ಶ್ರೀನಿವಾಸಪುರ:ಪಟ್ಟಣದ ನಾಗರೀಕರು ಮೂಲಭೂತ ಸೌಕರ್ಯದಿಂದ ವಂಚಿತರಾಗಿದ್ದು ಪುರಸಭೆ ಆಡಳಿತಕ್ಕೆ ಇದರ ಅರಿವೆ ಇಲ್ಲದಂತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸಮರ ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ್ ಯಾದವ್ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು,ಜನ ಪ್ರತಿನಿತ್ಯ ಅನುಭವಿಸುವಂತ ಸಮಸ್ಯೆಗಳನ್ನು ಆಳುವವರು ಗಮನಿಸುತ್ತಿಲ್ಲ ಸಾರ್ವಜನಿಕರು ನರಕಯಾತನೆಯಲ್ಲಿ ಜೀವನ ಕಳೆಯುವಂತಾಗಿದೆ.ಪಟ್ಟಣದಲ್ಲಿ ಜನಸಂಖ್ಯೆ ಹೆಚ್ಚಳವಾಗುತ್ತಿದ್ದು ಪ್ರದೇಶದ ವ್ಯಾಪ್ತಿಯನ್ನು ವಿಸ್ತರಿಸುತ್ತ ಸಾಗಿದೆ ಅದಕ್ಕೆ ತಕ್ಕನಂತೆ ನಾಗರೀಕರಿಗೆ ಅಗತ್ಯ ಮೂಭೂತ ಸೌಕರ್ಯಗಳನ್ನು ಒದಗಿಸುವ ಜವಬ್ದಾರಿ ಆಳುವವರಿಗೆ ಇರಬೇಕಾಗುತ್ತದೆ ಪುರಸಭೆ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆ ಮಾಡಿಸಿರುವಂತ ಬೈರಪಲ್ಲಿ,ಕೊಳ್ಳೂರು.ಉನಿಕಿಲಿ,ನಲ್ಲಪಲ್ಲಿ ಇಂದಿರಾನಗರ ಪ್ರದೇಶಗಳಲ್ಲಿ ಉತ್ತಮ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ರಸ್ತೆ ಯಾವುದು ಚರಂಡಿ ಯಾವುದು ಎಂಬ ವ್ಯತ್ಯಾಸ ಇಲ್ಲದೆ ನೀರು ರಸ್ತೆ ಮೇಲೆ ಹರಿಯುತ್ತಿದೆ ಇಲ್ಲಿ ರಸ್ತೆಗಳ ಪರಿಸ್ಥಿತಿ ಅಯೋಮಯದಂತಿದೆ ಎನ್ನುತ್ತಾರೆ.
ಪಟ್ಟಣದಲ್ಲಿ ದಿನೆ ದಿನೆ ಜನಸಂಖ್ಯೆ ಹೆಚ್ಚಳವಾಗುತ್ತಿದೆ ಜೊತೆಗೆ ವಾಹನಗಳ ಸಂಚಾರದ ಸಂಖ್ಯೆಯೂ ಹೆಚ್ಚುತ್ತಿದೆ ಇದರಿಂದ ಪಾರ್ಕಿಂಗ್ ಸಮಸ್ಯೆ ಎದುರಾಗಿದೆ,ಈ ಕುರಿತು ಅಗತ್ಯ ಕ್ರಮ ತಗೆದುಕೊಳ್ಳಬೇಕಾದ ಜವಾಬ್ದಾರಿ ಪುರಸಭೆಗೆ ಇರಬೇಕು ಎಂದು ಅಗ್ರಹಿಸಿದರು.
ಗುಂಡಿ ಬಿದ್ದು ಹಾಳಾಗಿರುವ ರಸ್ತೆಗಳು
ಮೊದಲೆ ಪಟ್ಟಣದಲ್ಲಿ ರಸ್ತೆಗಳು ಹಾಳಾಗಿವೆ ಇತ್ತಿಚಿಗೆ ಸುರಿಯುತ್ತಿರುವ ಮಳೆಯಿಂದಾಗಿ ಬಹುತೇಕ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದೆ.ಆಂಧ್ರಕ್ಕೆ ಸಂಪರ್ಕ ಕಲ್ಪಿಸುವ ಬಸ್ ನಿಲ್ದಾಣದಿಂದ ಭೈರಪಲ್ಲಿ ವರಗಿನ ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿ ಬಿದ್ದಿದೆ ಇಲ್ಲಿ ವಾಹನ ಸಂಚಾರರು ಕಷ್ಟಪಟ್ಟು ವಾನಗಳನ್ನು ಚಲಾಯಿಸಬೇಕು ಆಯಾತಪ್ಪಿದರೆ ಸವಾರನ ಸಮೇತ ವಾಹನ ನೆಲಕ್ಕೆ ಬೀಳುತ್ತದೆ ಎಂದು ದೂರಿದ್ದಾರೆ.
