ನ್ಯೂಜ್ ಡೆಸ್ಕ್: ಸೃಷ್ಟಿಯಲ್ಲಿ ತಾಯಿಗೆ ಸಮನಾದ ಪ್ರೀತಿ ಮತ್ತೆಲ್ಲೂ ಸಿಗದು,ತಾಯಿಯಷ್ಟು ಪ್ರೀತಿಸುವವರು ಈ ಲೋಕದಲ್ಲಿ ಇನ್ನೊಬ್ಬರಿಲ್ಲ. ಮಗು ತಿನ್ನಲು ನಿರಾಕರಿಸಿದಾಗ ತಾಯಿ ಆಪ್ಯಾಯಿತೆಯಿಂದ ಹಾಲುಣಿಸುತ್ತಾಳೆ. ಪ್ರತಿಯೊಬ್ಬ ತಾಯಿಯೂ ತನ್ನ ಮಗು ಹೊಟ್ಟೆ ತುಂಬಿಸಬೇಕೆಂದು ಬಯಸುತ್ತಾಳೆ. ಮಗು ತಿನ್ನಲು ನೀರಾಕರಿಸಿ ಹಠ ಹಿಡಿದರೆ ಮಗುವನ್ನು ಎತ್ತಿಕೊಂಡು ಓಡಾಡುತ್ತ ಮುದ್ದಿಸುತ್ತ ಆಕಾಶದ ಚಂದಮಾನನ್ನು ತೋರಿಸುತ್ತ ಉಣಿಸುತ್ತಾಳೆ.ಇಂತಹ ತಾಯಿ ಪ್ರಿತಿಯನ್ನು ವರ್ಣಿಸಲು ಪದಗಳೆ ಸಿಗುವುದಿಲ್ಲ ಆದರೆ ಇದಕ್ಕೆ ಭಿನ್ನ ಎನ್ನುವಂತೆ ಇಲ್ಲೊಬ್ಬ ತಾಯಿ ತನ್ನ ಮಗ ಚಿಕನ್ ಕರ್ರಿ ಕೇಳಿದ ಎಂದು ಕೋಪಗೊಂಡು ಮಗನನ್ನು ಬಡಿದು ಕೊಂದಿರುವ ಅಮಾನವೀಯ ಘಟನೆ ಮಹಾರಾಷ್ಟ್ರದ ಪಲ್ಹಾರ್ ಜಿಲ್ಲೆಯಲ್ಲಿ ನಡೆದಿದೆ.ಮಹಾರಾಷ್ಟ್ರದ ಪಾಲ್ಘರ್ನ ಕಾಶಿಪಡ ಪ್ರದೇಶದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಚಿಕನ್ ಕರ್ರಿ ಬೇಕೆಂದು ಹಠ ಮಾಡಿದ ತಾನೆ ಹೆತ್ತು ಹೊತ್ತ 7 ವರ್ಷದ ಮಗನನ್ನು ಮನೆಯಲ್ಲಿದ್ದ ಒನಕೆಯಿಂದ ಹಿಗ್ಗಾಮುಗ್ಗಾ ಹೊಡೆದಿದ್ದು ಇದರಿಂದ ಮಗ ಚಿನ್ಮಯ್ ಗಣೇಶ್ ಧುಮ್ಡೆ ಸ್ಥಳದಲ್ಲೇ ಮೃತಪಟ್ಟಿದ್ದಾನೆ.ಆರೋಪಿ ತಾಯಿ 40 ವರ್ಷದ ಪಲ್ಲವಿ ಧುಮ್ಡೆ, ತನ್ನ 10 ವರ್ಷದ ಮಗಳಿಗೂ ಗಂಭೀರ ಗಾಯಗಳಾಗುವಂತೆ ಹೊಡೆದಿದ್ದಾಳೆ ಪೊಲೀಸರು ಆಕೆಯನ್ನು ಬಂಧಿಸಿ, ಕೊಲೆ ಪ್ರಕರಣ ದಾಖಲಿಸಿದ್ದಾರೆ.

ನಿಜವಾದ ಕಾರಣವೇನು?ಆರೋಪಿ ತಾಯಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ. ಆದಾಗ್ಯೂ, ಘಟನೆಯ ಹಿಂದೆ ಬೇರೆಯದೆ ಆದ ಕಾರಣ ಇರಬಹುದು ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸುತ್ತಾರೆ.ತಾಯಿಯೇ ಮಗನನ್ನು ಕೊಂದಿರುವ ಘಟನೆ ಇಡೀ ಸಮಾಜವನ್ನು ಆಘಾತಗೊಳಿಸಿದೆ.ಈ ಪ್ರಕರಣದ ಸತ್ಯ ಸತ್ಯೆಯನ್ನು ಮರಣೋತ್ತರ ಪರೀಕ್ಷೆಯ ವರದಿ ಆಧಾರದ ಮೇಲೆ ಪೊಲೀಸರು ನಡೆಸುವ ತನಿಖೆಯಿಂದ ತಿಳಿಯಲಿದೆ ಎನ್ನುತ್ತಾರೆ.



