ಮುಳಬಾಗಿಲು:ಪ್ರಖ್ಯಾತ ಪುಣ್ಯಕ್ಷೇತ್ರವಾದ ಮುಳಬಾಗಿಲು ತಾಲೂಕು ಕುರುಡುಮಲೆಯ Kurudumale 13 ಅಡಿ ಎತ್ತರದ ಸಾಲಿಗ್ರಾಮ ಕಲ್ಲಿನ ಏಕಶಿಲಾ ಗಣೇಶಮೂರ್ತಿಗೆ ಭಾನುವಾರದ ಸಂಕಷ್ಟ ಚತುರ್ಥಿ ವಿಶೇಷ ಪೂಜೆ ಹೋಮ ಹವನ ಏರ್ಪಡಿಸಲಾಗಿತ್ತು.
ಬ್ರಹ್ಮ ವಿಷ್ಣು ಮಹೇಶ್ವರ ತ್ರಿಮೂರ್ತಿಗಳು ಸ್ಥಾಪಿಸಿದ ಗಣೇಶಮೂರ್ತಿ ಇದಾಗಿದ್ದು ಇಲ್ಲಿ ಕೌಂಡಿಲ್ಯ ಮಹರ್ಷಿ ತಪಸ್ಸು ಮಾಡುತ್ತಿದ್ದ ಪರಮ ಪವಿತ್ರ ಕ್ಷೇತ್ರ ಎಂಬ ಪ್ರತೀತಿ.ಗಣೇಶಮೂರ್ತಿಗೆ ಮೊದಲು ದೇವಾಯಲ ಇರಲಿಲ್ಲ ನಂತರದಲ್ಲಿ
ಚೋಳರ ಕಾಲದಲ್ಲಿ ದೇವಾಲಯ ನಿರ್ಮಿಸಿದ್ದು ವಿಜಯನಗರ ಅರಸರ ಕಾಲದಲ್ಲಿ ಪೂರ್ಣಗೊಳಿಸಿದ್ದು ಎನ್ನಲಾದ ದೇವಾಲಯದಲ್ಲಿ ಸಾಲಿಗ್ರಾಮ ಕಲ್ಲಿನ ಗಣೇಶಮೂರ್ತಿ ಮುಂದೆ ಪ್ರಾರ್ಥೀಸಿದರೆ ಭಕ್ತರ ಕೋರಿಕೆಗಳ ಇಷ್ಟಾರ್ಥ ಸಿಧ್ಧಿಸುತ್ತದೆ ಎನ್ನುವುದು ನಂಬಿಕೆ.
ಕುರುಡುಮಲೆ ಗಣೇಶ ದೇವಸ್ಥಾನದಲ್ಲಿ feb16 ಭಾನುವಾರ ಆಚರಿಸಲಾದ ಸಂಕಷ್ಟ ಹರ ಚತುರ್ಥಿ ಆಚರಣೆಯನ್ನು ಅತ್ಯಂತ ಪವಿತ್ರವಾಗಿ ನಡೆಯಿತು ದೊಡ್ಡ ಸಖ್ಯೆಯಲ್ಲಿ ಭಕ್ತರು ಆಗಮಿಸಿ ದರ್ಶನ ಪಡೆದರು.

ಸಂಕಷ್ಟ ಹರ ಚತುರ್ಥಿ ಅಂಗವಾಗಿ ದೇವಾಲಯದ ಪ್ರಮುಖ ಅರ್ಚಕರಾದ ವಿನಾಯಕ ಅವರ ತಂಡ ಮೂಲ ಗಣೇಶಮೂರ್ತಿಗೆ ವಿಶೇಷ ಹೂವಿನ ಅಲಂಕಾರ ಮಾಡಿದ್ದು ಮತ್ತು ಸಂಜೆ ಗಣಪತಿ ಹೋಮ ಹವನ ನಡೆಸಿದರು.


AlsoRead:https:ಲಿಂಗದ ರೂಪದಲ್ಲಿ ಭಕ್ತರ ಕೋರಿಕೆ ಈಡೇರಿಸುತ್ತಿರುವ ಕಮಲಶಿಲೆ ದುರ್ಗಾಪರಮೇಶ್ವರಿ //www.vcsnewz.com/kamalashile-durga-parameshwari-is-the-fulfilling-the-wishes-of-the-devotees-in-the-form-of-a-linga/