ಸಂದರ್ಭದಲ್ಲಿ ದಾಖಲೆಗಳನ್ನು ಪರಿಶೀಲಿಸಿದರು ವಿವಿಧ ಅನುಧಾನಗಳ ಮಾಹಿತಿ ಚುನಾಯಿತ ಪ್ರತಿನಿದಿಗಳ ತೀರ್ಮಾನದ ನಡಾವಳಿ ಪುಸ್ತಕಗಳನ್ನು ಪರಶೀಲಿಸಿ ಮಾತನಾಡಿದ ಅವರು ಚುನಾಯಿತ ಪ್ರತಿನಿದಿಗಳು 5 ವರ್ಷಗಳು ಅಧಿಕಾರದಲ್ಲಿದ್ದು ಜವಾಬ್ದಾರಿಯಿಂದ ಸಾರ್ವಜನಿಕರ ಸೇವೆ ಮಾಡಲು ಮುಂದಾಗಬೇಕು ಎಂದರು.
ರಾಜಕೀಯ ಚುನಾವಣೆಗಷ್ಟೆ ಮೀಸಲಿಟ್ಟು ಉಳಿದಂತೆ ಸಾಮಾಜಿಕ ಜವಾಬ್ದಾರಿ ಇಟ್ಟುಕೊಂಡು ಸರ್ಕಾರದ ಸವಲತ್ತುಗಳನ್ನು ಹಾಗು ಗ್ರಾಮಗಳಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ಅಧಿಕಾರಿಗಳು ಹಾಗು ಚುನಾಯಿತ ಜನ ಪ್ರತಿನಿಧಿಗಳು ಶ್ರಮವಹಿಸುವಂತೆ ಹೇಳಿದರು.
ಮುತ್ತಕಪಲ್ಲಿ ಎಲ್ಲವು ಆಯೋಮಯ
ಮುತ್ತಕಪಲ್ಲಿ ಪಂಚಾಯಿತಿ ಭೇಟಿಯಲ್ಲಿ ಪಂಚಾಯಿತಿ ಕಚೇರಿಯಲ್ಲಿ ದಾಖಲೆಗಳು ಸರಿಯಾಗಿ ಇಲ್ಲದೆ ಎಲ್ಲವೂ ಅಯೋಮಯವಾಗಿತ್ತು ಇದನ್ನು ಕಂಡು ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ್ದ ನ್ಯಾಯಮೂರ್ತಿಗಳು ಅಲ್ಲಿನ ಅವ್ಯವಸ್ಥೆ ಬಗ್ಗೆ ಕೆಂಡಾಮಂಡಲರಾದರು.ಮುಖ್ಯವಾಗಿ ಗ್ರಾಮದ ಸ್ವಚ್ಚತೆ ಹಾಗು ನೈರ್ಮಲ್ಯ ಕಾಪಾಡಲು ಸಾಧ್ಯವಾಗದೆ ಅಧಿಕಾರ ಹೇಗೆ ನಡೆಸುತ್ತಿರ ಎಂದು ತೀವ್ರ ಧಾಟಿಯಲ್ಲಿ ಅಧಿಕಾರಿಗಳಿ ಬಿಸಿ ಮುಟ್ಟಿಸಿದರು.ಮುತ್ತಕಪಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಗ್ರಾಮೀಣ ಭಾಗದಲ್ಲಿ ಇರುವ ಸರ್ಕಾರಿ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಅಲ್ಲಿದ್ದ ವೈದ್ಯರಿಗೆ ತಿಳಿಸಿದರು.