ಕ್ರೀಡಾಂಗಣದ ವರಗೂ ಬೀದಿ ದೀಪಗಳಲ್ಲಾರೀ
ಎಂ.ಜಿ.ರಸ್ತೆಯಿಂದ ಕ್ರೀಡಾಂಗಣದ ವರಗಿನ ರಸ್ತೆಯಲ್ಲಿ ಬೀದಿ ದೀಪಗಳು ಇಲ್ಲ ಇದು ದೊಡ್ಡ ದುರಂತ ಎನ್ನಬಹುದು ಕ್ರಿಕೆಟ್ ಸೇರಿದಂತೆ ವಿವಿಧ ಕ್ರೀಡೆಗಳಿಗೆ ಅಭ್ಯಾಸಕ್ಕೆ ಬರುವಂತ ಕ್ರೀಡಾಪಟುಗಳು ಸಂಜೆ ಸಮಯದಲ್ಲಿ ತಮ್ಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ವಾಪಸ್ಸು ಬರಬೇಕಾದರೆ ಕಾರ್ಗತ್ತಲಿನ ರಸ್ತೆಯಲ್ಲಿ ಬರಬೇಕಾದಂತ ಅನಿವಾರ್ಯತೆ ಇದೆ ಇದೊಂದು ದುರಂತ ಎಂದಿರುತ್ತಾರೆ.
ಮಳೆ ದುರಂತ ಅಲ್ಲ ಇಲ್ಲಿನ ಅಧಿಕಾರಿಗಳೆ ಶ್ರೀನಿವಾಸಪುರಕ್ಕೆ ದೊಡ್ದ ದುರಂತ ಸಂತೇ ಮೈಧಾನದ ಪ್ರದೇಶದಲ್ಲಿ ಸಮರ್ಪಕ ರಸ್ತೆ ಚರಂಡಿ ಇಲ್ಲದೆ ಮಳೆ ನೀರು ಮನೆಗಳಿಗೆ ನುಗ್ಗಿದ್ದು ಬಡವರ ಕಷ್ಟ ಕೇಳುವರೆ ಇಲ್ಲದಂತಾಗಿದೆ ಎಂದಿರುತ್ತಾರೆ.
Trending
- ಶ್ರೀನಿವಾಸಪುರ:ಕಸ ಹಾಕುವ ವಿಚಾರಕ್ಕೆ ಜಗಳ ಒಬ್ಬನ ಕೊಲೆ!
- ಶ್ರೀನಿವಾಸಪುರ:ವೇಶ್ಯಾವಾಟಿಕೆ ದಂಧೆ ಪೊಲೀಸ್ ದಾಳಿ, ಕಿಂಗ್ ಪಿನ್ ಮಹಿಳೆ ಬಂಧನ!
- ಶ್ರೀನಿವಾಸಪುರ:ವಾಹನ ಡಿಕ್ಕಿಯಾಗಿ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಪೇದೆ ನಿಧನ!
- ಶ್ರೀನಿವಾಸಪುರ:ಕರ್ನಾಟಕ ಬ್ಯಾಂಕ್ ಉದ್ಯೋಗಿ ಅಪಘಾತದಲ್ಲಿ ಸಾವು!
- ಲಂಚ ಪಡೆಯುತ್ತಿದ್ದ ಬಿಜೆಪಿ ಶಾಸಕ ಲೋಕಾಯುಕ್ತ ಬಲೆಗೆ!
- ಯಾವ ಐಟಿ-ಬಿಟಿ ಗೂ ಕಡಿಮೆ ಇಲ್ಲ,Dairy Farm ಆದಾಯ ಲಕ್ಷಗಟ್ಟಲೆ!
- ಬೆಂಗಳೂರಿನಲ್ಲಿ ಕುಬೇರರು ವಾಸಿಸುವ“ಬಿಲಿಯನೇರ್ಸ್ ಸ್ಟ್ರೀಟ್”ಎಲ್ಲಿದೆ?
- ಶ್ರೀನಿವಾಸಪುರ:ನೌಕರರ ಸಂಘದ ಹಾಲಿ-ಮಾಜಿ ಅಧ್ಯಕ್ಷರ ನಡುವೆ ಬಿದಿ ಜಗಳ!
Saturday, March 7



