ನ್ಯೂಜ್ ಡೆಸ್ಕ್:ಬೆಂಗಳುರು ನಗರದ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಮಾರ್ಚ್ 30 ರಿಂದ ನ್ಯಾಷನಲ್ ಕಾಮನ್ ಮೊಬಲಿಟಿ ಕಾರ್ಡ್ (ಎನ್ಸಿಎಂಸಿ) ಪ್ರಯಾಣಿಕರಿಗೆ ಲಭ್ಯವಾಗಲಿದೆ. ಬೆಂಗಳೂರು ಮೆಟ್ರೋ ರೈಲ್ವೆ ನಿಗಮ(ಬಿಎಂಆರ್ಸಿಎಲ್) ನೂತನ ವ್ಯವಸ್ಥೆಯನ್ನು ಜನರಿಗೆ ನೀಡಿದೆ. ಒಂದು ದೇಶ, ಒಂದು ಕಾರ್ಡ್ ಘೋಷಣೆ ಅಡಿ ಈ ನೂತನ ವ್ಯವಸ್ಥೆ ಜಾರಿ ಮಾಡಲಾಗಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮ ಆರ್ಬಿಎಲ್ ಬ್ಯಾಂಕ್ ಸಹಯೋಗದಲ್ಲಿ ರುಪೇ ಎನ್ಸಿಎಂಸಿ ಕಾರ್ಡ್ ಪೂರೈಕೆಗೆ ಒಡಂಬಡಿಕೆ ಮಾಡಿಕೊಂಡಿದ್ದು ಕಾರ್ಡನ್ನು ಡೆಬಿಟ್, ಕ್ರೆಡಿಟ್ ಕಾರ್ಡ್ನಂತೆ ರಿಚಾರ್ಜ್ ಮಾಡಿಸಿಕೊಂಡು ಮೆಟ್ರೋದಲ್ಲಿ ಪ್ರಯಾಣ ಮಾಡಬಹುದಾಗಿದೆ ಕೇವಲ ಮೆಟ್ರೋ ಅಷ್ಟೇ ಅಲ್ಲದೇ ಮೆಟ್ರೋದಿಂದ ಹೊರೆಗೂ ಕಾರ್ಡ್ ಅನ್ನು ಬಳಕೆ ಮಾಡಬಹುದು. ಕಾರ್ಡ್ ಬಳಸಿ ಶಾಪಿಂಗ್, ಇಂಧನ ಖರೀದಿ, ಟೋಲ್ ಶುಲ್ಕ ಪಾವತಿ ಸೇರಿದಂತೆ ಇತರೆ ಪಾವತಿಗಳನ್ನು ಮಾಡಬಹುದಾಗಿದೆ ಎನ್ನಲಾಗಿದ್ದು ಕಾರ್ಡ್ ಬಳಕೆಗಾಗಿ ನಗರದ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಆರ್ಬಿಎಲ್ ಬ್ಯಾಂಕ್ ನಿಂದ ಪಿಓಎಸ್ ಮೆಷಿನ್ ಗಳ ವ್ಯವಸ್ಥೆ ಮಾಡಲಾಗಿದೆ. ನಗರದ 6 ಲಕ್ಷಕ್ಕೂ ಹೆಚ್ಚಿನ ಮೆಟ್ರೋ ಪ್ರಯಾಣಿಕರಿಗೆ ಈ ಕಾರ್ಡ್ ಬಳಕೆಗೆ ಲಭ್ಯವಾಗಲಿದೆ.ನಿಲ್ದಾಣಗಳಲ್ಲಿ ಹಾಗೂ ಆರ್ಬಿಎಲ್ ಬ್ಯಾಂಕ್ನ MoBank ಆ್ಯಪ್ ಮೂಲಕವೂ ಎನ್ಸಿಎಂಸಿ ಕಾರ್ಡನ್ನು ರಿಚಾರ್ಜ್ ಮಾಡಿಕೊಳ್ಳಬಹುದಂತೆ.
ಕಾರ್ಡಿನ ವಿಶೇಷತೆಗಳೇನು?
ಕಾರ್ಡ್ ಮೂಲಕ ರಿಚಾರ್ಜ್ ಸಾಧ್ಯ.ಕಾರ್ಡ್ ಬಳಕೆ ಮಾಡಿ ಪೆಟ್ರೋಲ್, ಡಿಸೇಲ್ ತುಂಬಿಸಿಕೊಳ್ಳಬಹುದು.