ಪುಲಗೋರಕೋಟೆ ಎಲ್ಲವು ಅಕ್ರಮಗಳೆ
ತಾಲೂಕಿನ ಗಡಿಭಾಗದಲ್ಲಿರುವ ಪುಲಗೋರಕೋಟೆ ಪಂಚಾಯಿತಿಯಲ್ಲಿ ಹೆಜ್ಜೆ ಹೆಜ್ಜೆಗೂ ಅಕ್ರಮಗಳ ಸರಮಾಲೆ ಕಂಡು ಲೋಕಾ ಅಧಿಕಾರಿಗಳು ಬೆಚ್ಚಿಬಿದ್ದರು 15 ನೇ ಹಣಕಾಸು ಯೋಜನೆಯಲ್ಲಿ ಅಕ್ರಮ, ನರೇಗಾ ಅನುಷ್ಟಾನದಲ್ಲಿ ದುರುಪಯೋಗ ಕಂಡು ಉಪಲೋಕಾಯುಕ್ತ ನ್ಯಾಯಮೂರ್ತಿಗಳು ತೀವ್ರ ಬೇಸರ ವ್ಯಕ್ತಪಡಿಸಿದರು, ಕೊಳವೆ ಬಾವಿ ನಿರ್ಹಣೆ ಹೇಸರಲ್ಲೂ ಲಕ್ಷಾಂತರ ಹಣ ದುರುಪಯೋಗ ಆಗಿರುವುದು ಮೆಲ್ನೋಟಕ್ಕೆ ಕಂಡು ಬಂದಿದ್ದು ಹತ್ತು ಸಾವಿರಕ್ಕಿಂತ ಕಡಿಮೆ ಬಿಲ್ ಮಾಡುವುದು ಪಂಚಾಯ್ತಿಗಳಲ್ಲಿ ದೊಡ್ಡ ದಂದೆಯಾಗಿರುವುದು ಅಧಿಕಾರಿಗಳ ಗಮನಕ್ಕೆ ಬಂದಿತು ಅಧಿಕಾರಿಗಳೊಂದಿಗೆ ಚುನಾಯಿತ ಜನಪ್ರತಿನಿಧಿಗಳ ಪಾಲ್ಗೋಳ್ಳುವಿಕೆ ಬಗ್ಗೆ ಲೋಕಾಯುಕ್ತರು ತೀವ್ರವಾಗಿ ಪರಿಗಣಿಸಿದರು.
ಈ ಸಂದರ್ಭದಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಅರವಿಂದ್, ಲೋಕಾಯುಕ್ತ ಎಸ್ಪಿ ಆಂಟೋನಿಜಾನ್, ಡಿವೈಎಸ್ಪಿ ದೀರ್, ತಹಶೀಲ್ದಾರ್ ಜಿ.ಎನ್.ಸುದೀಂದ್ರ, ತಾ.ಪಂ ಇಒ ಕೆ.ಸರ್ವೇಶ್, ಇನ್ಸ್ಪೆಕ್ಟರ್ ಗಳಾದ ಆಂಜನಪ್ಪ, ರೇಣುಕಾ, ದೀಪ್ಪೂಜಾರಿ, ತಾ.ಪಂ AD ರಾಮಪ್ಪ, ವ್ಯವಸ್ಥಾಪಕ ಮಂಜುನಾಥ್, ಪಿ.ಡಿ.ಒ.ಶ್ರೀನಿವಾಸರೆಡ್ಡಿ, ಚಂದ್ರಪ್ರಕಾಶ್, ಚಿನ್ನಪ್ಪ, ಮೆಹರ್ ತಾಜ್ ಹಾಗು ಲೋಕಾಯುಕ್ತ ಸಿಬ್ಬಂದಿ ಇದ್ದರು.
Trending
- ಶ್ರೀನಿವಾಸಪುರ:ಕಸ ಹಾಕುವ ವಿಚಾರಕ್ಕೆ ಜಗಳ ಒಬ್ಬನ ಕೊಲೆ!
- ಶ್ರೀನಿವಾಸಪುರ:ವೇಶ್ಯಾವಾಟಿಕೆ ದಂಧೆ ಪೊಲೀಸ್ ದಾಳಿ, ಕಿಂಗ್ ಪಿನ್ ಮಹಿಳೆ ಬಂಧನ!
- ಶ್ರೀನಿವಾಸಪುರ:ವಾಹನ ಡಿಕ್ಕಿಯಾಗಿ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಪೇದೆ ನಿಧನ!
- ಶ್ರೀನಿವಾಸಪುರ:ಕರ್ನಾಟಕ ಬ್ಯಾಂಕ್ ಉದ್ಯೋಗಿ ಅಪಘಾತದಲ್ಲಿ ಸಾವು!
- ಲಂಚ ಪಡೆಯುತ್ತಿದ್ದ ಬಿಜೆಪಿ ಶಾಸಕ ಲೋಕಾಯುಕ್ತ ಬಲೆಗೆ!
- ಯಾವ ಐಟಿ-ಬಿಟಿ ಗೂ ಕಡಿಮೆ ಇಲ್ಲ,Dairy Farm ಆದಾಯ ಲಕ್ಷಗಟ್ಟಲೆ!
- ಬೆಂಗಳೂರಿನಲ್ಲಿ ಕುಬೇರರು ವಾಸಿಸುವ“ಬಿಲಿಯನೇರ್ಸ್ ಸ್ಟ್ರೀಟ್”ಎಲ್ಲಿದೆ?
- ಶ್ರೀನಿವಾಸಪುರ:ನೌಕರರ ಸಂಘದ ಹಾಲಿ-ಮಾಜಿ ಅಧ್ಯಕ್ಷರ ನಡುವೆ ಬಿದಿ ಜಗಳ!
Saturday, March 7



