ನ್ಯೂಜ್ ಡೆಸ್ಕ್:ಅಮ್ಮ ಓದು ನನಗೆ ತಲೆಗೆ ಹತ್ತುತ್ತಿಲ್ಲ ಪಾಠಗಳು ಅರ್ಥ ಆಗುತ್ತಿಲ್ಲ. ನನಗೆ ಟೆನ್ಷನ್ ಆಗುತ್ತಿದೆ. ನನ್ನ ಮನಸ್ಸು ನನಗೆ ಅರ್ಥ ಆಗುತ್ತಿಲ್ಲ ಹುಚ್ಚು ಹಿಡಿಯುತ್ತಿದೆ. ಏನು ಮಾಡಬೇಕೆಂದು ನನಗೂ ತಿಳಿಯುತ್ತಿಲ್ಲ. ಇವುಗಳನ್ನು ನಿನಗೆ ಹೇಳಲು ಸಾಧ್ಯವಾಗುತ್ತಿಲ್ಲ ಮೊದಲ ವರ್ಷದ ಶುಲ್ಕ ಪಾವತಿಸಲಾಗಿದೆ ಎಂದು ಕೇಳಿದೆ. ನಾನು ಕಡಿಮೆ ಅಂಕಗಳನ್ನು ಪಡೆದರೆ, ನೀನು ಅದನ್ನು ಸಹಿಸುವುದಿಲ್ಲ ಐಅಮ್ ಸಾರಿ. ನಾನು ಸಾಯುತ್ತಿದ್ದೇನೆ. ಸಹೋದರಿಯನ್ನು, ಚೆನ್ನಾಗಿ ಓದಿಸಿ ಅದಕ್ಕಾಗಿ ಒಳ್ಳೆಯ ಕಾಲೇಜು, ಒಳ್ಳೆಯ ವಿಷಯ ತೆಗೆದುಕೊಳ್ಳುವಂತೆ ತಿಳಿ ಹೇಳಿ ಎಲ್ಲರೂ ಜಾಗರೂಕರಾಗಿರಿ, ಒಳ್ಳೆಯದಾಗಲಿ ಎಂದು ತೆಲಂಗಾಣದ ಹನುಮಕೊಂಡ ಜಿಲ್ಲೆಯ ನಯೀಮ್ನಗರದ ಕಾಲೇಜಿನಲ್ಲಿ ಪ್ರಥಮ ವರ್ಷದ ಇಂಟರ್ ವಿದ್ಯಾರ್ಥಿನಿ ಮಿತ್ತಪಲ್ಲಿ ಶಿವಾನಿ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ತನ್ನ ತಾಯಿಗೆ ಪತ್ರ ಬರೆದು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಇಂದಿನ ಸಮಾಜದಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಮಾನಸಿಕ ಒತ್ತಡ ಸಮಸ್ಯೆಗಳನ್ನು ಪ್ರತಿಬಿಂಬಿಸುತ್ತದೆ. ಹೆತ್ತವರು ತನ್ನನ್ನು ಅರ್ಥಮಾಡಿಕೊಳ್ಳುತ್ತಿಲ್ಲ ಅವರಿಂದ ಬರುವಂತ ಒತ್ತಡ,ಇಷ್ಟವಿಲ್ಲದ ವಿಷಯಗಳನ್ನು ಅಧ್ಯಯನ ಮಾಡಲು ಸಾಧ್ಯವಾಗದೆ ತಾನು ಹೇಗೆ ದಣಿದಿದ್ದೇನೆ ಒದು ತಲೆ ಹತ್ತದೆ ಅವಳ ತೊಳಲಾಟ ಅವಳು ಬರೆದ ಪ್ರತಿಯೊಂದು ಪದದಲ್ಲೂ ವಿವರಿದ್ದಾಳೆ ತನ್ನ ಹೆತ್ತವರಿಗೆ ನೇರವಾಗಿ ಹೇಳಲು ಸಾಧ್ಯವಾಗದೆ ಅಕ್ಷರ ರೂಪದಲ್ಲಿ ವಿವರಿಸಿದ್ದಾಳೆ.
ಆತ್ಮಹತ್ಯೆಯ ಆಲೋಚನೆ ಹುಟ್ಟುವುದೆ ಅವಾಗ!
