ಮುಳಬಾಗಿಲು:ಇತಿಹಾಸ ಪ್ರಸಿದ್ದ ಚೋಳರ ಕಾಲದಲ್ಲಿ ನಿರ್ಮಿಸಿರುವ ಕುರುಡುಮಲೆ ವಿನಾಯಕ ರಾಜ್ಯದಲ್ಲಿನ ಏಕೈಕ ಲಕ್ಷ್ಮೀ ಗಣಪತಿ ಪುಣ್ಯಕ್ಷೇತ್ರ ಎಂಬ ಖ್ಯಾತಿ ಇದೆ ಕುರುಡುಮಲೆ ವಿನಾಯಕ ದೇಗುಲಕ್ಕೆ ಬಂದು ಬೇಡಿಕೊಂಡರೆ ಯಾವ ಕೆಲಸವಾದರು ಸುಲಲಿತವಾಗಿ ನಡೆಯುತ್ತದೆ ಎಂಬುದು ಪ್ರತಿತಿ.
ಹಬ್ಬದ ಮಾರನೆ ದಿನ ರಥೋತ್ಸವ
ಗಣೇಶನಿಗೆ ವಿನಾಯಕ ಚೌತಿ ಗಣಪತಿ ಹಬ್ಬದ ಮಾರನೇ ದಿನವಾದ ಇಂದು ಅದ್ಧೂರಿಯಾಗಿ ಬ್ರಹ್ಮ ರಥೋತ್ಸವ ನಡೆಯಿತು.
ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮಿಗಣಪತಿ ರಥೋತ್ಸವಕ್ಕೂ ಮುಂಚಿತವಾಗಿ ದೇವಾಲಯದಲ್ಲಿ ಬೃಹತ್ ಏಕಶಿಲಾ ಸಾಲಿಗ್ರಾಮ ವಿನಾಯಕಮೂರ್ತಿಗೆ ವಿಶೇಷ ಅಲಂಕಾರ ಪೂಜಾ ಹಾಗು ಹೋಮದ ಕಾರ್ಯಕ್ರಮಗಳು ನಡೆಯಿತು,ನಂತರದಲ್ಲಿ ಸಹಸ್ರಾರು ಭಕ್ತಾಧಿಗಳ ಸಮ್ಮುಖದಲ್ಲಿ ಉತ್ಸವ ಮೂರ್ತಿಗಳನ್ನು ಬೃಹತ್ ರಥದಲ್ಲಿ ಪ್ರತಿಷ್ಠಾಪಿಸಿ ಭಕ್ತಾಧಿಗಳ ಜಯಘೋಷಗಳ ನಡುವೆ ರಥೋತ್ಸವವನ್ನು ಎಳೆಯಲಾಯಿತು ಈ ಸಂದರ್ಭದಲ್ಲಿ ಹರಕೆ ಹೊತ್ತ ಭಕ್ತಾದಿಗಳು ರಥಕ್ಕೆ ಹಣ್ಣುಕಾಯಿ ನೀಡಿದರೆ ಇನ್ನು ಕೆಲ ಭಕ್ತರು ರಥಕ್ಕೆ ಉತ್ತತ್ತಿ, ಬಾಳೆಹಣ್ಣು ಅರ್ಪಿಸಿ ಕೃತಾರ್ಥರಾದರು.ರಥೋತ್ಸವಕ್ಕೆ ರಾಜ್ಯದ ವಿವಿದ ಮೂಲೆಗಳಿಂದ ಹಾಗು ಆಂಧ್ರ,ತಮಿಳುನಾಡು ರಾಜ್ಯಗಳಿಂದ ಸಹಸ್ರ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿದ್ದರು.


ಆಗಮಿಸಿದ್ದ ಗಣ್ಯರು
ರಾಜ್ಯ ಸರ್ಕಾರದ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ,ಮುಳಬಾಗಿಲು ಶಾಸಕ ಸಮೃದ್ಧಿಮಂಜುನಾಥ್, ತಹಶೀಲ್ದಾರ್ ಗೀತಾ,ತಾಲೂಕು ಪಂಚಾಯಿತಿ ಇಒ ಡಾ.ಸರ್ವೇಶ್,ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ಶಾಮಣ್ಣ, ಕಂದಾಯ ಇಲಾಖೆ ಅಧಿಕಾರಿಗಳು ಸೇರಿದಂತೆ ದೊಡ್ಡ ಸಂಖ್ಯೆಯಲ್ಲಿ ರಾಜಕೀಯ ಪ್ರಮುಖರು,ಉದ್ಯಮಿಗಳು, ಗುತ್ತಿಗೆದಾರರು ಪಾಲ್ಗೋಂಡಿದ್ದರು ಈ ಸಂದರ್ಭದಲ್ಲಿ ಡಿವೈಎಸ್.ಪಿ ನಂದಕುಮಾರ್ ನೇತೃತ್ವದಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.