ಶಾಪಿಂಗ್, ಟೋಲ್, ಪಾರ್ಕಿಂಗ್ ಪಾವತಿ ಕೂಡ ಮಾಡಬಹುದಾಗಿದ್ದು ಕಾರ್ಡ್ ಅನ್ನು ಮೆಟ್ರೋ ನಿಲ್ದಾಣ ಮತ್ತು ಮೊಬೈಲ್ ಆ್ಯಪ್ ಮೂಲಕವು ರಿಚಾರ್ಜ್ ಮಾಡಿಕೊಳ್ಳಬಹುದು
ದೇಶದ ಎರಡನೇ ಅತಿದೊಡ್ಡ ಮೆಟ್ರೋ ನೆಟ್ವರ್ಕ್ ಆಗಿ ಹೊರಹೊಮ್ಮಿದ ಬೆಂಗಳೂರು ನಮ್ಮ ಮೆಟ್ರೋ
ಬಹು ನಿರೀಕ್ಷಿತ ಕೆಆರ್ ಪುರಂ-ವೈಟ್ಫೀಲ್ಡ್ ಮೆಟ್ರೋ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 25ರಂದು ಉದ್ಘಾಟಿಸಿದ ಬಳಿಕ ಬೆಂಗಳೂರಿನ ನಮ್ಮ ಮೆಟ್ರೋ ದೇಶದ ಎರಡನೇ ಅತಿದೊಡ್ಡ ಮೆಟ್ರೋ ನೆಟ್ವರ್ಕ್ ಆಗಿ ಹೊರಹೊಮ್ಮಿದೆ. 63 ನಿಲ್ದಾಣಗಳೊಂದಿಗೆ 69.66 ಕಿ.ಮೀ ಕಾರ್ಯಾಚರಣೆ ನಡೆಸುತ್ತಿರುವ ನಮ್ಮ ಮೆಟ್ರೋ ದೆಹಲಿಯ ನಂತರದಲ್ಲಿ ದೇಶದ ಎರಡನೇ ಅತಿದೊಡ್ಡ ಮೆಟ್ರೋ ನಿಲ್ದಾಣವಾಗಿದೆ. ಪ್ರಧಾನಮಂತ್ರಿಯವರು ಉದ್ಘಾಟಿಸಿರುವ ಈ ನಿರ್ದಿಷ್ಟ ವಿಸ್ತರಣೆಯು ಬೆಂಗಳೂರಿನ ಪೂರ್ವ ಅಂಚನ್ನು ನೈಋತ್ಯ ಅಂಚಿಗೆ ಸೇರುತ್ತದೆ.
ಚಲ್ಲಘಟ್ಟದಿಂದ ವೈಟ್ಫೀಲ್ಡ್ವರೆಗಿನ ನೇರಳೆ ಮಾರ್ಗದ ಒಟ್ಟು ಉದ್ದವು ಸುಮಾರು 42.5 ಕಿಮೀ ಹೊಂದಿದ್ದು, ಇದು ಕೆಆರ್ ಪುರಂನಲ್ಲಿ (ಬ್ಲೂ ಲೈನ್) ಇಂಟರ್ಚೇಂಜ್ ಹೊಂದಿದೆ. ಎಂಜಿ ರಸ್ತೆಯಲ್ಲಿ (ನೇರಳೆ ಲೈನ್) ಮತ್ತು ಮೆಜೆಸ್ಟಿಕ್ನಲ್ಲಿ (ಹಸಿರು ಲೈನ್) ಇಂಟರ್ಚೇಂಜ್ ಹೊಂದಿದೆ. ಪ್ರಸ್ತುತ ಈ ಮಾರ್ಗವು ಕೆಂಗೇರಿಯಿಂದ ಬೈಯಪ್ಪನಹಳ್ಳಿಯವರೆಗೆ (ಸುಮಾರು 26 ಕಿಮೀ) ಒಟ್ಟು ಉದ್ದದ ಈಗ ಕೇವಲ 60% ಮಾತ್ರ ಕಾರ್ಯನಿರ್ವಹಿಸುತ್ತಿದೆ.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Monday, April 28