ಚಿಂತಾಮಣಿ ಮೂಲಕ ಬಂದಂತ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರನ್ನು ತಾಲೂಕಿನ ಕಲ್ಲೂರು ಗ್ರಾಮದ ಬಳಿ ಜೆಡಿಎಸ್ ಕಾರ್ಯಕರ್ತರು ಬೃಹತ್ ಗಾತ್ರದ ಹಾರ ಹಾಕಿ ಅದ್ದೂರಿಯಾಗಿ ಸ್ವಾಗತಿಸಿದರು ಅಲ್ಲಿಂದ ಅವರನ್ನು ಬೈಕ್ ರ್ಯಾಲಿ ಮೂಲಕ ಪಟ್ಟಣದ ಚಿಂತಾಮಣಿ ವೃತ್ತ ಮುಳಬಾಗಿಲುವೃತ್ತ ಎಂ.ಜಿರಸ್ತೆ ಮೂಲಕ ಕಾರ್ಯಕರ್ತರ ಸಭೆ ನಡೆದ ಪುಂಗನೂರು ಕ್ರಾಸ್ ಸೀತಾರಾಮ ಕಲ್ಯಾಣಮಂಟಪಕ್ಕೆ ಕರೆತರಲಾಯಿತು.
ಶ್ರೀನಿವಾಸಪುರ:ಅನುದಾನದ ಹೆಸರಲ್ಲಿ ಜೆಡಿಎಸ್ ಶಾಸಕರನ್ನು ಸೇಳೆಯಲು ರಾಜ್ಯದ ಉಪಮುಖ್ಯಮಂತ್ರಿಗಳು ನಡೆಸಿದ ಸಭೆಯಲ್ಲಿ ಅನುಧಾನ ಬಿಟ್ಟು ರಾಜಕೀಯ ಮಾತನಾಡುತ್ತ ಆಮಿಷ ಒಡ್ಡುತ್ತ ಶಾಸಕರಿಗೆ ಗಾಳ ಹಾಕುವ ಪ್ರಯತ್ನ ಮಾಡಿದ್ದು ವಿಫಲವಾಗಿದೆ ಎಂದು ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ದೂರಿದರು.
ಅವರು ಶ್ರೀನಿವಾಸಪುರದಲ್ಲಿ ಶುಕ್ರವಾರ ಜನರೊಂದಿಗೆ ಜನತಾದಳ ಸದಸ್ಯತ್ವ ಅಭಿಯಾನದ ಕಾರ್ಯಕ್ರಮದ ಅಂಗವಾಗಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿರು.ಕಾಂಗ್ರೆಸ್ ಶಾಸಕರಿಗೆ ಅನುದಾನ ಕೊಡುವಲ್ಲಿ ವಿಫಲರಾಗಿರುವ ರಾಜ್ಯ ಸರ್ಕಾರ ಅವರಿಂದಲೆ ನಿಂದನೆಗೆ ಒಳಗಾಗುತ್ತಿದ್ದಾರೆ ಇನ್ನೂ ಜೆಡಿಎಸ್ ಶಾಸಕರಿಗೆ ಎಲ್ಲಿಂದ ಅನುದಾನ ತಂದುಕೊಡ್ತಾರೆ ಎಂದು ವ್ಯಂಗ್ಯವಾಡಿದರು.ಕುಮಾರಣ್ಣ ಸಿಎಂ ಆಗಿದ್ದಾಗ ಕೊಟ್ಟ ಕೊಡುಗೆಗಳನ್ನು ರಾಜ್ಯದ ಜನತೆ ಪ್ರತಿ ದಿನ ಸ್ಮರಿಸಿಕೊಳ್ಳುತ್ತಿದ್ದಾರೆ. ಅಂತಹ ವ್ಯಕ್ತಿ ಮತ್ತೆ ಸಿಎಂ ಆದರೆ ರಾಜ್ಯ ಸಮೃದ್ಧಭರಿತವಾಗಿ ಇರುತ್ತದೆ ಎಂದು ಜನ ಬಯಸುತ್ತಿದ್ದಾರೆ ಎಂದು ಹೇಳಿದರು.
ಯಾಕೆ ಜನರೊಂದಿಗೆ ಜನತಾದಳ.
