ಶ್ರೀನಿವಾಸಪುರ:ದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ 2047 ಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮುಂಬೈ ಕೇಂದ್ರಿ ಕೃತವಾಗಿ ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ ಕುರಿತಂತೆ ನೂತನ ಆರ್ಥಿಕ ನೀತಿ ನಿಯಮಗಳನ್ನು ಪ್ರಸ್ತುತಪಡಿಸುತ್ತಾರೆ.ದಿನ ಬೆಳೆಗ್ಗೆ ಭಾರತದ ರಸ್ತೆಗಳ ಅಭಿವೃದ್ಧಿಯದೆ ಮಾತು ಈಗೆಲ್ಲ ರಾಷ್ಟ್ರೀಯ ಹೆದ್ದಾರಿ 4 ಪಥ ಅಥಾವ 6 ಪಥದ ಹೆದ್ದಾರಿಗಳದೆ ಪಾರುಪತ್ಯ,ಆದರೆ ಗ್ರಾಮೀಣ ರಸ್ತೆ ಕೊಂಚವೂ ಸುಧಾರಣೆಯಾಗಿಲ್ಲ ಎನ್ನಬಹುದು ಮೂಲಭೂತ ಸೌಕರ್ಯಗಳಲ್ಲಿ ಒಂದಾದ ರಸ್ತೆ ವ್ಯವಸ್ಥೆ ಕುರಿತಾಗಿ ಆಳುವರ ಮನಸ್ಸಿಗೆ ಇನ್ನೂ ತಟ್ಟಿಲ್ಲ, ಆಧುನಿಕತೆ ಹಳ್ಳಿ ಹಳ್ಳಿಗಳನ್ನೂ ತಲುಪುತ್ತಿದೆ ಗುಣಮಟ್ಟದ ರಸ್ತೆಗಳು ಹಳ್ಳಿಗಳನ್ನು ತಲುಪಿಲ್ಲ ಎನ್ನಬಹುದಾಗಿದೆ.ಇದಕ್ಕೆ ಕಾರಣ ಸಮರ್ಪಕ ರಸ್ತೆಗಳ ಕೊರತೆ ಎದ್ದು ಕಾಣುತ್ತಿದೆ ಈಗಿರುವ ರಸ್ತೆಗಳು ನಿರ್ವಹಣೆ ಇಲ್ಲದೆ ಅಧ್ವಾನ ಸ್ಥಿತಿಗೆ ತಲುಪಿವೆ.ಇದರಿಂದ ತುರ್ತು ಸನ್ನಿವೇಶಗಳಲ್ಲಿ ಜನ ಸಾಮಾನ್ಯರ ಪಾಡು ಹೇಳತೀರದು.
ಶ್ರೀನಿವಾಸಪುರ-ಹೋಳೂರು ರಸ್ತೆ ಇಂದು ನಿನ್ನೆಯದಲ್ಲ ತುಂಬಾ ಹಳೆಯ ರಸ್ತೆಯಾಗಿದ್ದು ಶ್ರೀನಿವಾಸಪುರ-ಕೋಲಾರ ಎರಡು ತಾಲೂಕುಗಳ ಹತ್ತಾರು ಹಳ್ಳಿಗಳಿಗೆ ಕೊಂಡಿಯಂತೆ ಸಂಪರ್ಕದ ಈ ರಸ್ತೆ ಹೋಳೂರು ಭಾಗದ ಜನತೆ ಶ್ರೀನಿವಾಸಪುರಕ್ಕೆ ವಾಣಿಜ್ಯ ವ್ಯವಹಾರಗಳಿಗೆ ಬರಲು ಬಳಸುವಂತ ರಸ್ತೆಯಾಗಿದೆ ಈ ರಸ್ತೆಯಲ್ಲಿ ಶ್ರೀನಿವಾಸಪುರ ತಾಲೂಕಿನ ಪಡತಿಮ್ಮನಹಳ್ಳಿ ಕೊಡಿಚರವು ಗುಂಡಮನತ್ತ ಗ್ರಾಮಗಳ ಜನ ಶ್ರೀನಿವಾಸಪುರ ಪೇಟೆ ವ್ಯವಹಾರಕ್ಕೆ ಇದೆ ರಸ್ತೆಯಲ್ಲಿ ಬರುತ್ತಾರೆ.