ಮಕ್ಕಳಿಗೆ ಇಷ್ಟವಿಲ್ಲದ ವಿಷಯಗಳನ್ನು ಅಧ್ಯಯನ ಮಾಡಲು ಒತ್ತಾಯಿಸಿದರೆ,ಆರಂಭದಲ್ಲಿ ಒಪ್ಪಿದರೂ, ಅಂತಿಮವಾಗಿ ವಿದ್ಯಾರ್ಥಿಗಳು ಒತ್ತಡಕ್ಕೆ ಒಳಗಾಗುತ್ತಾರೆ.ಓದುತ್ತಿರುವ ಕೋರ್ಸ್ ಬಗ್ಗೆ ಆಸಕ್ತಿ ಇರುವುದಿಲ್ಲ ಈ ಬಗ್ಗೆ ಪೋಷಕರು ಮತ್ತು ಕಾಲೇಜು ಶಿಕ್ಷಕರಿಗೆ ತಿಳಿಸಲು ಹಿಂಜರಿಯುವ ವಿದ್ಯಾರ್ಥಿಗಳು ಖಿನ್ನತೆಗೆ ಒಳಗಾಗುತ್ತಾರೆ. ಅದೇ ಸಮಯದಲ್ಲಿ, ಅವರಲ್ಲಿ ಆತ್ಮಹತ್ಯೆಯ ಆಲೋಚನೆ ಹುಟ್ಟುತ್ತದೆ, ಇಂತಹ ಸಂದರ್ಭದಲ್ಲಿ ಕನಿಷ್ಠ ಧ್ಯರ್ಯ ಹೇಳುವವರು ಅಥಾವ ಪೋಷಕರು ಜತೆಗಿದ್ದರೆ ಆತ್ಮಹತ್ಯೆ ಆಲೋಚನೆಯಿಂದ ವಿದ್ಯಾರ್ಥಿಗಳನ್ನು ಹೊರತರಬಹುದು ಅದನ್ನು ಬಹುತೇಕ ಪೋಷಕರು ಅರ್ಥಮಾಡಿಕೊಳ್ಳಲಾರರು ವೇಗದ ಬದುಕಿನ ಒತ್ತಡಕ್ಕೆ ಸಿಲುಕಿರುವ ಪೋಷಕರು ತನ್ನ ಮಗ-ಮಗಳು ಇಂಜನಿಯರ್ ಆಗಬೇಕು ವೈದ್ಯನಾಗಬೇಕು ಐ.ಎ.ಎಸ್ ಒದಬೇಕು ಎಂದು ತಮ್ಮ ಆಲೋಚನೆಗಳನ್ನು ಮಕ್ಕಳ ಮೇಲೆ ಹೇರುತ್ತಾರೆ.ತಮ್ಮ ಮಕ್ಕಳು ತಾವು ಬಯಸುವ ವಿದ್ಯಾಭ್ಯಾಸ ಮಾಡಲು ಮಾನಸಿಕವಾಗಿ ಮತ್ತು ದೈಹಿಕವಾಗಿ ಸಿದ್ಧರಾಗಿದ್ದಾರ ಅದಕ್ಕೆ ಅವರು ಅರ್ಹರ ಎಂದು ತಿಳಿದುಕೊಳ್ಳದೆ ಎದರು ಮನೆಯ ವಿಧ್ಯಾರ್ಥಿ ಇಂಜನಿಯರ್ ಆದ ಪಕ್ಕದ ಮನೆ ಹುಡುಗ ದೊಡ್ಡ ಹುದ್ದೆಗೆ ಏರುವನಿದ್ದಾನೆ ಪರಿಚಯಸ್ಥರ ವಿಧ್ಯಾರ್ಥಿ ನಂಟರ ಹುಡುಗ ಏನೋ ವಿಶೇಷವಾದುದನ್ನು ಓದುತ್ತಿದ್ದಾರೆ ಅನ್ನುವುದನ್ನು ಬಿಟ್ಟು ತಮ್ಮ ಮನೆಯ ಮಕ್ಕಳ ಭಾವನೆಗಳಿಗೆ ಸ್ಪಂದಿಸಿ ಅವರಿಗೆ ಯಾವ ಕೋರ್ಸ್ ಇಷ್ಟವೊ ಎಂಬುದರ ಬಗ್ಗೆ ತಿಳಿದುಕೊಂಡು ಅದನ್ನು ಪ್ರೋತ್ಸಾಹಿಸುವುದು ಉತ್ತಮ ಮಕ್ಕಳ ಭವಿಷ್ಯತ್ತು ಅನ್ನು 10 ನೇ ತರಗತಿ ಫಲಿತಾಂಶದ ಸಂದರ್ಭದಲ್ಲಿ ನಿರ್ಧಾರ ಮಾಡಬಹುದಾಗಿದ್ದು ಮುಂದೆ ಅವರು ಯಾವ ಕ್ಷೇತ್ರದ ಬಗ್ಗೆ ಆಸಕ್ತಿ ಹೊಂದಿದ್ದಾರೆ ಎಂಬುದನ್ನು ಅರಿಯಬಹುದಾಗಿರುತ್ತದೆ ಎಂಬುದು ಶಿಕ್ಷಣ ತಜ್ಞರ ಅಭಿಪ್ರಾಯ.