ಬರುವಂತ ಗ್ರಾಮ ಪಂಚಾಯಿತಿ ಹಾಗು ಜಿಲ್ಲಾಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಸ್ಪರ್ದಿಸಲು ಕಾರ್ಯಕರ್ತರನ್ನು ಸಜ್ಜುಗೊಳಿಸುವ ಸಲುವಾಗಿ ಜನರೊಂದಿಗೆ ಜನತಾದಳ ಯಾತ್ರೆ ಕೈಗೊಳ್ಳಲಾಗಿದೆ ಗ್ರಾಮ ಮಟ್ಟದಲ್ಲಿ ಜೆಡಿಎಸ್ ಕಾರ್ಯಕರ್ತರು ಸಂಘಟಿತರಾಗಿ ಚುನಾವಣೆ ಎದರಿಸಲು ಮುಂದಾಗಬೇಕಿದ್ದು ಮಾಜಿ ಪ್ರಧಾನಿ ದೇವೆಗೌಡರು ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಾಡಿರುವಂತ ಕಾರ್ಯಕ್ರಮಗಳೆ ಪಕ್ಷಕ್ಕೆ ಶ್ರೀರಕ್ಷೆ ಎಂದರು
ಶಿವಕುಮಾರ್ ವಿರುದ್ಧ ವಾಗ್ದಾಳಿ
ಮೇಕೆದಾಟು ಯೋಜನೆ ಇದು ನಮ್ಮ ರೈತರ ಜೀವನದ ಪ್ರಶ್ನೆ ಇಲ್ಲಿ ರಾಜಕೀಯ ಮಾಡುವುದು ಬೇಡ ರಾಜ್ಯ ಸರ್ಕಾರಕ್ಕೆ ಜವಾಬ್ದಾರಿ ಇದೆ ತಮಿಳುನಾಡು ಸರ್ಕಾರದ ಜೊತೆ ಚರ್ಚೆ ಮಾಡಿ ಅನುಮತಿ ತರಲಿ,ಆವತ್ತು ಮೇಕೆದಾಟು ವಿಚಾರದಲ್ಲಿ ಪಾದಯಾತ್ರೆ ಮಾಡಿದ್ದರಲ್ಲ ಎಂದು ಡಿಕೆ ಶಿವಕುಮಾರ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದರು.
ಕೆಸಿ ವ್ಯಾಲಿ ಹೆಚ್ ಹೆನ್ ವ್ಯಾಲಿ ವಿಚಾರದಲ್ಲಿ ಸಾಕಷ್ಟು ವಿರೋಧಗಳು ಇದೆ ಎತ್ತಿನಹೊಳೆ ಇವತ್ತಿಗೂ ಕೈಗೂಡಲಿಲ್ಲ ಎಂದ ಅವರು ಕೋಲಾರ-ಚಿಕ್ಕಬಳ್ಳಾಪುರದ ರೈತರು ಸಮಸ್ಯೆ ಅನುಭವಿಸುವಂತಾಗಿದ್ದಾರೆ


ರೈತರ ಬೆಳೆಗಳಿಗೆ ಬೆಂಬಲ ಬೆಲೆ ಕೊಡಿಸಲು ಸಾಧ್ಯವಿಲ್ಲದ ಸರ್ಕಾರ ಮಾವು ಬೆಳೆಗಾರರನ್ನು ಸಂಪೂರ್ಣವಾಗಿ ಕೈಬಿಟ್ಟಿದ್ದು ಮಾವು ಬೆಳೆಗಾರರು ಸಂಕಷ್ಟದಲ್ಲಿದ್ದಾಗ ನೆರವಿಗೆ ನಿಂತವರು ಕುಮಾರಸ್ವಾಮಿ ಅವರು ಕೇಂದ್ರ ಕೃಷಿ ಸಚಿವರಿಗೆ ಪತ್ರ ಬರೆದು ಬೆಂಬಲ ಕೊಡಿಸುವಲ್ಲಿ ಕುಮಾರಸ್ವಾಮಿ ಯಶಸ್ವಿಯಾಗಿದ್ದಾರೆ ಎಂದರು. ಈ ಸಂದರ್ಭದಲ್ಲಿ ಕೋಲಾರ ಜಿಲ್ಲಾಧ್ಯಕ್ಷ ಹಾಗೂ ಶಾಸಕ ಶ್ರೀ ಜಿ.ಕೆ ವೆಂಕಟಶಿವಾರೆಡ್ಡಿ,ಸಂಸದ ಮಲ್ಲೇಶ್ ಬಾಬು, ಮಾಜಿ ಶಾಸಕರ ಜೆ.ಕೆ. ಕೃಷ್ಣಾರೆಡ್ಡಿ, ವಿಧಾನಪರಿಷತ್ ಸದಸ್ಯಗೋವಿಂದರಾಜ್, ವಿಧಾನಪರಿಷತ್ ಸದಸ್ಯ ಆರ್. ಚೌಡರೆಡ್ಡಿ, ಮುಖಂಡರಾದ ಸಿ.ಎಂ.ಆರ್. ಶ್ರೀನಿವಾಸ್, ಎಸ್.ಎಲ್. ಎನ್.ಮಂಜು, ರಾಮಚಂದ್ರ ಗೌಡ,ಗಾಯಿತ್ರಿ ಮುತ್ತಪ್ಪ, ಪುರಸಭೆ ಉಪಾಧ್ಯಕ್ಷೆ ಸುನಿತ, ಸದಸ್ಯೆ ಜಯಲಕ್ಷ್ಮಿ, ಗೌಡ, ಆನಂದ ಗೌಡ, ಪೂಲುಶಿವಾರೆಡ್ಡಿ, ಬಿ.ಎಲ್.ದುರ್ಗಾ, TPSಮಂಜುನಾಥ್ ರೆಡ್ಡಿ,ವೇಣುಗೋಪಾಲ್, ತೂಪಲ್ಲಿಮಧು, ಬಂಡಪಲ್ಲಿ ಕೃಷ್ಣರೆಡ್ಡಿ, ಶಶಿಕುಮಾರ್, ಪಕ್ಷದ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.



