ರಾಮನಗರ:ಹೋಂ ಸ್ಟೇ ನಲ್ಲಿ ಯುವತಿಯ ಪೋಟೋ ತೆಗೆಯುತ್ತಿದ್ದ ಯುವಕರ ಕೃತ್ಯ ಪ್ರಶ್ನಿಸಿದ ಯುವಕನನ್ನು ದೊಣ್ಣೆಯಿಂದ ದಾರುಣವಾಗಿ ಹೊಡೆದು ಹತ್ಯೆ ಮಾಡಿರುವ ಘಟನೆ ನಡೆದಿದೆ.
ರಾಮನಗರ ತಾಲ್ಲೂಕಿನ ಚಿಕ್ಕೇನಹಳ್ಳಿಯ ಫಾರ್ಮ್ ಹೌಸ್ ನಲ್ಲಿ ಘಟನೆ ನಡೆದಿದ್ದು ಬಿಕಾಂ ಪದವಿ ಮುಗಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಚಿಕ್ಕೇನಹಳ್ಳಿಯ ಹೋಂ ಸ್ಟೇ-ನಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಿ ಸಂಭ್ರಮಿಸಿದ್ದಾರೆ ನಂತರ ವಿದ್ಯಾರ್ಥಿಗಳು ಹೊರಡುವಾಗ ಹೋಂ ಸ್ಟೇ ನಲ್ಲಿದ್ದ ಚಂದು ಮತ್ತು ನಾಗೇಶ್ ಎಂಬ ಇಬ್ಬರು ವಿದ್ಯಾರ್ಥಿನಿಯ ಫೋಟೋ ತೆಗೆದಿದ್ದಾರೆ ಇದಕ್ಕೆ ಪುನೀತ್ ಎಂಬ ವಿದ್ಯಾರ್ಥಿ ಯುವತಿಯ ಫೋಟೋ ಯಾಕೆ ತೆಗೆದಿದ್ದೀರಾ ಎಂದು ಪ್ರಶ್ನಿಸಿದ್ದಾನೆ ಇದಕ್ಕೆ ಪೋಟೋ ಶೂಟ್ ಮಾಡುತ್ತಿದ್ದ ಚಂದು ಮತ್ತು ನಾಗೇಶ್ ಕೋಪಗೊಂಡು ಇಬ್ಬರು ಸೇರಿ ದೊಣ್ಣೆಯಿಂದ ಪುನೀತ್ ನನ್ನು ಹೊಡೆದಿದ್ದಾರೆ.ದೊಣ್ಣೆ ಏಟಿಗೆ ತಲೆಗೆ ತೀವ್ರ ಪೆಟ್ಟಾಗಿದ್ದು ಗಾಯಗೊಂಡ ಪುನೀತ್ ನನ್ನು ಬೆಂಗಳೂರಿನ ಕೆಂಗೇರಿ ಸಮೀಪದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ ಚಿಕಿತ್ಸೆ ಫಲಿಸದೇ ಪುನೀತ್ ಮೃತಪಟ್ಟಿದ್ದಾನೆ.ಈ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ರಾಮನಗರ ಗ್ರಾಮಾಂತರ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
Trending
- ಶ್ರೀನಿವಾಸಪುರ:ಕಸ ಹಾಕುವ ವಿಚಾರಕ್ಕೆ ಜಗಳ ಒಬ್ಬನ ಕೊಲೆ!
- ಶ್ರೀನಿವಾಸಪುರ:ವೇಶ್ಯಾವಾಟಿಕೆ ದಂಧೆ ಪೊಲೀಸ್ ದಾಳಿ, ಕಿಂಗ್ ಪಿನ್ ಮಹಿಳೆ ಬಂಧನ!
- ಶ್ರೀನಿವಾಸಪುರ:ವಾಹನ ಡಿಕ್ಕಿಯಾಗಿ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಪೇದೆ ನಿಧನ!
- ಶ್ರೀನಿವಾಸಪುರ:ಕರ್ನಾಟಕ ಬ್ಯಾಂಕ್ ಉದ್ಯೋಗಿ ಅಪಘಾತದಲ್ಲಿ ಸಾವು!
- ಲಂಚ ಪಡೆಯುತ್ತಿದ್ದ ಬಿಜೆಪಿ ಶಾಸಕ ಲೋಕಾಯುಕ್ತ ಬಲೆಗೆ!
- ಯಾವ ಐಟಿ-ಬಿಟಿ ಗೂ ಕಡಿಮೆ ಇಲ್ಲ,Dairy Farm ಆದಾಯ ಲಕ್ಷಗಟ್ಟಲೆ!
- ಬೆಂಗಳೂರಿನಲ್ಲಿ ಕುಬೇರರು ವಾಸಿಸುವ“ಬಿಲಿಯನೇರ್ಸ್ ಸ್ಟ್ರೀಟ್”ಎಲ್ಲಿದೆ?
- ಶ್ರೀನಿವಾಸಪುರ:ನೌಕರರ ಸಂಘದ ಹಾಲಿ-ಮಾಜಿ ಅಧ್ಯಕ್ಷರ ನಡುವೆ ಬಿದಿ ಜಗಳ!
Saturday, March 7



