ನ್ಯೂಜ್ ಡೆಸ್ಕ್:ತೆಲಂಗಾಣ ರಾಜ್ಯದಲ್ಲಿ ಅಪರೂಪದ ವಿಚಾರವೊಂದು ಬೆಳಕಿಗೆ ಬಂದಿದೆ ಅದೇನಪ್ಪ ಅಂದರೆ ತಾಯಿ ಮತ್ತು ಮಗಳು ಇಬ್ಬರೂ ಒಟ್ಟಿಗೆ ಸರ್ಕಾರಿ ಸೇವೆಗೆ ಸೇರಿದ್ದಾರೆ ಬಹುಶಃ ಈ ವಿಚಾರ ಅಪರೂಪದಲ್ಲಿ ಅಪರೂಪ ಎನ್ನಬಹುದು ತೆಲಂಗಾಣ ರಾಜ್ಯದ ಪೆದ್ದಪಲ್ಲಿ ಜಿಲ್ಲೆಯ ಮಂಥಿನಿ ಮಂಡಲದ ರಾಮಕೃಷ್ಣಾಪುರ ಗ್ರಾಮದ ಸಿಂಗರೇಣಿ ಕಾಲೋನಿಯಯಲ್ಲಿ ಸಣ್ಣ ಉದ್ಯೋಗದ ರಮೇಶ್ ಅವರ ಕುಟುಂಬದ ಇಬ್ಬರಿಗೆ ಎರಡು ಸರ್ಕಾರಿ ಕೆಲಸಗಳು ಒಂದೆ ದಿನ ಸಿಕ್ಕಿದೆ ಆ ಕುಟುಂಬದಲ್ಲಿ ಇಂದು ಹಬ್ಬದ ವಾತವರಣ ಮನೆ ಮಾಡಿದೆ ರಮೇಶ್ ಹೆಂಡತಿ ಪದ್ಮಾಗೆ ಉಪನ್ಯಾಸಕಿಯಾಗಿ ಕೆಲಸ ಸಿಕ್ಕಿದರೆ ಅಕೆಯ ಮಗಳು ಅಲೇಖ್ಯಗೆ ಜಿಲ್ಲಾ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಉದ್ಯೋಗ ಸಿಕ್ಕಿದೆ.
ಮದುವೆಯಾಗಿ ಒದುವುದನ್ನೆ ಬಿಟ್ಟಿದ್ಯಾಕೆ
ರಮೇಶ ಅವರ ಪತ್ನಿ ಪದ್ಮ ಅವರನ್ನು ಅವರ ತವರು ಮನೆಯವರು ಹತ್ತನೆ ತರಗತಿ ಮುಗಿಸಿದ ತಕ್ಷಣ ಮದುವೆ ಮಾಡಿ ಗಂಡನ ಮನೆಗೆ ಸಾಗಹಾಕಿದ್ದರು, ಗಂಡನ ಮನೆಗೆ ಬಂದ ಪದ್ಮ ಮದುವೆಯ ನಂತರ ವಿದ್ಯಾಭ್ಯಾಸ ನಿಲ್ಲಿಸಿದರು, ನಂತರ ಪತಿ ರಮೇಶ ಅವರ ಪ್ರೋತ್ಸಾಹದಿಂದ ಮತ್ತೆ ವಿದ್ಯಾಭ್ಯಾಸ ಪುನರಾರಂಭಿಸಿ ಮಗಳು ಅಲೇಖ್ಯಾ ಜೊತೆಗೂಡಿ ಇಬ್ಬರೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿದರು ಇದರಲ್ಲಿ ಇಬ್ಬರೂ ಯಶಸ್ವಿಯಾಗಿ ಸರ್ಕಾರಿ ಉದ್ಯೋಗಗಳನ್ನು ಪಡೆದುಕೊಂಡಿದ್ದಾರೆ. ಪದ್ಮಾ ಮತ್ತು ಅಲೇಖ್ಯ ಅವರ ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಿದೆ ಎನ್ನುತ್ತಾರೆ ರಮೇಶ್.
ಪತಿ ರಮೇಶ್ ಅವರ ಪ್ರೋತ್ಸಾಹದಿಂದ ಹನ್ನೆರಡು ವರ್ಷಗಳ ನಂತರ ವಿದ್ಯಾಭ್ಯಾಸ ಮಾಡಲು ಸಾಧ್ಯವಾಯಿತು ಎನ್ನುವ ಪದ್ಮ ಪದವಿ ಪೂರ್ಣಮಾಡಿದ ನಂತರ ಸ್ನಾತಕೋತ್ತರ ಪದವಿ, BED, MED, NET ಪರಿಕ್ಷೇಗಳನ್ನು ಅಭ್ಯಾಸ ಮಾಡಿ ವಿದ್ಯಾರ್ಹತೆಗಳನ್ನು ಪಡೆದು Telangana Public Service Commission ಪರಿಕ್ಷೆಯಲ್ಲಿ ಉನ್ನತ ಅಂಕ ಗಳಿಸಿ ಸಿರಿಸಿಲ್ಲ ಜಿಲ್ಲೆಯ ಚಿನ್ನ ಬೋನಾಳದ ತೆಲಂಗಾಣ ಸರ್ಕಾರದ ಗುರುಕುಲ ವಸತಿ ಕಾಲೇಜಿನಲ್ಲಿ ಸ್ನಾತಕೋತ್ತರ ಉಪನ್ಯಾಸಕಿ ಹುದ್ದೆಗೆ ಅಯ್ಕೆಯಾಗಿದ್ದಾರೆ. ಮಗಳು ಅಲೇಖ್ಯಾ TSPSCಯಲ್ಲಿ ರಾಜ್ಯಮಟ್ಟದ ಪ್ರಥಮ ರ್ಯಾಂಕ್ ಪಡೆದು ರಾಜಣ್ಣ ಸಿರಿಸಿಲ್ಲ ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಜಿಲ್ಲಾ ಸಿಡಿಪಿಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾಯಿ ಮತ್ತು ಮಗಳು ಒಂದೇ ಮನೆಯಲ್ಲಿ ಎರಡು ಸರ್ಕಾರಿ ಕೆಲಸಗಳನ್ನು ಪಡೆಯುತ್ತಾರೆ ಎಂದರೆ ಅವರ ಶ್ರಮ ಅನನ್ಯ ಎನ್ನುತ್ತಾರೆ.ನಮ್ಮ ಸಾಧನೆಯ ಯಶಸ್ಸು ರಮೇಶ್ ಗೆ ಸಲ್ಲುತ್ತದೆ ಎಂದು ತಾಯಿ ಮಗಳಿಬ್ಬರೂ ಖುಷಿಯಿಂದ ಹೇಳುತ್ತಾರೆ.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Sunday, April 27