ಶ್ರೀನಿವಾಸಪುರ:ಅಯ್ಯಪ್ಪ ಮಾಲಧಾರಿ ವಿದ್ಯಾರ್ಥಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಸರ್ಕಾರಿ ಶಾಲೆ ಶಿಕ್ಷಕನನ್ನು ಗ್ರಾಮಸ್ಥರು ತರಾಟೆಗೆ ತಗೆದುಕೊಂಡು ಪ್ರತಿಭಟನೆ ನಡೆಸಿದ ಘಟನೆ ತಾಲೂಕಿನ ಪುಲಗೂರಕೋಟೆ ಸರ್ಕಾರಿ ಉನ್ನತೀಕರಣ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ತಾಲೂಕಿನ ಪುಲಗೂರಕೋಟೆ ಸರ್ಕಾರಿ ಉನ್ನತೀಕರಣ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ8 ನೇ ತರಗತಿ ವಿಧ್ಯಾರ್ಥಿಗಳು ಇದ್ದು, ಶಾಲೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಅಯ್ಯಪ್ಪ ಮಾಲೆ ಧರಿಸಿ ಶಾಲೆಗೆ ಬಂದಿದ್ದಾರೆ ಇದನ್ನು ವಿರೋಧಿಸಿದ ಶಾಲಾ ಮುಖ್ಯ ಶಿಕ್ಷಕ ರವಿಕುಮಾರ್ ಮಾಲಧಾರಿ ವಿದ್ಯಾರ್ಥಿಗಳನ್ನು ಕರೆದು ನನ್ನ ಅನುಮತಿ ಪಡೆಯದೇ ಅಯ್ಯಪ್ಪ ಮಾಲೆ ಧರಿಸಿದ್ದೀರಾ ಎಂದು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ ಎಂದು ವಿದ್ಯಾರ್ಥಿಗಳು ತಮ್ಮ ಪೋಷಕರ ಬಳಿ ಹೇಳಿಕೊಂಡಿದ್ದಾರೆ.ಈ ಬಗ್ಗೆ ಪೋಷಕರಾದ ಮಧುಸೂದನ, ಆಂಜಪ್ಪ ಹಾಗು ಗ್ರಾಮಸ್ಥರು ಶಾಲೆ ಬಳಿ ತೆರಳಿ ಮುಖ್ಯ ಶಿಕ್ಷಕ ರವಿಕುಮಾರ್ ಅವರನ್ನು ತೀವ್ರವಾಗಿ ತರಾಟೆಗೆ ತಗೆದುಕೊಂಡಿದ್ದಾರೆ
ಶಿಕ್ಷಕ ಉದ್ಧಟತನ ವರ್ತನೆ ದೂರು
ಪೋಷಕರು ಹೇಳುವಂತೆ ನಾವು ಪ್ರತಿ ವರ್ಷ ಅಯ್ಯಪ್ಪ ದರ್ಶನಕ್ಕೆ ಶಬರಿಮಲೆಗೆ ಹೋಗಲು ಅಯ್ಯಪ್ಪ ಮಾಲೆ ಧರಿಸುತ್ತೆವೆ ಮಕ್ಕಳಿಗೆ ಮಾಲೆ ಹಾಕಿಸುತ್ತೇವೆ ಮಕ್ಕಳು ಎಂದಿನಂತೆ ಶಾಲೆಗೆ ಹೋಗುತ್ತಾರೆ ಆದರೆ ಶಬರಿಮಲೆ ಯಾತ್ರೆಗೆ ಹೋಗುವ ಸಂದರ್ಭದಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗುತ್ತೇವೆ ಇದಕ್ಕಾಗಿ ಶಾಲೆಯಲ್ಲಿ ರಜೆಗಾಗಿ ಅನುಮತಿ ಪಡೆಯುತ್ತೇವೆ ಆದರೂ ಸಹ ಶಾಲೆಯ ಮುಖ್ಯ ಶಿಕ್ಷಕ ನಮ್ಮ ಮಕ್ಕಳ ಮೇಲೆ ಧೌರ್ಜನ್ಯವಾಗಿ ವರ್ತಿಸಿ ಅವಾಚ್ಯ ಪದಗಳಿಂದ ಬೈಯ್ಯುವುದು ಯಾವ ನ್ಯಾಯ? ಮುಖ್ಯ ಶಿಕ್ಷಕ ರವಿಕುಮಾರ್ ಅವರದು ಉದ್ಧಟತನದ ಧೋರಣೆ ಅವರ ವಿರುದ್ದ ಕ್ರಮ ಜರುಗಿಸುವಂತೆ ಒತ್ತಾಯಿಸಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು ಈ ಹಿನ್ನಲೆಯಲ್ಲಿ ಸ್ಥಳಕ್ಕೆ ಶಿಕ್ಷಣ ಇಲಾಖೆ ಸಿಆರ್ಪಿ ಶಿವರಾಘವರೆಡ್ಡಿ ಆಗಮಿಸಿ ಘಟನೆ ವಿವರ ಪಡೆದು ಮುಖ್ಯ ಶಿಕ್ಷಕ ರವಿಕುಮಾರ್ ನಡೆದ ಘಟನೆಗೆ ಕ್ಷಮಾಪಣೆ ಹೇಳುವಂತೆ ಸೂಚಿಸಿ ಘಟನೆಗೆ ಸುಖಾಂತ್ಯ ಹಾಡಿದರು.
Trending
- ಶ್ರೀನಿವಾಸಪುರ:ಕಸ ಹಾಕುವ ವಿಚಾರಕ್ಕೆ ಜಗಳ ಒಬ್ಬನ ಕೊಲೆ!
- ಶ್ರೀನಿವಾಸಪುರ:ವೇಶ್ಯಾವಾಟಿಕೆ ದಂಧೆ ಪೊಲೀಸ್ ದಾಳಿ, ಕಿಂಗ್ ಪಿನ್ ಮಹಿಳೆ ಬಂಧನ!
- ಶ್ರೀನಿವಾಸಪುರ:ವಾಹನ ಡಿಕ್ಕಿಯಾಗಿ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಪೇದೆ ನಿಧನ!
- ಶ್ರೀನಿವಾಸಪುರ:ಕರ್ನಾಟಕ ಬ್ಯಾಂಕ್ ಉದ್ಯೋಗಿ ಅಪಘಾತದಲ್ಲಿ ಸಾವು!
- ಲಂಚ ಪಡೆಯುತ್ತಿದ್ದ ಬಿಜೆಪಿ ಶಾಸಕ ಲೋಕಾಯುಕ್ತ ಬಲೆಗೆ!
- ಯಾವ ಐಟಿ-ಬಿಟಿ ಗೂ ಕಡಿಮೆ ಇಲ್ಲ,Dairy Farm ಆದಾಯ ಲಕ್ಷಗಟ್ಟಲೆ!
- ಬೆಂಗಳೂರಿನಲ್ಲಿ ಕುಬೇರರು ವಾಸಿಸುವ“ಬಿಲಿಯನೇರ್ಸ್ ಸ್ಟ್ರೀಟ್”ಎಲ್ಲಿದೆ?
- ಶ್ರೀನಿವಾಸಪುರ:ನೌಕರರ ಸಂಘದ ಹಾಲಿ-ಮಾಜಿ ಅಧ್ಯಕ್ಷರ ನಡುವೆ ಬಿದಿ ಜಗಳ!
Saturday, March 7



