ಶ್ರೀನಿವಾಸಪುರ:ಲೋಕಸಭೆಯಲ್ಲಿ ನಡೆದಿರುವ ಘಟನೆ ಭದ್ರತಾ ವೈಫಲ್ಯದಿಂದ ಆಗಿದೆ ಎಂದು ಒಪ್ಪಿಕೊಳ್ಳುತ್ತೇವೆ. ಇದು ಪ್ರಧಾನಿ ಮೋದಿ ಅವರ ಜನಪ್ರಿಯತೆ ಸಹಿಸಲಾರದೆ ನಡೆಸಿರುವ ಕೃತ್ಯವಾಗಿದೆ ಇತ್ತಿಚಿನ ವಿಧಾನಸಭೆ ಚುನಾವಣೆ ಫಲಿತಾಂಶ ಸಹಿಸಲು ಸಾಧ್ಯವಾಗದೆ ಬಿಜೆಪಿ ಮೇಲೆ ಗೂಬೆ ಕೂರಿಸುವ ಪಿತೂರಿ ಭಾಗವಾಗಿದೆ ಎಂದು ಸಂಸದ ಮುನಿಸ್ವಾಮಿ ಹೇಳಿದರು.
ಶ್ರೀನಿವಾಸಪುರ ತಾಲ್ಲೂಕಿನ ಚಲ್ದಿಗಾನಹಳ್ಳಿಯಲ್ಲಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಲೋಕಸಭೆಯಲ್ಲಿ ನಡೆದ ಕೃತ್ಯಕ್ಕೆ ತನಿಖೆ ನಡೆಯುತ್ತಿದ್ದು, ಪ್ರತಾಪಸಿಂಹ ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲರನ್ನೂ ತನಿಖೆಗೆ ಒಳಪಡಿಸಲಾಗುತ್ತದೆ. ತಪ್ಪೆಸಗಿದ್ದರೆ ಪ್ರತಾಸಿಂಹ ಅವರಿಗೂ ಶಿಕ್ಷೆ ಆಗುತ್ತದೆ ಎನ್ನುವ ಮಾಹಿತಿ ಬಿಚ್ಚಿಟ್ಟರು.
ಸಂಸತ್ತಿನ ಮೇಲೆ ಈ ಹಿಂದೆ ದಾಳಿ ನಡೆದ ದಿನದಂದೆ ಲೋಕಸಭೆ ಒಳಗೆ ಆಗುಂತಕರು ನುಗ್ಗಿರುವುದರ ಹಿಂದೆ ಉಗ್ರಗಾಮಿಗಳ,ನಕ್ಸಲ ಕೈವಾಡವಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಈ ಘಟನೆ ನಡೆದಾಗ ನಾನೂ ಪ್ರತ್ಯಕ್ಷದರ್ಶಿಯಾಗಿದ್ದೆ ಒಳಗೆ ನುಗ್ಗಿದವರನ್ನು ಹಿಡಿಯಲು ಸಂಸದ ನಳಿನ್ ಕುಮಾರ್ ಕಟೀಲ್,ಆಂಧ್ರದ ಸಂಸದ ಗೋರಂಟ್ಲ ಮಾಧವ್ ಹಾಗೂ ನಾನು ಸೇರಿದಂತೆ ಆಗುಂತಕರನ್ನು ಹಿಡಿದು ಬದ್ರತಾ ಸಿಬ್ಬಂದಿಗೆ ಒಪ್ಪಿಸಿದೆವು ಎಂದ ಅವರು ಲೋಕಸಭೆ ಭದ್ರತೆಯಲ್ಲಿ ಇನ್ನಷ್ಟು ಉನ್ನತ ಮಟ್ಟದ ಭದ್ರತಾ ವ್ಯವಸ್ಥೆಯ ಅಗತ್ಯವಿದೆ ಎಂದರು.
ಯಾರದೋ ಪ್ರೇರಣೆಗೋ ಒತ್ತಾಯಕ್ಕೋ ಹಣ ಕೊಡುತ್ತಾರೆ ಎಂಬ ಕಾರಣಕ್ಕೆ ಯುವಕರು ಇಂಥ ಕೃತ್ಯಕ್ಕೆ ಇಳಿಯಬಾರದು. ಅಕಸ್ಮಾತ್ ಭದ್ರತಾ ಸಿಬ್ಬಂದಿ ಆ ಯುವಕರತ್ತ ಶೂಟ್ ಮಾಡಿದ್ದರೆ ಏನಾಗುತಿತ್ತು ಅವರ ಬದಕು ಏನಾಗುತಿತ್ತು ಅವರ ಕುಟುಂಬಗಳ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದರು.