ಈ ರಸ್ತೆ ಕೋಲಾರದಲ್ಲಿ ಹಾದು ಹೋಗಿರುವ Bengaluru-Kolar NH-75 ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವಂತ ರಸ್ತೆಯಾಗಿದ್ದು ಇಂದು ಈ ರಸ್ತೆಯಲ್ಲಿ ವಾಹನ ಸಂಚಾರವಿರಲಿ, ನಡೆಯಲೂ ಸಾಧ್ಯವಾಗದ ಸ್ಥಿತಿಯಲ್ಲಿ ದೊಡ್ದ ದೊಡ್ಡ ಹಳ್ಳಗಳು ಬಿದ್ದು ರಸ್ತೆ ಸಂಪೂರ್ಣವಾಗಿ ಹಾಳಾಗಿದೆ,ಗುಂಡಮನತ್ತ ಗ್ರಾಮದ ನಡು ಊರಿನಲ್ಲಿ ರಸ್ತೆಯಲ್ಲಿ ಹಳ್ಳಗಳು ಬಿದ್ದಿದೆ ಜೊತೆಗೆ ಹಳ್ಳದಲ್ಲಿ ಮಳೆ ನೀರು ನಿಂತು ಕೊಳಚೆ ನೀರಾಗಿ ಸಾಂಕ್ರಾಮಿಕ ರೋಗಗಳು ಹರಡಲು ಕಾರಣವಾಗಿದೆ ಎನ್ನುತ್ತಾರೆ ಗ್ರಾಮಸ್ಥರು , ಅಕಾಲಿಕ ಮಳೆಯಿಂದ ರಸ್ತೆಯ ಡಾಂಬರು ಕಾಣದಂತೆ ಮಣ್ಣಿನ ಬುರದೆ ರಸ್ತೆಯನ್ನು ಆವರಿಸಿಕೊಂಡಿದೆ ಈ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರು ಹರಸಾಹಸ ಪಟ್ಟು ವಾಹನ ನಡೆಸಬೇಕು ಇನ್ನೂ ನಾಲ್ಕು ಚಕ್ರವಾಹನಗಳು ಕನಿಷ್ಟ ಒಂದು ಅಡಿ ಆಳದ ಹಳ್ಳ ಕೊಳ್ಳಕ್ಕೆ ಇಳಿದು ಮತ್ತೆ ರಸ್ತೆ ಹತ್ತಿ ಸಾಹಸ ಪಟ್ಟು ವಾಹನ ಚಲಾಯಿಸಬೇಕಾದ ಕಷ್ಟ ಎನ್ನುವಷ್ಟು ರಸ್ತೆ ನಾಶವಾಗಿದೆ.ಈ ಭಾಗದ ಹಳ್ಳಿಗಳಲ್ಲಿ ಯಾರಾದರೂ ತೀವ್ರ ಅನಾರೋಗ್ಯಕ್ಕೀಡಾಗಿ ತುರ್ತು ಪರಿಸ್ಥಿತಿ ಉಂಟಾದರೆ ಅಂಬುಲೆನ್ಸ್ ವಾಹನ ಸಂಚಾರ ಸಾಧ್ಯವಿಲ್ಲ ಎನ್ನುತ್ತಾರೆ ಗ್ರಾಮಸ್ಥರು.
ರಸ್ತೆಗಳು ಗುಣಮಟ್ಟದಲ್ಲಿ ಉತ್ತಮವಾಗಿದ್ದರೆ ಆ ಭಾಗದಲ್ಲಿ ವಾಣಿಜ್ಯ ಕೃಷಿ ಕೈಗಾರಿಗೆ ಹೀಗೆ ಹತ್ತಾರು ರೀತಿಯಲ್ಲಿ ಅಭಿವೃದ್ಧಿಗೂ ಸಹಕಾರಿಯಾಗುತ್ತದೆ ರಸ್ತೆ ಮಾರ್ಗದ ಗ್ರಾಮಗಳು ಸಾಮಾಜಿಕವಾಗಿ ಆರ್ಥಿಕವಾಗಿ ಗುಣಮಟ್ಟದಲ್ಲಿ ಅಭಿವೃದ್ಧಿ ಕಾಣುತ್ತದೆ ಎನ್ನುವುದು ವಾಣಿಜ್ಯೊದ್ಯಮಿಗಳ ಮಾತು.

ಶ್ರೀನಿವಾಸಪುರ-ಕೋಲಾರ ತಾಲೂಕುಗಳ ಹತ್ತಾರು ಹಳ್ಳಿಗಳ ಜನರಿಗೆ ಅನಕೂಲವಾಗುವಂತ ಕೊಡಿಚರವು ರಸ್ತೆ ನಿರ್ಮಾಣಕ್ಕೆ ಅಡ್ಡಿ ಆತಂಕಗಳು ಇತ್ತು ಕಾನೂನು ಬದ್ದವಾಗಿ ತೆರವು ಮಾಡಿಸಲಾಗಿದೆ ಶೀಘ್ರದಲ್ಲಿ PMGSY Pradhan Mantri Gram Sadak Yojana ಯೊಜನೆ ಅಡಿಯಲ್ಲಿ ಗುದ್ದಲಿ ಮಾಡಲಾಗುತ್ತದೆ ಎನ್ನುತ್ತಾರೆ ಶ್ರೀನಿವಾಸಪುರದ ಶಾಸಕ ವೆಂಕಟಶಿವಾರೆಡ್ಡಿ



