ತುಮಕೂರು: ತುಮಕೂರು ಜಿಲ್ಲೆ ಕುಣಿಗಲ್ ನಲ್ಲಿ ನರರೂಪ ರಾಕ್ಷಸನಂತೆ ವರ್ತಿಸಿರುವ ಪತಿ ತನ್ನ ಪತ್ನಿಯನ್ನು ರಣ ಭೀಕರವಾಗಿ ಹತ್ಯೆಮಾಡಿದ್ದಾನೆ.
ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ತನ್ನ ಪತ್ನಿಯ ತಲೆ ಕಡಿದು ರುಂಡ-ಮುಂಡವನ್ನು ಬೇರ್ಪಡಿಸಿದ್ದೆ ಅಲ್ಲದೆ ಚರ್ಮ ಸುಲಿದು ರಾಕ್ಷಸನಂತೆ ವರ್ತಿಸಿದ್ದಾನೆ.
ದಾರುಣವಾಗಿ ಕೊಲೆಯಾದ ಮಹಿಳೆಯನ್ನು ಶಿವಮೊಗ್ಗ ಜಿಲ್ಲೆಯ ಸಾಗರ ಮೂಲದ ಪುಷ್ಪ (38) ಎಂದು ಗುರುತಿಸಲಾಗಿದ್ದು ಮೃತ ಮಹಿಳೆ ಕೆಲ ವರ್ಷದ ಹಿಂದೆ ಸುಗ್ಗನಹಳ್ಳಿ ಶಿವರಾಮ್ (45) ಎಂಬಾತನೊಂದಿಗೆ ಪ್ರೀತಿಸಿ ಮದುವೆಯಾಗಿದ್ದಳು,ಇಬ್ಬರು ಅಂತರ್ಜಾತಿ ಮದುವೆಯಾಗಿ ಜೀವನ ನಡೆಸುತ್ತಿದ್ದರು ಇವರಿಗೆ ಎಂಟು ವರ್ಷದ ಮಗನಿದ್ದಾನೆ.ಕಳೆದ ಕೆಲ ತಿಂಗಳ ಹಿಂದೆ ದಂಪತಿ ಹುಲಿಯೂರು ದುರ್ಗದ ಹೊಸಪೇಟೆಯ ಶಾಂತಿನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಪುಷ್ಪ ಕೆಲ ಮನೆಗಳಲ್ಲಿ ಮೆನ ಕೆಲಸ ಮಾಡುತ್ತಿದ್ದು, ಗಂಡ ಶಿವರಾಮ್ ಸ್ಥಳೀಯ ಸಾಮಿಲ್ನಲ್ಲಿ ಹೆಲ್ಪರ್ ಕೆಲಸ ಮಾಡುತ್ತಿದ್ದ.
ಪತಿ-ಪತ್ನಿ ನಡುವೆ ಹೊಂದಾವಣಿಕೆ ಇಲ್ಲದೆ ಜಗಳ ನಡೆಯುತ್ತಿತ್ತು, ಕೃತ್ಯ ನಡೆದ ದಿನ ರಾತ್ರಿ ಪತಿ ಊಟ ಬಡಿಸುವಂತೆ ಪತ್ನಿಗೆ ಹೇಳಿದ್ದು ಪತ್ನಿ ಯಾರೊಂದಿಗೊ ಫೋನಿನಲ್ಲಿ ಮಾತನಾಡುತ್ತ ಇರುವುದನ್ನು ಸಹಿಸದ ಪತಿ ಹಾಗು ಪತ್ನಿ ನಡುವೆ ಜಗಳ ನಡೆದು ಹತ್ಯೆ ಮಾಡಿದ್ದಾನೆ ಎನ್ನಲಾಗುತ್ತಿದೆ. ಬೆಳಗ್ಗೆ ಪತಿಯೆ ಸಾಮಿಲ್ ಮಾಲೀಕರ ಮಗ ಪ್ರದೀಪ್ ಅವರಿಗೆ ತಾನು ನಡೆಸಿದ ಕೃತ್ಯದ ಮಾಹಿತಿ ನೀಡಿದ್ದಾನೆ. ಅವರು ತಕ್ಷಣ ವಿಚಾರವನ್ನು ಪೊಲೀಸರ ಗಮನಕ್ಕೆ ತಂದಿದ್ದಾರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ದೃಶ್ಯ ಕಂಡು ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ದುರ್ಮಾರ್ಗ ಶಿವರಾಮ್ ತನ್ನ ಪತ್ನಿಯ ತಲೆ ಕತ್ತರಿಸಿ, ದೇಹವನ್ನು ತುಂಡು ತುಂಡು ಮಾಡಿ ಭೀಕರವಾಗಿ ಹತ್ಯೆ ಮಾಡಿದ್ದಾನೆ. ದೇಹದ ಪ್ರತಿಭಾಗವನ್ನು ಪ್ರತ್ಯಕವಾಗಿ ಕತ್ತರಿಸಿದ್ದಾನೆ ದೇಹದ ಎಲ್ಲಾ ಭಾಗದ ಚರ್ಮಾ ಸುಲಿದಿದ್ದಾನೆ ಚಾಕುವಿನಿಂದ ಎದೆ ಹಾಗು ಗುಪ್ತಾಂಗದ ಭಾಗಗಳನ್ನು ಬಗೆದುಹಾಕಿದ್ದಾನೆ ಕೋಠಡಿಯಲ್ಲಿ ರಕ್ತಧಾರಕಾರವಾಗಿ ಹರಿದಿದೆ ಕರಳು ಹಾಗು ಇನ್ನಿತರೆ ಭಾಗಗಳು ಚಲ್ಲಾಪಿಲ್ಲಿಯಾಗಿ ಬಿದ್ದಿವೆ ಇದನೆಲ್ಲಾ ನೋಡಿದ ಪೋಲಿಸರು ತತ್ತರಿಸಿಹೋಗಿದ್ದಾರೆ
ಸಿಪಿಐ ಎಂ.ನಾಯಕ್, ಡಿವೈಎಸ್ಪಿ ಓಂಪ್ರಕಾಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಘಟನೆ ನಡೆದಾಗ ಮಗ ನಿದ್ದೆಗೆ ಜಾರಿದ್ದ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಅದೆ ಊರಿನಲ್ಲಿರುವ ಪುಷ್ಪಳ ಸಂಬಂಧಿ ಶಿವಶಂಕರ್ ನೀಡಿದ ದೂರಿನ ಮೇರೆಗೆ ಹುಲಿಯೂರು ದುರ್ಗ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಅರೋಪಿಯನ್ನು ಹಾಗು ಮಗುವನ್ನು ವಶಕ್ಕೆ ಪಡೆದಿದ್ದು ನಂತರದಲ್ಲಿ ಮಗುವನ್ನು ಬಿಟ್ಟುಕಳಿಸಿದ್ದಾರೆ
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Monday, April 28