ಶ್ರೀನಿವಾಸಪುರ: ಯಲ್ದೂರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಗಳಾಂಭ ವರ್ಗಾವಣೆಗೆ ಅಗ್ರಹಿಸಿ ಗ್ರಾಮ ಪಂಚಾಯಿತಿಯ ಸದಸ್ಯರು ಹಾಗು ಸಾರ್ವಜನಿಕರು ಎರಡು ದಿನಗಳ ಕಾಲ ನಡೆಸಿದ ಪ್ರತಿಭಟನೆ ಹಿನ್ನಲೆಯಲ್ಲಿ ಅವರನ್ನು ವರ್ಗಾವಣೆ ಮಾಡಲು ಮೇಲಧಿಕಾರಿಗಳಿಗೆ ಶಿಫಾರಸ್ಸು ಮಾಡುವುದಾಗಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಎ.ಎನ್ ರವಿ ಭರವಸೆ ನೀಡಿರುತ್ತಾರೆ.
ಶ್ರೀನಿವಾಸಪುರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರವಾಗಿ ಭೌಗೋಳಿಕವಾಗಿ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಗುರುತಿಸಿರುವ ಯಲ್ದೂರು ಗ್ರಾಮ ಪಂಚಾಯಿತಿ, ಅಲ್ಲಿನ ಪಂಚಾಯಿತಿ ಸದಸ್ಯರು ಹೇಳುವಂತೆ ಪಂಚಾಯಿತಿ ಅಭಿವೃದ್ದಿ ಅಧಿಕಾರಿಯಾಗಿರುವ ಮಂಗಳಾಂಭ ವರ್ಗಾವಣೆಯಾಗಿ ಬಂದಾಗಿನಿಂದಲೂ ಪಂಚಾಯಿತಿ ಸದಸ್ಯರೊಂದಿಗೆ ಸೌಹಾರ್ದತೆ ಕಾಪಾಡಿಕೊಳ್ಳದ ಕಾರಣ ಪಂಚಾಯಿತಿ ಅಭಿವೃದ್ಧಿ ವಿಚಾರವಾಗಿ ನಿತ್ಯವೂ ಕಿತ್ತಾಟ ಸಾಮಾನ್ಯವಾಗಿತ್ತು ಇದರಿಂದ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಸಮಸ್ಯಯಾಗಿತ್ತು ಈಗ ಇದು ಪಂಚಾಯಿತಿ ಅಭಿವೃದ್ಧಿ ವರ್ಗಾವಣೆಯಾದರೆ ಮಾತ್ರ ಸಮಸ್ಯೆ ನೀವಾರಣೆಯಾಗುತ್ತದೆ ಎಂದು ಸಾರ್ವಜನಿಕರು ಅಗ್ರಹಿಸುವವರಿಗೆ ಬಂದು ತಲುಪಿದೆ.
ಕಳೆದ ಎರಡು ದಿನಗಳಿಂದ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾದ್ಯಕ್ಷ ಹಾಗು ಸದಸ್ಯರು ಮತ್ತು ಸಾರ್ವಜನಿಕರು ಪಂಚಾಯಿತಿ ಕಚೇರಿ ಮುಂಬಾಗದಲ್ಲಿ ಪೆಂಡಾಲ್ ಹಾಕಿಕೊಂಡು ಪಟ್ಟುಬಿಡದೆ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು
ಗ್ರಾ.ಪಂ ಉಪಾದ್ಯಕ್ಷ ಮೋಹನ್ ಬಾಬು ಮಾತನಾಡಿ ಪಿಡಿಓ ಮಂಗಳಾಂಭ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಸ್ಪಂದಿಸುತ್ತಿಲ್ಲ ಪಂಚಾಯಿತಿಯಲ್ಲಿ ಅಭಿವೃದ್ದಿ ಎಂಬುದು ಕುಂಟಿತವಾಗಿದೆ, ಗ್ರಾಮಪಂಚಾಯಿತಿಯ ಮಾಸಿಕ ಸಭೆಯಲ್ಲಿ ಠರಾವು ಮಾಡಿರುವ ಯಾವುದೇ ಕೆಲಸಗಳನ್ನು ಪಿಡಿಓ ಕಾರ್ಯಗತ ಮಾಡದೆ ನಿರ್ಲಕ್ಷಿಸಿ ವಿತಂಡವಾಗಿ ವರ್ತಿಸುತ್ತಾರೆ ಅವರನ್ನು ವರ್ಗಾವಣೆ ಮಾಡುವಂತೆ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಶಿವಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದವು ಇದು ಕಾರ್ಯಗತ ವಾಗದ ಹಿನ್ನಲೆಯಲ್ಲಿ ಅನಿವಾರ್ಯವಾಗಿ ಪ್ರತಿಭಟನೆ ನಡೆಸಿ ಮುಷ್ಕರಕ್ಕೆ ಕೂರಬೇಕಾಯಿತು ಎಂದಿರುತ್ತಾರೆ.
