ನ್ಯೂಜ್ ಡೆಸ್ಕ್:ಪ್ರತಿ ಮನುಷ್ಯನ ಜೀವನದಲ್ಲಿ ಸ್ಮಾರ್ಟ್ ಫೋನ್ ಒಂದು ಭಾಗವಾಗಿಬಿಟ್ಟಿದೆ ಬೆಳಿಗ್ಗೆ ಹಾಸಿಗೆಯಿಂದ ಏಳುವಾಗಿನಿಂದ ರಾತ್ರಿ ಮಲಗುವತನಕ ಕೈಯಲ್ಲಿ ಸ್ಮಾರ್ಟ್ ಫೋನ್ ಇರಬೇಕು.
ಬಾತ್ ರೂಮ್ ಗೆ ಹೋದರೂ ಸರಿ ಫೋನ್ ತೆಗೆದುಕೊಂಡು ಹೋಗಿ ಕಮೋಡ್ ಮೇಲೆ ಕೂತು ಪೋನ್ ಬಳಸುವಂತವರಿದ್ದಾರೆ. ಕಮೋಡ್ ಮೇಲೆ ಕೂತು ಸಮಯ ಕಳೆದರೆ, ಹಲವಾರು ರಿತಿಯ ಸೋಂಕುಗಳಿಗೆ ಒಳಗಾಗುವ ಅಪಾಯ ಇದೆ ಎನ್ನುತ್ತಾರೆ ತಜ್ಞರು.ಶೌಚಾಲಯ ಸೇರಿದಂತೆ ಸ್ನಾನಗೃಹದಲ್ಲಿ 10 ನಿಮಿಷಕ್ಕಿಂತ ಹೆಚ್ಚಿನ ಹೊತ್ತು ಇರಬೇಡಿ ಏಕೆಂದರೆ ಒಂದೇ ಭಂಗಿಯಲ್ಲಿ ದೀರ್ಘಕಾಲ ಕುಳಿತರೆ, ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ ಎಂಬ ಎಚ್ಚರಿಕೆ ನೀಡಿರುತ್ತಾರೆ.
ಶೌಚಾಲಯದಲ್ಲಿ ನಮ್ಮ ದೇಹದ ಮೇಲೆ ಗಮನ ಹರಿಸುವುದು ಬಹಳ ಮುಖ್ಯ. ಏಕೆಂದರೆ ಟಾಯ್ಲೆಟ್ ಸೀಟಿನಲ್ಲಿ ಒಂದೇ ಭಂಗಿಯಲ್ಲಿ ದೀರ್ಘಕಾಲ ಕುಳಿತುಕೊಳ್ಳುವುದು ಸೊಂಟದ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ. ಇದು ಬೆನ್ನುನೋವಿನ ಸಮಸ್ಯೆಗೆ ಕಾರಣವಾಗುತ್ತದೆ ನೋವು ಹೆಚ್ಚಾದರೆ, ಇನ್ನಿತರೆ ಸಮಸ್ಯೆಗಳು ಕಾಡುತ್ತದೆ ಸಮರ್ಪಕವಾಗಿ ನಡೆಯಲು ಆಗದ ಸ್ಥಿತಿ ತಲುಪುವ ಅವಕಾಶ ಇರುತ್ತದೆ ಸ್ನಾಯುಗಳಲ್ಲಿ ಊತ ಮತ್ತು ಸೆಳೆತದ ಸಮಸ್ಯೆಗಳ ಉಂಟಾಗಬಹುದು ಎಂದು ಹೇಳುತ್ತಾರೆ.
ಭಾರತೀಯ ಟಾಯ್ಲೆಟ್ ಸೀಟಿನಲ್ಲಿ ಕುಳಿತುಕೊಳ್ಳುವುದು ಪಾದದ ಮೇಲಿನ ಒತ್ತಡವನ್ನು ಹೆಚ್ಚಿಸುತ್ತದೆ. ಇದು ಉರಿಯೂತದ ಸಮಸ್ಯೆಗಳು ಮತ್ತು ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಮತ್ತು ಈ ಒತ್ತಡವು ಫೈಲ್ ಗಳಿಗೆ ಕಾರಣವಾಗಬಹುದು. ಇನ್ನಿತರೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ. ಅದಕ್ಕಾಗಿಯೇ ಟಾಯ್ಲೆಟ್ ಸೀಟಿನಲ್ಲಿ ದೀರ್ಘಕಾಲ ಕುಳಿತುಕೊಳ್ಳುವುದು ಸೂಕ್ತವಲ್ಲ.
ಟಾಯ್ಲೆಟ್ ಸೀಟಿನ ಮೇಲೆ ಅಪಾಯಕಾರಿ ಬ್ಯಾಕ್ಟೀರಿಯಾಗಳಿವೆ. ನೀವು ಅಲ್ಲಿ ಮೊಬೈಲ್ ಬಳಸಿದರೆ. ಸೋಂಕಿನ ಅಪಾಯ ಹೆಚ್ಚು. ಅದಕ್ಕಾಗಿಯೇ ಫೋನ್ ಅನ್ನು ಶೌಚಾಲಯಕ್ಕೆ ತೆಗೆದುಕೊಂಡು ಹೋಗುವುದು ಸೂಕ್ತವಲ್ಲ.
Trending
- ಶ್ರೀನಿವಾಸಪುರ:ಕಸ ಹಾಕುವ ವಿಚಾರಕ್ಕೆ ಜಗಳ ಒಬ್ಬನ ಕೊಲೆ!
- ಶ್ರೀನಿವಾಸಪುರ:ವೇಶ್ಯಾವಾಟಿಕೆ ದಂಧೆ ಪೊಲೀಸ್ ದಾಳಿ, ಕಿಂಗ್ ಪಿನ್ ಮಹಿಳೆ ಬಂಧನ!
- ಶ್ರೀನಿವಾಸಪುರ:ವಾಹನ ಡಿಕ್ಕಿಯಾಗಿ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಪೇದೆ ನಿಧನ!
- ಶ್ರೀನಿವಾಸಪುರ:ಕರ್ನಾಟಕ ಬ್ಯಾಂಕ್ ಉದ್ಯೋಗಿ ಅಪಘಾತದಲ್ಲಿ ಸಾವು!
- ಲಂಚ ಪಡೆಯುತ್ತಿದ್ದ ಬಿಜೆಪಿ ಶಾಸಕ ಲೋಕಾಯುಕ್ತ ಬಲೆಗೆ!
- ಯಾವ ಐಟಿ-ಬಿಟಿ ಗೂ ಕಡಿಮೆ ಇಲ್ಲ,Dairy Farm ಆದಾಯ ಲಕ್ಷಗಟ್ಟಲೆ!
- ಬೆಂಗಳೂರಿನಲ್ಲಿ ಕುಬೇರರು ವಾಸಿಸುವ“ಬಿಲಿಯನೇರ್ಸ್ ಸ್ಟ್ರೀಟ್”ಎಲ್ಲಿದೆ?
- ಶ್ರೀನಿವಾಸಪುರ:ನೌಕರರ ಸಂಘದ ಹಾಲಿ-ಮಾಜಿ ಅಧ್ಯಕ್ಷರ ನಡುವೆ ಬಿದಿ ಜಗಳ!
Saturday, March 7



