ಶ್ರೀನಿವಾಸಪುರ:ಕನಾ೯ಟಕ ರಾಜ್ಯ ದೇವಗಾಣಿಗ,ಓಂಟೆತ್ತು ಗಾಣಿಗರ ಸಂಘದ ರಾಜ್ಯ ಮಟ್ಟದ ಸಮಾವೇಶ ಡಿಸೆಂಬರ್ 18 ರಂದು ಬೆಂಗಳೂರಿನಲ್ಲಿ ನಡೆಯಲಿರುವುದಾಗಿ ಈ ಸಮಾವೇಶಕ್ಕೆ ತಾಲೂಕಿನಲ್ಲಿರುವ ದೇವಗಾಣಿಗ ಮತ್ತು ಓಂಟೆತ್ತು ಗಾಣಿಗರ ಕುಲಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಕನಾ೯ಟಕ ರಾಜ್ಯ ದೇವಗಾಣಿಗರ ಸಂಘದ ಅಧ್ಯಕ್ಷ ಕುರುಬೂರು ರಮೇಶ್ ಹೇಳಿದರು ಅವರು ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಗಾಣಿಗರ ಸಂಘದ ರಾಜ್ಯ ಮಟ್ಟದ ಸಮಾವೇಶ ಸಂಬಂಧ ಆಯೋಜಿಸಿದ್ದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಗಾಣಿಗ ಸಮುದಾಯಗಳ ಜನತೆ ಸಂಘಟಿತರಾಗಬೇಕಿದೆ ಸರ್ಕಾರದ ಮೀಸಲಾತಿ ಪಟ್ಟಿಯಲ್ಲಿ ನಮ್ಮ ಸಮಾಜದ ಹೆಸರು ಗಾಂಡ್ಲ ಎಂದು ನಮೂದಾಗಿದೆ ಇದನ್ನು ಸರ್ಕಾರ ತೀವ್ರವಾಗಿ ಪರಿಗಣಿಸಿ ದೇವಗಾಣಿಗ ಹಾಗು ಒಂಟೆತ್ತು ಗಾಣಿಗ ಎಂದು ನಮೂದಿಸಿ ಮೀಸಲಾತಿ 2 ಉಪಜಾತಿಯಾಗಿ ನಮೂದಿಸಬೇಕೆದೆ ಗಾಣಿಗ ಅಭಿವೃದ್ದಿ ನಿಗಮ ಸ್ಥಾಪಿಸುವ ಮೂಲಕ ಸಮಾಜದ ಅಭಿವೃದ್ದಿಗೆ ಸರ್ಕಾರ ಮುಂದಾಗಬೇಕು ಈ ಸಮಾವೇಶದಲ್ಲಿ ದೇವ ಜ್ಯೋತಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಪ್ರಾರಂಭ ಮಾಡಲಾಗುತ್ತದೆ ಹಾಗೆ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮುಖಂಡ LIC ಶ್ರೀನಿವಾಸನ್ ಮಾತನಾಡಿ ಸಮುದಾಯದ ಸಂಘಟನೆಗಾಗಿ ಮಾಡುತ್ತಿರುವ ಶಕ್ತಿ ತುಂಬುವ ಸಲುವಾಗಿ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ತಾಲೂಕಿನ ಕುಲಬಾಂದವರು ರಾಜ್ಯಮಟ್ಟದ ಸಂಘದಲ್ಲಿ ಸದಸ್ಯತ್ವ ಪಡೆದು ಸಮಾವೇಶಕ್ಕೆ ಹೋಗಬೇಕಿದೆ ಎಂದರು. ಈ ಸಂದರ್ಭದಲ್ಲಿ ಕಾಯ೯ದಶಿ೯ ಸದಾಶಿವಪ್ಪ ಅಗರಂ ರವಣಪ್ಪ, ಮುರುಳಿ ಜೆ,ಮುನಿರಾಜು, ನಾರಾಯಣಶೆಟ್ಟಿ, ಶೆಟ್ಟಿಹಳ್ಳಿ ರಾಮಚಂದ್ರಪ್ಪ, ಕೊಳತೂರು ನಾಗೇಂದ್ರ, ಲಕ್ಷ್ಮೀಪುರ ವೆಂಕಟೇಶ, ತಾಡಿಗೋಳ್ ನಾಗೇಶ್, ಮಿಲ್ಟ್ರಿರಾಮಕೃಷ್ಣಪ್ಪ,ಕದಿರೋಳ್ಳ ಗಡ್ಡ ವೆಂಕಟರವಣಪ್ಪ ಮುಂತಾದವರು ಭಾಗವಹಿಸಿದ್ಧರು.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Sunday, April 27