ಚಿಂತಾಮಣಿ:ಶ್ರೀನಿವಾಸಪುರದ ಕಟ್ಟೆಮನೆ ಶೆಟ್ಟಿಯಜಮಾನ್ರ ಕುಟುಂಬಕ್ಕೆ ತನ್ನದೆ ಅದ ಇತಿಹಾಸ ಇದೆ ಪ್ರಭಲವಾಗಿ ಬ್ರಿಟಿಷ್ ಆಳ್ವಿಕೆಯನ್ನು ವಿರೋಧಿಸುತ್ತ ತಮ್ಮದೆ ಆದ ವ್ಯಾಪಾರ ವಹಿವಾಟು ನಡೆಸಿಕೊಂಡು ಬರುವುದರ ಜೊತೆಗೆ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿದ್ದ ಶೆಟ್ಟಿಯಜಮಾನ್ರ ಕುಟುಂಬ ಶ್ರೀನಿವಾಸಪುರ ಪಟ್ಟಣದ ಆರಂಭಂದಿದಲೂ ಇಲ್ಲಿನ ವಾಸಿಗಳಾಗಿದ್ದು ಈಗ ಬದುಕು ಆರಿಸಿ ದೇಶ-ವಿದೇಶಗಳಲ್ಲಿ ನೆಲೆಸಿದ್ದಾರೆ.
ಆ ಕುಟುಂಬದ ಎಲ್ಲಾ ಸದಸ್ಯರು ಒಂದಡೆ ಕೂಡಿದ್ದು, ಚಿಂತಾಮಣಿಯ ಅಲಂಬಗಿರಿಯ ಇತಿಹಾಸ ಪ್ರಸಿದ್ಧ ಶ್ರೀ ಕಲ್ಕಿವೆಂಕಟರಮಣಸ್ವಾಮಿ ದೇವಾಲಯದಲ್ಲಿ ಇಲ್ಲಿ ಕಟ್ಟೆಮನೆ ಶೆಟ್ಟಿಯಜಮಾನ್ರ ಕುಟುಂಬದವರಿಂದ ಶ್ರೀ ಶ್ರೀನಿವಾಸಕಲ್ಯಾಣೋತ್ಸವ ಕಾರ್ಯಕ್ರಮ ನಡೆಯಿತು.ಕಲ್ಯಾಣೋತ್ಸವದ ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ವೇದಪಂಡಿತ ಶ್ರೀನಿವಾಸಚಾರ್ಯರು ಕಲ್ಯಾಣೋತ್ಸವದ ಪರಿಕಲ್ಪನೆ ಕುರಿತಂತೆ ವಿವರಿಸಿ ಸಪ್ತಪದಿ ಹಾಗು ವಿವಾಹದ ಮಹತ್ವ ಕುರಿತಾಗಿ ವಿವರಿಸಿದರು.ಶೆಟ್ಟಿಯಜಮಾನ್ರ ಕುಟುಂಬದವರು ಹಾಗು ವಿವಿಧಡೆಯಿಂದ ಆಗಮಿಸಿದ್ದ ಭಕ್ತಾದಿಗಳು ಕಲ್ಯಾಣೋತ್ಸವವನ್ನು ಕಣ್ತುಂಬ ನೋಡಿ ಪುನೀತರಾದರು. ಈ ಸಂದರ್ಭದಲ್ಲಿ ಶೆಟ್ಟಿಯಜಮಾನ್ರ ಕುಟುಂಬದ ಹಿರಿಯ ಸದಸ್ಯರಾದ ಕಲ್ಯಾಣೋತ್ಸವದ ಪ್ರಮುಖ ರೂವಾರಿ ನಿವೃತ್ತ ಬ್ಯಾಂಕ್ ಅಧಿಕಾರಿ ರಘುಪ್ರಕಾಶ್,ಹಿರಿಯ ಸದಸ್ಯ ಕೇಂದ್ರ ಸರ್ಕಾರದ ಅಂಕಿಅಂಶಗಳ ನಿವೃತ್ತ ಅಧಿಕಾರಿ ತಿಪ್ಪಶೆಟ್ಟಿ,ಸ್ವಾತಂತ್ಯ ಹೋರಾಟಗಾರ ಚಂದ್ರಯ್ಯಶೆಟ್ಟಿ ಪತ್ನಿ ವನಜಾಕ್ಷಮ್ಮ,ನಿವೃತ್ತ ತಹಶೀಲ್ದಾರ್ ರಾಮನಾಥ್,ಕ್ರೀಡಾಪಟು ಹಾಗು ನಿವೃತ್ತ ಪೋಲಿಸ್ ಇನ್ಸಪೇಕ್ಟರ್ ವೆಂಕಟೇಶ್,ನಿವೃತ್ತ ಬ್ಯಾಂಕ್ ಅಧಿಕಾರಿ ಅಮರನಾಥ್,ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಅಧಿಕಾರಿ ರವೀಂದ್ರ,ಕೇಂದ್ರೀಯ ಅಬಕಾರಿ ಮತ್ತು ಕಸ್ಟಮ್ಸ್ ಮಂಡಳಿ ಅಧಿಕಾರಿ ಕೃಷ್ಣವೇಣಿ,ಸ್ಯಾನ್ ಫ್ರಾನ್ಸಿಸ್ಕೊ ನಿವಾಸಿ ವಿನುತರಮೇಶ್,ಆರೋಗ್ಯ ಇಲಾಖೆ ನಿವೃತ್ತ ಅಧಿಕಾರಿ ವೆಂಕಟಾಚಲ,ಖ್ಯಾತ ಛಾಯಗ್ರಾಹಕ ವಾಸು ನೂರಾರು ಸಂಖ್ಯೆಯಲ್ಲಿ ಕುಟುಂಬದ ಸದಸ್ಯರು ಮುಂತಾದವರು ಇದ್ದರು.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Sunday, April 27