ಶ್ರೀನಿವಾಸಪುರ:ನ್ಯಾಯಲಯದ ಸೂಚನೆಯಂತೆ 2010 ಹಾಗು 2013 ಆದೇಶದಂತೆ ನಿಯಮಾವಳಿಯಲ್ಲಿ ಕಂದಾಯ ಇಲಾಖೆ ಅನುಸರಿಸುವ ವಿಧಾನದಂತೆ ಸರ್ವೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ಹೇಳಿದರು.
ಹೈಕೋರ್ಟ್ ಸೂಚನೆಯಂತೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಅರಣ್ಯ ಇಲಾಖೆಯ ಭೂ ವಿವಾದ ಎನ್ನಲಾದ ಹೊಸಹುಡ್ಯ ಗ್ರಾಮದ ಜಿನಗಲಕುಂಟೆ ಸರ್ವೇ ನಂಬರ್ 1 ಹಾಗೂ 2 ರಲ್ಲಿನ ಜಮೀನು ಅನ್ನು ಎರಡು ದಿನಗಳ ಕಾಲ ಸರ್ವೆ ಮಾಡಿದ ನಂತರ ಹೇಳಿಕೆ ನೀಡಿದ ಅವರು ಜನವರಿ 30 ರ ಒಳಗೆ ಸರ್ವೇ ಮಾಡಿ ವರದಿ ಸಲ್ಲಿಸುವಂತೆ ಹೈಕೋರ್ಟ್ ನೀಡಿದ ಸೂಚನೆಂತೆ ಪಿರ್ಯಾದುದಾರರಿಗೆ ನೋಟೀಸ್ ನೀಡಿ ಸರ್ವೆ ಕಾರ್ಯವನ್ನು ರೊವರ್ ಯಂತ್ರ ಬಳಸಿ ಸುಮಾರು 25 ಮಂದಿ ಕಂದಾಯ ಹಾಗು ಸರ್ವೆ ಇಲಾಖೆ ಅಧಿಕಾರಿಗಳು ಹಾಗು ಅರಣ್ಯ ಇಲಾಖೆಯ 15 ಜನ ಮಾಪಕರು ರೋವರ್ ಜೊತೆ ಚೈನ್ ಬಳಸಿ ಏಕಕಾಲದಲ್ಲಿ ಸರ್ವೇ ಮಾಡಲಾಗಿದೆ.
ಗುಂಟರ್ಸ್ ಚೈನ್ ಬ್ರಿಟಿಷ್ ಕಾಲದಿಂದ ಬಳಕೆಯಲ್ಲಿದೆ ಅರಣ್ಯ ಇಲಾಖೆ
ಫಾರೆಸ್ಟ್ ಸೆಟಲ್ ಮೆಂಟ್ ಮ್ಯಾಪ್ ಅವಶ್ಯಕತೆ ಇಲ್ಲ ಇದಕ್ಕೆ ಸರ್ಕಾರದ ಅದೇಶ ಸಹ ಇದೆ ಅದರಂತೆ ಗುಂಟರ್ಸ್ ಚೈನ್ ಮೂಲಕವೆ ಅರಣ್ಯ ಹಾಗೂ ಕಂದಾಯ ಇಲಾಖೆಯ ಸರ್ವೇ ಕಾರ್ಯ ಮುಕ್ತಾಯವಾಗಿದ್ದು ಅರಣ್ಯ ಇಲಾಖೆಯ ಗಡಿ ಗುರುತಿಸುವ ಕೆಲಸ ಜಂಟಿಯಾಗಿ ಮಾಡಲಾಗಿದೆ ನಾಲ್ಕು ತಂಡಗಳಿಂದ ಸರ್ವೇ ಮಾಡಿಸಿರುವುದಾಗಿದ್ದು ಅರಣ್ಯ ಇಲಾಖೆಯ ಗಂಟರ್ಸ್ ಚೈನ್ ಮಾಪನ 100 ಲಿಂಕ್ 66 ಅಡಿಯಂತೆ ಸರ್ವೇ ಮಾಡಲಾಗಿದ್ದು ಇದರ ಅಳತೆ ಸರಿಯಾಗಿ ಇರುತ್ತೆ ಅಂತ ಅಧೀನ ಕಾರ್ಯದರ್ಶಿ ಅವರೇ ಹೇಳಿದ್ದಾರೆ.ಒತ್ತುವರಿಯಾಗಿದೆ ಎನ್ನುವುದು ಅರಣ್ಯ ವ್ಯಾಪ್ತಿಯಲ್ಲಿದೆ ಎಂದು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಸರಿನಾ ಹೇಳಿದರು.
ಈ ಸಂದರ್ಭದಲ್ಲಿ ಸರ್ವೆ ಇಲಾಖೆ ಅಧಿಕಾರಿ ಸಂಜಯ್,ತಾಲೂಕು ಅರಣ್ಯಾದಿಕಾರಿ ಮಹೇಶ್ ತಹಶೀಲ್ದಾರ್ ಸುಧೀಂದ್ರ ಅಡಿಷನಲ್ ಎಸ್.ಪಿ ರವಿಶಂಕರ್,ಮುಳಬಾಗಿಲು ಡಿವೈಎಸ್.ಪಿ ನಂದಕುಮಾರ್,ಶ್ರೀನಿವಾಸಪುರ ವೃತ್ತ ಪೋಲಿಸ್ ಸಿಐ ಗೊರವನಕೊಳ್ಳ,ಗೌವನಪಲ್ಲಿ ಸಿಐ ಶಿವಕುಮಾರ್ ಕೋಲಾರ್ ಸಿಐ ಸತೀಶ್,ಎಸ್.ಐ ಗಳಾದ ಜಯರಾಮ್,ಶ್ರೀರಾಮ್ ಮುಂತಾದವರು ಇದ್ದರು.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Saturday, April 26