ಶ್ರೀನಿವಾಸಪುರ: ಅರಣ್ಯ ಒತ್ತುವರಿ ವಿಚಾರ ದಿನಕ್ಕೊಂದು ತಿರುವು ಪಡೆಯುತ್ತಿದೆ ತೆರವು ವಿರೋಧಿಸಿ ಸಂಸದ ಮುನಿಸ್ವಾಮಿ ಪ್ರಚೋದನೆ ಮಾತುಗಳ ನಂತರ ನರೆದಿದ್ದ ಜನತೆ ಆವೇಶಭರಿತರಾಗಿ ವರ್ತಿಸಿದ ಪರಿಣಾಮ ತೆರವು ಕಾರ್ಯದಲ್ಲಿದ್ದ ಅರಣ್ಯ ಇಲಾಖೆ ಜೆಸಿಬಿಗಳ ಮೇಲೆ ಶನಿವಾರ ಕಲ್ಲು ತೂರಾಟ ನಡೆಯಿತು. ನಂತರದಲ್ಲಿ ಸ್ಥಳದಲ್ಲಿ ಪ್ರಕ್ಷುಬ್ದತೆ ಉಂಟಾಗಿ ಪೋಲಿಸರು ಮದ್ಯ ಪ್ರವೇಶಿಸಿ ಕಾರ್ಯಚರಣೆ ನಡೆಸಿ ಪರಿಸ್ಥಿತಿ ಶಾಂತಗೊಳಿಸಿದ್ದರು. ಶನಿವಾರ ಸಂಜೆ ಅರಣ್ಯ ಇಲಾಖೆ ಹಾಗು ಜೆಸಿಬಿ ಮಾಲಿಕರು ಚಾಲಕರು ನೀಡಿದ ದೂರಿನನ್ವಯ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿಯಲ್ಲಿ ಹಲವರು ಪೋಲಿಸರ ಅಥಿತಿಗಳಾಗಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ಆವೇಶದಿಂದ ವರ್ತಿಸಿದ ಜನ ಬಚಾವಾಗಿದ್ದರೆ, ತಮಾಷೆ ನೊಡಲು ಬಂದಂತವರು ಪೋಲಿಸರ ವಶದಲ್ಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ರಾಜ್ಯ ಬಿಜೆಪಿ ಮುಖಂಡರು ಬರ್ತಾರೆ ಎಂಬ ರಾಜಕೀಯ ಹೈಡ್ರಾಮ
ತೆರವು ವಿರೋಧ ಕಾರ್ಯಕ್ರಮದ ಬೆಳವಣಿಗೆಯ ನಂತರ ನಡೆದಂತ ರಾತ್ರಿ ಕಾರ್ಯಚರಣೆಯಲ್ಲಿ ಹಲವರ ಬಂಧನಕ್ಕೆ ಕಾರಣವಾಗಿ ಇದನ್ನು ವಿರೋಧಿ ಅರಣ್ಯ ಸಂತ್ರಸ್ತರನ್ನು ಸಂತೈಸಲು ರಾಜ್ಯ ಬಿಜೆಪಿ ಮುಖಂಡರಾದ ಮಾಜಿ ಕಂದಾಯ ಮಂತ್ರಿ ಆರ್.ಆಶೋಕ್ ಸೇರಿದಂತೆ ಹಲವರು ಶ್ರೀನಿವಾಸಪುರಕ್ಕೆ ಆಗಮಿಸುತ್ತಾರೆ ಎಂಬೆಲ್ಲಾ ಸುದ್ದಿ ಹರಿದಾಡಿತ್ತಾದರೂ ಕೊನೆಗೂ ಯಾರು ಬಾರದೆ ಮತ್ತೆ ಭಾನುವಾರ ಸಂಸದ ಮುನಿಸ್ವಾಮಿ,ಶಿಡ್ಲಘಟ್ಟದ ಮಾಜಿ ಶಾಸಕ ರಾಜಣ್ಣ,ಸೀಕಲ್ ರಾಮಚಂದ್ರೇಗೌಡ ಸೇರಿದಂತೆ ಹಲವರು ಶ್ರೀನಿವಾಸಪುರಕ್ಕೆ ಆಗಮಿಸಿ,ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿ ಪ್ರಾಣಪಯದಿಂದ ಬದುಕುಳಿದು ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಾಲೂಕಿನ ಪಾಳ್ಯ ಗ್ರಾಮದ ಕಾಂಗ್ರೆಸ್ ಮುಖಂಡ ಗೋಪಾಲರೆಡ್ಡಿಯವರ ಪತ್ನಿ ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷೆ ಶ್ಯಾಮಲಮ್ಮ ಹಾಗು ರೋಣೂರು ಹೋಬಳಿಯ ನಾರಮಾಕಲಹಳ್ಳಿ ಗ್ರಾಮದ ಪಾರ್ವತಮ್ಮ ರೈತ ಮಹಿಳೆಯರನ್ನು ಮಾತನಾಡಿದ ಅವರು ನೇರವಾಗಿ ಪತ್ರಕರ್ತರ ಮುಂದೆ ನಿಂತು ಸಿದ್ದರಾಮಯ್ಯ ಸರ್ಕಾರದ ವಿರುದ್ದ ಗುಡುಗಿದರು ನಂತರದಲ್ಲಿ ಆಸ್ಪತ್ರೆಯಲ್ಲೆ ಪೋಲಿಸರೊಂದಿಗೆ ಮಾತುಕತೆ ನಡೆಸಿದ ಸಂಸದ ಮುನಿಸ್ವಾಮಿ ಹೋರಟರೆ ಇತ್ತ ಕೋಲಾರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ನಾರಯಣ್ ಪತ್ರಕರ್ತರೊಂದಿಗೆ ಮಾತನಾಡಿ ಸಂಸದ ಮುನಿಸ್ವಾಮಿ ಮೇಲೆ ಶ್ರೀನಿವಾಸಪುರ ಠಾಣೆಯಲ್ಲಿ ಎರಡು ದೂರುಗಳು ದಾಖಲಾಗಿದ್ದು ಇನ್ನೊಂದಷ್ಟು ಜನರ ವಿರುದ್ದ ಪ್ರಕರಣ ದಾಖಲಾಗಿದೆ ಈಗ 15 ಜನರನ್ನು ಬಂಧಿಸಿದ್ದು ಉಳಿದವರನ್ನು ಬಂಧಿಸಲಾಗುವುದು ಎಂದು ತಿಳಿಸಿದರು.
ವಿಷ ಸೇವಿಸಿ ಪ್ರಾಣಾಪಯದಿಂದ ಪಾರಾಗಿ ಚಿಕಿತ್ಸೆ ಪಡೆಯುತ್ತಿರುವ ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷೆ ಶ್ಯಾಮಲಮ್ಮ ವಿರುದ್ದವೂ ಪೋಲಿಸ್ ಪ್ರಕರಣ ದಾಖಲಾಗಿದೆ.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Sunday, April 27