ಶ್ರೀನಿವಾಸಪುರ:ತಾಲೂಕಿನ ಸರಕಾರಿ ನೌಕರರ ಸಂಘದ ಕಟ್ಟಡದ ಬಾಡಿಗೆ ಹಣದ ವಿಚಾರವಾಗಿ ಹಾಲಿ-ಮಾಜಿ ಅಧ್ಯಕ್ಷರುಗಳ ನಡುವೆ ಆರೋಪ ಪ್ರತ್ಯಾರೋಪ ಹಾದಿ ಬಿದಿ ರಂಪವಾಗಿದೆ.
ನೌಕರರ ಸಂಘದಲ್ಲಿ ಹಣಕಾಸು ಅವ್ಯವಹಾರ,ಹಣ ದುರುಪಯೋಗ ಆಗಿದೆ ಎಂದು ಹಾಲಿ ಅಧ್ಯಕ್ಷ ಬೈರೇಗೌಡರು ದೂರಿದರೆ ಅದಕ್ಕೆ ಮಾಜಿ ಅಧ್ಯಕ್ಷ ಬಂಗವಾದಿನಾಗರಾಜ್ ಅವರು ನನ್ನ ಅವಧಿಯಲ್ಲಿ ಕಪ್ಪುಚುಕ್ಕೆ ಇಲ್ಲದಂತೆ ಕಾರ್ಯನಿರ್ವಹಿಸಿ ತಾ.ಸಂಘದಲ್ಲಿ ಜವಾಬ್ದಾರಿಯಿಂದ ಶಕ್ತಿ ಮೀರಿ ಕೆಲಸ ಮಾಡಿದ್ದೇನೆ ಎಂದು ಪ್ರತ್ಯೂತ್ತರ ನೀಡಿದ್ದಾರೆ. ಹಾಲಿ ಮತ್ತು ಮಾಜಿ ಅಧ್ಯಕ್ಷರ ನಡುವಿನ ಕಿತ್ತಾಟ ತಾರಕಕ್ಕೇರಿದೆ.
ಹಾಲಿ ಮತ್ತು ಮಾಜಿ ಅಧ್ಯಕ್ಷರ ಇಬ್ಬರು ವೃತ್ತಿಯಲ್ಲಿ ಶಿಕ್ಷಕರು.ವೃತ್ತಿ ಮರೆತಂತಿರುವ ಇಬ್ಬರು ನಾನ-ನೀನಾ ಎಂದು ತೀರಾ ವೈಯುಕ್ತಿಕ ನಿಂದನೆಗೆ ಇಳಿಯುವ ಮೂಲಕ ವೃತ್ತಿ ಬದುಕಿನಲ್ಲಾಗಿದ್ದ ತಂಟೆ ತಕರಾರು ಹುಳುಕುಗಳನ್ನು ಪರಸ್ಪರ ಆರೋಪಿಸಿಕೊಂಡು ಸಮಾಜದ ಮುಂದೆ ಬೆತ್ತಲಾಗಿದ್ದಾರೆ
ಮಾಜಿ ಅಧ್ಯಕ್ಷ ನಾಗರಾಜ್ ಶಿಕ್ಷಕ ವೃತ್ತಿಯಿಂದ ವಯೋ ನಿವೃತ್ತರಾಗಿದ್ದರೆ,ಹಾಲಿ ಅಧ್ಯಕ್ಷ ಬೈರೇಗೌಡ ತಾ.ಮುದಿಮಡಗು ಪ್ರೌಡಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ.


ನಿಕಟಪೂರ್ವ ಅಧ್ಯಕ್ಷ ಜನಾರ್ಧನ್ ನಮಗೆನೂ ಗೊತ್ತಿಲ್ಲ ನಾಗರಾಜ್ ನಿವೃತ್ತರಾದಾಗ ಅನಿವಾರ್ಯವಾಗಿ ಅಧ್ಯಕ್ಷನಾದೆ ಎನ್ನುತ್ತಾರೆ.ಇವೆಲ್ಲದರ ನಡುವೆ ನಿಕಟಪೂರ್ವ ಅಧ್ಯಕ್ಷ ಜನಾರ್ಧನ್ ಹಾಲಿ ಅಧ್ಯಕ್ಷರ ತಂಡಕ್ಕೆ ಅಕೌಂಟ್ಸ್ ದಾಖಲಾತಿಗಳನ್ನು ನೀಡಿಲ್ಲ ಎನ್ನಲಾಗಿದೆ.
ನೌಕರರ ಸಂಘದಲ್ಲಿ ಬಾಡಿಗೆಗೆ ಇದ್ದ ವ್ಯಕ್ತಿಗೆ ನಾಮ!
ಹಾಲಿ-ಮಾಜಿ ಅಧ್ಯಕ್ಷರ ನಡುವಿನ ವೈಯುಕ್ತಿಕ ಪ್ರತಿಷ್ಠೆಯಿಂದಾಗಿ ಸಂಘದ ಕಟ್ಟಡದಲ್ಲಿ ಲೀಸ್ ಪಡೆದಿದ್ದ ವ್ಯಕ್ತಿ ಬಿದಿಗೆ ಬಿದಿದ್ದಾರೆ.ಇಬ್ಬರ ಜಗಳದಲ್ಲಿ ಮೂರನೆಯವನಿಗೆ ನಾಮ ಎಂಬಂತಾಗಿದೆ ಬಾಡಿಗೆದಾರ ಪರಿಸ್ಥಿತಿ.
ನೀವು ಕೊಟ್ಟ ಹಣಕ್ಕೆ ದಾಖಲೆ ಇಲ್ಲ ಕಟ್ಟಡ ಕಾಲಿ ಮಾಡಿ ಎಂದು ಹಾಲಿ ಅಧ್ಯಕ್ಷರ ತಂಡ ಹೋಟೆಲ್ ಕೊಠಡಿಗೆ ಬೀಗ ಹಾಕಿದ್ದಾರೆ ಎಂಬ ಆರೋಪ ಹೊರೆಸಲಾಗಿದೆ.



