ಕೋಲಾರ:ರಾಜ್ಯ ಪ್ರವಾಸ ಮಾಡಿದ ಸಂದರ್ಭದಲ್ಲಿ ಜೆಡಿಎಸ್ ಬಿಜೆಪಿ ಕಾರ್ಯಕರ್ತರಲ್ಲಿ ಸೌಹಾರ್ದತೆಯ ವಾತಾವರಣ ಇದೆ ಎಂಬುದು ತಿಳಿಯಿತು. ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಅವರು ಕೋಲಾರದ ಸಂಸದ ಮಲ್ಲೇಶ್ ಬಾಬು ಅವರ ತಾಯಿ ಕೋಲಾರ ಜಿಲ್ಲಾಪಂಚಾಯತಿ ಮಾಜಿ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿ ಅವರು 75 ನೇ ಜನುಮದಿನ ಸಂದರ್ಭದಲ್ಲಿ ಆಯೋಜಿಸಿದ್ದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಶ್ರೀನಿವಾಸಪುರದ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಆರಿಕುಂಟೆ ಲಕ್ಷ್ಮಣರೆಡ್ಡಿ ಅವರು ಅಣ್ಣನ ಮಗಳ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ನಂತರ ಸುದ್ದಿ ಗಾರರೊಂದಿಗೆ ಮಾತನಾಡಿದ ನಿಖಿಲ್ ರಾಜ್ಯಕ್ಕೆ ಕುಮಾರಣ್ಣನ ನಾಯಕತ್ವ ಬೇಕು ಎಂದು ರಾಜ್ಯದ ಉದ್ದಗಲಕ್ಕೂ ಜನತೆ ಬಯಸುತ್ತಿದ್ದಾರೆ ಎಂದ ಅವರು ಶಾಸಕ ವೆಂಕಟಶಿವಾರೆಡ್ಡಿ ಅನುದಾನ ತಾರತಮ್ಯ ವಿರೋಧಿಸಿ ನ್ಯಾಯಾಲಯದ ಮೆಟ್ಟಿಲು ಹತ್ತಿರುವುದನ್ನು ಪ್ರಸ್ತಾಪಿಸಿ ಮಾತನಾಡಿ ಕುಮಾರಣ್ಣ ಅಧಿಕಾರವಧಿಯಲ್ಲಿ ಆಡಳಿತದಲ್ಲಿ ರಾಜ್ಯದ ಅಭಿವೃದ್ಧಿ ಕುಂಠಿತವಾಗಿರಲಿಲ್ಲ ರೈತರ ಸಾಲ ಮನ್ನಾ ಮಾಡಲಾಯಿತು ಆ ಪಕ್ಷ ಈ ಪಕ್ಷ ಅಂತ ತಾರತಮ್ಯ ಮಾಡದೆ ಎಲ್ಲಾ ರಾಜಕೀಯ ಪಕ್ಷಗಳ ಶಾಸಕರನ್ನು ಕುಮಾರಣ್ಣ ಗೌರ್ವಾನಿತರಾಗಿ ನಡೆಸಿಕೊಂಡಿದಲ್ಲದೆ ಎಲ್ಲಾ ಪಕ್ಷಗಳಿಗೆ ಸರಿಸಾಮವಾದ ಅನುದಾನ ಬಿಡುಗಡೆ ಮಾಡಿದರು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ನಿಖಿಲ್ ತಿರುಗೇಟು ನೀಡಿದರು.



ಬಿಜೆಪಿ ಜೆಡಿಎಸ್ ಮೈತ್ರಿ ಗಟ್ಟಿಯಾಗಿ ನೆಲೆಯೂರಿದೆ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಇನ್ನಷ್ಟು ಗಟ್ಟಿಯಾಗಲಿದ್ದು ಮುಂಬರುವ ಸ್ಥಳೀಯ ಚುನಾವಣೆಗಳಲ್ಲಿ ಮೈತ್ರಿ ನಡಾವಳಿಗಳು ಯಾವ ರೀತಿ ಇರಬೇಕು ಹೇಗೆ ಮೈತ್ರಿಯನ್ನ ಬಲಪಡಿಸಬೇಕೆಂದು ಎರಡು ಪಕ್ಷದ ನಾಯಕರು ಕೂತು ಚರ್ಚೆ ಮಾಡಿದ್ದಾರೆ ಎಂದು ಹೇಳಿದರು.
ನವೆಂಬರ್ ಕ್ರಾಂತಿ ಮಾರ್ಚ್ ಗೆ ಮುಂದೂಡಬಹುದು! ಬಿಹಾರ ಚುನಾವಣೆ ಮುಗಿದರೆ ಬಹುಶಃ ಹೊಸ ಕ್ರಾಂತಿಯಾಗಬಹುದು, ಯಾರು ಕುರ್ಚಿ ಉಳಿಸಿಕೊಳ್ಳುತ್ತಾರೋ, ಯಾರು ಬಿಡ್ತಾರೋ, ಯಾರು ಕಿತ್ತು ಕೊಳ್ಳುತ್ತಾರೋ ಕಾದು ನೋಡಣ ಎಂದು ವ್ಯಂಗ್ಯವಾಡಿದರು.
ಈ ಸಂದರ್ಭದಲ್ಲಿ ಶಾಸಕಾರದ ರವಿಕುಮಾರ್, ವೆಂಕಟಶಿವಾರೆಡ್ಡಿ, ಕೋರ್ ಕಮಿಟಿ ಅಧ್ಯಕ್ಷರಾದ ಜೆ.ಕೆ ಕೃಷ್ಣಾರೆಡ್ಡಿ, ವಿಧಾನಪರಿಷತ್ ಸದಸ್ಯ ಇಂಚರ ಗೋವಿದರಾಜು ಮಾಜಿ ಸದಸ್ಯ ತೂಪಲ್ಲಿ ಆರ್.ಚೌಡರೆಡ್ಡಿ ಸಿ.ಎಂ.ಆರ್ ಶ್ರೀನಾಥ್ ,ಕೋಲಾರ ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಗಾಯಿತ್ರಿಮುತ್ತಪ್ಪ,ಬಂಡಪಲ್ಲಿ ಕೃಷ್ಣಾರೆಡ್ಡಿ,ನಂದಿನಿ ಹೋಟೆಲ್ ಗೌಡ,ಪೂಲುಶಿವಾರೆಡ್ಡಿ ಬಾಬು, ಜಗನ್ನಾಥ್,ದೊಡಮಲದೊಡ್ಡಿಶ್ರೀನಿವಾಸರೆಡ್ಡಿ ಸೇರಿದಂತೆ ಪ್ರಮುಖ ಮುಖಂಡರು ಜತೆಯಲ್ಲಿದ್ದರು