ಮುಷ್ಕರವನ್ನ ಹಿಂಪಡೆಯಲು ಇವೊ ಮನವಿ
ಮುಷ್ಕರ ನಿರತ ಸ್ಥಳಕ್ಕೆ ಆಗಮಿಸಿ ಸಾರ್ವಜನಿಕರು ನೀಡಿದ ಮನವಿ ಸ್ವೀಕರಿಸಿ ಆಭಿವೃದ್ಧಿ ಅಧಿಕಾರಿ ವರ್ಗಾವಣೆ ಕುರಿತಾಗಿ ಜಿಲ್ಲಾಪಂಚಾಯಿತಿ ಅಧಿಕಾರಿಗಳಿ ಶಿಫಾರಸ್ಸು ಮಾಡುವುದಾಗಿ ಹೇಳಿದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಎ.ಎನ್ ರವಿ ಮುಷ್ಕರವನ್ನ ಹಿಂಪಡೆಯಲು ಮನವಿ ಮಾಡಿದರು.
ವರ್ಗಾವಣೆ ಮಾಡುವಂತೆ ಅಭಿವೃದ್ಧಿ ಅಧಿಕಾರಿ ಮಂಗಳಾಂಭ ಮನವಿ
ಯಲ್ದೂರು ಪಂಚಾಯಿತಿಯಲ್ಲಿ ಕೆಲಸ ಮಾಡಲು ನನ್ನ ಕೈಯಲ್ಲಿ ಸಾಧ್ಯವಾತ್ತಿಲ್ಲ ನನ್ನನ್ನು ಬೇರೆಡೆಗೆ ವರ್ಗಾವಣೆ ಮಾಡುವಂತೆ ಈಗಾಗಲೆ ಮನವಿ ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸಿಪಿಐ ಗೊರವನಕೊಳ್ಳ, ಗ್ರಾ.ಪಂ ಅಧ್ಯಕ್ಷಿಣಿ ವಿಜಯಲಲಿತ ಸದಸ್ಯರಾದ ಗ್ಯಾಸ್ ರಾಜು, ಶಿವಶಂಕರ್, ಎಸ್.ಟಿ ನಾರಾಯಣಸ್ವಾಮಿ,ನಾರಾಯಣಸ್ವಾಮಿ, ರಮೇಶ್, ಸೀತಮ್ಮ, ಮೀನಾಕ್ಷಮ್ಮ, ಎಸ್.ವಿ ಸುಜಾತ, ಶಶಿಕಳಾ, ಫರೀದಾಬೇಗಂ, ಟಿ.ವಿ ರೂಪಾ, ಆನಂದ್, ಮುಖಂಡರಾದ ಮಣಿ, ಪದ್ಮನಾಬ್, ಹೊಸಹಳ್ಳಿ ನಾರಾಯಣಸ್ವಾಮಿ ಹೊಗಳಗೆರೆ ಚಂದ್ರು, ಆಂಜಿ, ಮುಂತಾದವರು ಇದ್ದರು.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Sunday, April 27