ಶ್ರೀನಿವಾಸಪುರ:ಕೋಲಾರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲವು ಸಾಧಿಸಿದ್ದು ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಬು ತಮ್ಮ ಸಮೀಪದ ಪ್ರತಿಸ್ಪರ್ದಿ ಕಾಂಗ್ರೆಸ್ ಗೌತಮ್ ಅವರಿಗಿಂತ ಸುಮಾರು ಒಂಬತ್ತು ಸಾವಿರ ಮತಗಳ ಅಂತರ ದೊರತಿದೆ.
ಉಳಿದಂತೆ ಜೆಡಿಎಸ್ ಅಭ್ಯರ್ಥಿ ಲೋಕಸಭಾ ಕ್ಷೇತ್ರದಾದ್ಯಂತ ಉತ್ತಮ ಮತ ಗಳಿಸಿದ್ದು ತಮ್ಮ ಸ್ವಕ್ಷೇತ್ರ ಬಂಗಾರುಪೇಟೆಯಲ್ಲಿ ಸುಮಾರು ಇಪ್ಪತ್ತು ಸಾವಿರಕ್ಕೂ ಹೆಚ್ಚು ಮತ ಗಳಿಸಿದ್ದಾರೆ ಉಳಿದಂತೆ ಶಿಡ್ಲಘಟ್ಟಕ್ಷೇತ್ರದಲ್ಲಿ 411 ಕಾಂಗ್ರೇಸ್ ಹೆಚ್ಚುಮತಗಳ ಅಂತರ,ಚಿಂತಾಮಣಿಕ್ಷೇತ್ರದಲ್ಲಿ 7250 ಜೆಡಿಎಸ್ ಹೆಚ್ಚು ಮತ ಗಳಿಕೆ, ಶ್ರೀನಿವಾಸಪುರಕ್ಷೇತ್ರದಲ್ಲಿ 9492 ಜೆಡಿಎಸ್ ಹೆಚ್ಚು ಮತ ಗಳಿಕೆ, ಮುಳಬಾಗಿಲಿನ ಮೀಸಲು ವಿಧಾನ ಸಭಾ ಕ್ಷೇತ್ರದಲ್ಲಿ 32529 ಜೆಡಿಎಸ್ ಹೆಚ್ಚು ಮತ ಗಳಿಕೆ, ಕೆ.ಜಿ.ಎಫ್.ಮೀಸಲು ವಿಧಾನ ಸಭಾ ಕ್ಷೇತ್ರದಲ್ಲಿ 34431 ಕಾಂಗ್ರೇಸ್ ಹೆಚ್ಚುಮತಗಳ ಅಂತರ, ಬಂಗಾರುಪೇಟೆಮೀಸಲು ವಿಧಾನ ಸಭಾ ಕ್ಷೇತ್ರದಲ್ಲಿ 28134 ಜೆಡಿಎಸ್ ಹೆಚ್ಚು ಮತಗಳ ಅಂತರ,ಕೋಲಾರ ಕ್ಷೇತ್ರದಲ್ಲಿ 8940 ಜೆಡಿಎಸ್ ಮತಗಳ ಅಂತರ,ಮಾಲೂರು ಕ್ಷೇತ್ರದಲ್ಲಿ 13300 ಜೆಡಿಎಸ್ ಹೆಚ್ಚು ಮತಗಳ ಅಂತರ.ಪಡೆದಿರುವ ಎನ್ಡಿಯೆ ಮೈತ್ರಿ ಕೂಟದ ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಬು ಸುಮಾರು 50 ಸಾವಿರ ಮತಗಳಿಂದ ಗೆಲವು ಸಾಧಿಸಿದ್ದಾರೆ.
ಎದ್ದು ಬಿದ್ದು ಗೆದ್ದ ಮಲ್ಲೇಶ್ ಬಾಬು!
ಆರಂಭದಲ್ಲಿ ಸುಮಾರು ಎಪ್ಪತ್ತು ಸಾವಿರಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಮುನ್ನಡೆಯಲ್ಲಿದ್ದ ಜೆಡಿಎಸ್ ಅಭ್ಯರ್ಥಿ ನಂತರದಲ್ಲಿ ಏಕಾ ಏಕಿ ಸುಮಾರು ಅರವತ್ತು ಸಾವಿರ ಮತಗಳಿಂದ ಹಿನ್ನೆಡೆ ಅನಿಭವಿಸಿದರು ಇತ್ತ ಸುದ್ಧಿ ನೋಡುತ್ತಿದ್ದ ಜೆಡಿಎಸ್ ಕಾರ್ಯಕರ್ತರು ಸಾರ್ವಜನಿಕರು ಗಾಭರಿಯಾಗಿ ಹೋದರು ಎಲ್ಲಿಯ ಮುನ್ನಡೆ ಯಾಕೆ ಈಗ ಹಿನ್ನಡೆ ಎಂದು ವ್ಯಾಟ್ಸಾಪ್ ಚರ್ಚೆಗಳು ಶುರುವಾದವು ನಂತರದಲ್ಲಿ ನಿಧಾನಗತಿಯಲ್ಲಿ ಗೆಲುವಿನ ಗ್ರಾಫ್ ಏರುತ್ತ ಸಾಗಿದ್ದು ಕೊನೆಗೆ ಸುಮಾರು 50 ಸಾವಿರ ಮತಗಳ ಅಂತರದಲ್ಲಿ ಗೆದ್ದಿದ್ದಾರೆ.
ಕೈ ಕೊಟ್ಟ ಕೆಜಿಎಫ್ ಕೈ ಹಿಡಿದ ಮಾಲೂರು
ಜೆಡಿಎಸ್ ಅಭ್ಯರ್ಥಿ ಮಲ್ಲೇಶ್ ಬಾಬು ಅವರಿಗೆ ಕಾಂಗ್ರೆಸ್ ಶಾಸಕಿ ಇರುವ ಕೆ.ಜಿ.ಎಫ್.ಮೀಸಲು ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೌತಮ ಪರವಾಗಿ ಸುಮಾರು ಮೂವತ್ತು ಸಾವಿರಕ್ಕೂ ಹೆಚ್ಚು ಮತ ಬಂದಿದ್ದು ಇದರಿಂದಾಗಿ ಎಪ್ಪತೈದು ಸಾವಿರ ಲೀಡ್ ನಲ್ಲಿದ್ದ ಮಲ್ಲೇಶ್ ಬಾಬು ಸೀನ್ ರೀವರ್ಸ್ ಆಗಿತ್ತು ಆಗ ಅವರಿಗೆ ಸಹಾಯಕ್ಕೆ ಬಂದದ್ದು ಮಾಲೂರು ಕ್ಷೇತ್ರದಲ್ಲಿ 13300 ಜೆಡಿಎಸ್ ಲೀಡ್ ನೀಡಿ ಕೈ ಹಿಡಿದು ಗೆಲವಿನ ಅಂತರ ಹೆಚ್ಚಿಸಿತು.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Sunday, April 27