ಈ ಘಟನೆ ನಡೆದಾಗ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇದಿದ್ದರೆ ಆರೋಪಿಗಳನ್ನು ಬಂಧಿಸಲು ವರ್ಷಾನುಗಟ್ಟಲೆ ಸಮಯ ತೆಗೆದುಕೊಳ್ಳುತ್ತಿದ್ದರು.ಈಚೆಗೆ ವಿಧಾನಸಭೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಕುಳಿತು ಕಲಾಪ ವಿಕ್ಷಸಲಿಲ್ಲವೆ,ಆಗ ರಾಜ್ಯ ಸರ್ಕಾರ ಏನು ಮಾಡಿತು ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಪ್ರಧಾನಿನಾ?
ಪ್ರತಾಪಸಿಂಹ ಅವರನ್ನು ಬಂಧಿಸಿ ವಿಚಾರಣೆ ನಡೆಸಿ ಎನ್ನಲು ಸಿದ್ದರಾಮಯ್ಯ ಏನು ಪ್ರಧಾನಿ ಮಂತ್ರಿಯಾ ಅಥಾವ ಗೃಹ ಸಚಿವರ ಚೀನಾ, ಪಾಕಿಸ್ತಾನಕ್ಕೆ ದೇಶದ ಜಾಗ ಬಿಟ್ಟುಕೊಟ್ಟವರು ಕಾಂಗ್ರೆಸ್ನವರು ಒಂದು ಧರ್ಮದವರನ್ನು ಮೆಚ್ಚಿಸಲು ದೇಶವನ್ನೇ ಭಾಗ ಮಾಡುತ್ತಿದ್ದಾರೆ ಎಂದು ತೀವ್ರವಾಗಿ ಟೀಕಿಸಿದರು.
ಸಂಸದ ಪ್ರತಾಪಸಿಂಹ ವಿರುದ್ದ ಹುನಾರ
ಮೈಸೂರು ಸಂಸದ ಪ್ರತಾಪಸಿಂಹ ಅವರನ್ನು ಸೋಲಿಸಲು ಹುನ್ನಾರಗಳು ನಡೆಯುತ್ತಿದ್ದು, ಪ್ರತಾಪಸಿಂಹ ಅಪ್ಪಟ ದೇಶಪ್ರೇಮಿ.ಅವರ ದೇಶ ಪ್ರೇಮ ಪ್ರಶ್ನಾತೀತ ಎಂದರು.ಇನ್ಮೂಂದೆ ಯಾರೇ ಪಾಸ್ ಕೇಳಿದರು ಹಿಂದೆ ಮುಂದೆ ಆಲೋಚಿಸಬೇಕಾಗುತ್ತದೆ ಸಂಪೂರ್ಣವಾದ ಮಾಹಿತಿ ಪಡೆದುಕೊಂಡು ಕೊಡುತ್ತೇವೆ.
ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರು ಇಡುವುದಕ್ಕೆ ತಮ್ಮ ವಿರೋಧ ಇರುವುದಾಗಿ ಹೇಳಿದ ಅವರು ಆತನೊಬ್ಬ ಮತಾಂಧ ಸಾವಿರಾರು ಮಂದಿಯನ್ನು ಬಲಿ ತೆಗೆದುಕೊಂಡ ಕೊಲೆಗಾರ. ಅಂಥ ಕ್ರೂರಿಯ ಹೆಸರು ಇಟ್ಟರೆ ಉಗ್ರ ಹೋರಾಟ ನಡೆಸುವುದಾಗಿ ಹೇಳಿದರು.
ಸುಳ್ಳು ಗ್ಯಾರಂಟಿಗಳನ್ನು ನೀಡಿ ರಾಜ್ಯದಲ್ಲಿ ಆಡಳಿತಕ್ಕೆ ಬಂದ ಕಾಂಗ್ರೆಸ್ನವರಿಗೆ ತಾಕತ್ತಿದ್ದರೆ,ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಎದುರು ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲಿ ಎಂದು ಸವಾಲು ಹಾಕಿದರು.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Monday, April 28