ಶೈಕ್ಷಣಿಕ ಸಂಸ್ಥೆಗಳಲ್ಲಿ ಸಮಾಲೋಚನೆ ಕೇಂದ್ರ
ಮಕ್ಕಳ ಭಾವನೆಗಳಿಗೆ ಪೋಷಕರು ಸ್ಪಂದಿಸದ ಸಂದರ್ಭದಲ್ಲಿ ಪ್ರತಿ ದಿನ ವಿದ್ಯಾರ್ಥಿಗಳನ್ನು ಗಮನಿಸುತ್ತಿರುವ ಶಿಕ್ಷಕರು ವಿದ್ಯಾರ್ಥಿಯ ಭಾವನೆಗಳಿಗೆ ಬಗ್ಗೆ ಕನಿಷ್ಠ ಅಧ್ಯಯನ ಮಾಡಲು ಶೈಕ್ಷಣಿಕ ಸಂಸ್ಥೆಗಳಲ್ಲಿ ಸಮಾಲೋಚನಾ ಕೇಂದ್ರಗಳನ್ನು ಸ್ಥಾಪಿಸಬೇಕು ಖಿನ್ನತೆಗೆ ಒಳಗಾದ ಹಾಗೆ ಒದಿನ ಬಗ್ಗೆ ಆಸಕ್ತಿ ಇಲ್ಲದ ವಿದ್ಯಾರ್ಥಿಗಳನ್ನು ಅಲ್ಲಿ ಕೂರಿಸಿ ಅವರ ಭಾವನೆಗಳನ್ನು ಅರ್ಥಮಾಡಿಕೊಂಡು ಪೋಷಕರನ್ನು ಕರೆಸಿ ಅವರ ಮಕ್ಕಳ ಸಮಸ್ಯೆ ವಿವರಿಸಿ ಪರಿಹಾರ ಕೋಟ್ಟಿದ್ದೆ ಆದಲ್ಲಿ ಮಕ್ಕಳ ಜೀವ ಉಳಿಸಿದ ಪುಣ್ಯ ಶಿಕ್ಷಣ ಸಂಸ್ಥೆಗೆ ಸಿಗುತ್ತದೆ. ಶಾಲೆಗಳಲ್ಲಿ ಇರಬೇಕು ಸಮಾಲೋಚನಾ ಕೇಂದ್ರ
ಶಿಕ್ಷಣ ಸಂಸ್ಥೆಗಳಲ್ಲಿ ಮಾನಸಿಕ ಒತ್ತಡವನ್ನು ತಡೆಗಟ್ಟುವ ವಿಷಯಗಳ ಕುರಿತಾಗಿ ಪ್ರತಿದಿನ ಸ್ವಲ್ಪ ಸಮಯ ಕಲಿಸಬೇಕು. ವಿದ್ಯಾರ್ಥಿಗಳು ನಿರುತ್ಸಾಹಗೊಳ್ಳದಂತೆ ಮತ್ತು ಅವರ ಆದ್ಯತೆಗಳನ್ನು ಗುರುತಿಸಲು ಪೋಷಕರು ಸಮಾಲೋಚನೆ ಮಾಡಬೇಕು.ಶೈಕ್ಷಣಿಕ ವ್ಯಸ್ಥೆಯಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆಯಷ್ಟೆ ಅಲ್ಲ ಮಕ್ಕಳ ಮನೋ ಉಲ್ಲಾಸಕ್ಕೆ ಆಗಬೇಕಾಗಿರುವುದು ಸಾಕಷ್ಟು ಇದೆ ಅದನ್ನು ಪೋರೈಸಬೇಕು ಸಮಾಲೋಚನೆ ನಡೆಸಬೇಕು ಆತ್ಮಸ್ಥೈರ್ಯ ತುಂಬುವಂತಾಗಬೇಕು ಪ್ರತಿಶಾಲೆಯಲ್ಲೂ ಇಂತಹ ಸಮಾಲೋಚನ ಕೇಂದ್ರಗಳು ಇರಬೇಕು.



