ಶ್ರೀನಿವಾಸಪುರ:ಸಂತೆಯಲ್ಲಿ ಟೆಂಪೋ ನಿಲ್ಲಿಸಿದ ವಿಚಾರವಾಗಿ ನಡೆದಂತ ರಗಳೆ ದೊಡ್ಡದಾಗಿ ಮೂತ್ರ ವಿಸರ್ಜನೆ ಮಾಡುವ ಸಂದರ್ಭದಲ್ಲಿ ಇಬ್ಬರು ವ್ಯಕ್ತಿಗಳು ಗಲಾಟೆ ಮಾಡಿಕೊಂಡು ವ್ಯಕ್ತಿಯೊಬ್ಬ ಸಾವನಪ್ಪಿರುವ ಘಟನೆ ಶ್ರೀನಿವಾಸಪುರ ತಾಲ್ಲೂಕಿನ ಗೌನಿಪಲ್ಲಿ ಗ್ರಾಮದಲ್ಲಿ ನಡೆದಿರುತ್ತದೆ ಮೃತ ವ್ಯಕ್ತಿಯನ್ನು ವೆಂಕಟ್ರಾಯಪ್ಪ (55) ಎಂದು ಗುರುತಿಸಲಾಗಿದೆ.
ತಾಲೂಕಿನ ಗೌನಿಪಲ್ಲಿ ಸಂತೆ ತಾಲೂಕಿನಲ್ಲೆ ಅತಿ ದೊಡ್ಡ ಸಂತೆಯಾಗಿದ್ದು ಇಲ್ಲಿ ಆಂಧ್ರ ಸೇರಿದಂತೆ ಇತರಡೆಯಿಂದ ಸಂತೆ ವ್ಯಾಪಾರ ಮಾಡಲು ಸೇರುವುದು ಸಾಮಾನ್ಯ ಎಂದಿನಂತೆ ಮಂಗಳವಾರ ಸಂತೆ ಮೈದಾನದಲ್ಲಿ ವಾರದ ಸಂತೆ ನಡೆದಿದೆ ನಂತರದಲ್ಲಿ ವ್ಯಾಪರಸ್ಥರು ಸಂತೆ ಮುಗಿಸಿ ಉಳಿದ ಸರಕು ವಾಪಸ್ಸು ತಗೆದುಕೊಂಡು ಹೋಗುವುದು ಸಾಮನ್ಯ ಅದರಂತೆ ಸಂತೆಯಲ್ಲಿ ವ್ಯಾಪರ ಮಾಡಲು ಬಂದಿದ್ದ ಗೌವನಪಲ್ಲಿ ಗ್ರಾಮದ ವೆಂಕಟ್ರಾಯಪ್ಪನ ಮಗ ಮನೋಹರ್ ಸಂತೆಯಲ್ಲಿ ಉಳಿದ ಸರಕನ್ನು ಮೂಟೆಗೆ ಹಾಕಿ ಕಟ್ಟಿಕೊಂಡು ಅದನ್ನು ತಗೆದುಕೊಂಡು ಹೋಗಲು ಟೆಂಪೋ ತಂದಿರುತ್ತಾನೆ ಅದನ್ನು ರಸ್ತೆಯಲ್ಲಿ ನಿಲ್ಲಿಸಿ ಅಂಗಡಿ ಸರಕನ್ನು ತುಂಬಿಕೊಂಡು ವಾಪಸ್ಸು ಹೋಗುವಾಗ ರಸ್ತೆಯಲ್ಲಿ ಮತ್ತೊಂದು ಟೆಂಪೋ ಅಡ್ದ ಇರುತ್ತದೆ ಯಾರದು ಎಂದು ತಿಳಿಯದೆ ಅಲ್ಲೆ ಕುಳತಿದ್ದ ಚಾಲಕ ಅದೆ ಊರಿನ ಶಂಕರಪ್ಪನದೆ ಇರಬಹುದು ಎಂದು ಊಹಿಸಿಕೊಂಡು ಟೆಂಪೋ ಯಾಕೆ ರಸ್ತೆಗೆ ಅಡ್ಡ ನಿಲ್ಲಿಸಿರುವುದು ಎಂದು ಮನೋಹರ್ ಹಾಗು ಅವರ ತಂದೆ ವೆಂಕಟ್ರಾಯಪ್ಪ ದಬಾವಣೆ ಮಾಡಿದಾಗ ಶಂಕರಪ್ಪ ಹಾಗು ಮನೋಹರ್ ನಡುವೆ ಮಾತಿನ ಚಕಮಕಿ ನಡೆದಿದೆ ನಂತರ ಇಬ್ಬರು ಹೋರಟು ಹೋಗಿದ್ದಾರೆ ನಂತರದಲ್ಲಿ ಮನೋಹರ್ ತಂದೆ ವೆಂಕಟ್ರಾಯಪ್ಪನಿಗೆ ಮೂತ್ರಕ್ಕೆ ಅವಸರವಾಗಿ ಸಂತೆ ಮೈದಾನದ ಬಳಿ ಕೂಗಳತೆ ದೂರದ ಬಯಲಿನಲ್ಲಿ ಮೂತ್ರ ವಿಸರ್ಜನೆಗೆ ಹೋಗಿರುತ್ತಾನೆ ಅಲ್ಲಿಗೆ ಬಂದ ಶಂಕರಪ್ಪ ವೆಂಕಟ್ರಾಯಪ್ಪ ಹಿಗ್ಗಾ ಮುಗ್ಗ ಬದಿರುತ್ತಾನೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಕೈ ಕೈ ಮೀಲಾಸಿಕೊಂಡಿದ್ದಾರೆ ಅಲ್ಲಿದ್ದವರು ಇಬ್ಬರನ್ನು ಸಮಾಧಾನ ಪಡಿಸಿ ಕಳಿಸಿದ್ದಾರೆ ಇದೆಲ್ಲ ನಡೆದಾದ ನಂತರ ತಡರಾತ್ರಿ ಶಂಕರಪ್ಪ ಮತ್ತೆ ಮನೋಹರ್ ಮನೆ ಬಳಿ ಕೂಗಾಡಿ ಗಲಭೆ ಎಬ್ಬಿಸಿದ್ದಾನೆ ಈ ಸಂದರ್ಭದಲ್ಲಿ ಮನೋಹರ್ ಮನೆಯಲ್ಲಿ ಇಲ್ಲದೆ ಅವರ ತಂದೆ ವೆಂಕಟ್ರಾಯಪ್ಪ ಮನೆಯಲ್ಲಿದ್ದು ಶಂಕರಪ್ಪನನ್ನು ಸಮಾಧಾನ ಪಡಿಸಲು ಯತ್ನಿಸಿದಾಗ ಶಂಕರಪ್ಪನನ್ನು ತಳ್ಳಾಡಿದ್ದಾನೆ ಈ ಸಂದರ್ಭದಲ್ಲಿ ವೆಂಕಟ್ರಾಯಪ್ಪ ಅಯಾತಪ್ಪಿ ಬಿದ್ದು ಪ್ರಜ್ನೆ ಕಳೆದುಕೊಂಡಿರುತ್ತಾನೆ ನಂತರದಲ್ಲಿ ವೆಂಕಟ್ರಾಯಪ್ಪನ ಕುಟುಂಬದವರು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದ್ಕೊಂಡು ಹೋಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಶ್ರೀನಿವಾಸಪುರ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮದ್ಯದಲ್ಲಿ ವೆಂಕಟ್ರಾಯಪ್ಪ ಮೃತ ಪಟ್ಟಿರುತ್ತಾನೆ, ಶಂಕರಪ್ಪ ಹೊಡೆದಿರುವುದರಿಂದ ವೆಂಕಟ್ರಾಯಪ್ಪ ಸಾವನಪ್ಪಿದ್ದಾನೆ ಎಂದು ಮನೋಹರ್ ಗೌವನಪಲ್ಲಿ ಠಾಣೆಯಲ್ಲಿ ದೂರುದಾಖಲಿಸಿರುತ್ತಾರೆ.ದೂರಿನನ್ವಯ ಶಂಕರಪ್ಪನನ್ನು ವಶಕ್ಕೆ ಪಡೆದ ಪೋಲಿಸರು ನ್ಯಾಯಂಗ ಬಂಧನಕ್ಕೆ ಒಪ್ಪಿಸಿರುತ್ತಾರೆ.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Monday, April 28