ಹೋಸಕೋಟೆ ಮಾರ್ಗವಾಗಿ ಕೋಲಾರಕ್ಕೆ ಹಾಗು ಕೆಂಪೇಗೌಡ ವಿಮಾನ ನಿಲ್ದಾಣದಿಂದ ಚಿಕ್ಕಬಳ್ಳಾಪುರಕ್ಕೆ ಮೆಟ್ರೋ ರೈಲು ವ್ಯವಸ್ಥೆಗೆ ವಿಸ್ತೃತ ಯೋಜನಾ ವರದಿ ತಯಾರಿಸುವಂತೆ ಬೆಂಗಳೂರು ಅಭಿವೃದ್ಧಿ ಸಚಿವ ಮತ್ತು ಉಪ ಮುಖ್ಯಮಂತ್ರಿಡಿ.ಕೆ ಶಿವಕುಮಾರ್ ಡಿ.ಕೆ. ಶಿವಕುಮಾರ್ ಸೂಚನೆ ನೀಡಿರುವುದು ಕೋಲಾರ-ಚಿಕ್ಕಬಳ್ಳಾಪುರ ಜನರ ಬಹುನಿರೀಕ್ಷಿತ ಕನಸು ನನಸಾಗುವ ದಿನಗಳು ಬರಲಿವೆ.
ನ್ಯೂಜ್ ಡೆಸ್ಕ್:ಬೆಂಗಳೂರಿನ ಮೆಟ್ರೋ ರೈಲು ಮಾರ್ಗ ಕೋಲಾರ ಹಾಗು ಚಿಕ್ಕಬಳ್ಳಾಪುರದವರಿಗೂ ವಿಸ್ತರಣೆ ಆಗಲಿದಿಯಂತೆ.ಈ ದಿಶೆಯಲ್ಲಿ ಸರ್ಕಾರ ಘೋಷಣೆ ಮಾಡಿದೆ.
ಮೆಟ್ರೋ ರೈಲು ಯೋಜನೆಯಿಂದ ಮಹಾನಗರದ ಲಕ್ಷಾಂತರ ಮಂದಿ ಜನತೆಗೆ ಸಂಚಾರ ಮುಖ್ತ ವ್ಯವಸ್ಥೆ ಒಡಾಡಲು ನಿಡಿದಂತಾಗುತ್ತದೆ. ಉದ್ಯೋಗ, ಶೈಕ್ಷಣಿಕ, ಕೃಷಿ ಕಾರ್ಮಿಕ ವರ್ಗ ರೈತ ಮತ್ತು ಸಾಮಾನ್ಯ ಪ್ರಯಾಣಿಕನಿಗೂ ಮೆಟ್ರೋ ರೈಲು ಬಹುವಿಧವಾಗಿ ಉಪಯೋವಾಗುತ್ತದೆ.
ಬೆಂಗಳೂರು ನಗರದಲ್ಲಿ ಓಡಾಡುತ್ತಿರುವ ಹಸಿರು, ಗುಲಾಬಿ ಮತ್ತು ನೀಲಿ ಮಾರ್ಗದ ಮೆಟ್ರೋ ಮಾರ್ಗವೀಗ ಬೆಂಗಳೂರಿನ ಪೂರ್ವ- ಪಶ್ಚಿಮ ಮತ್ತು ಉತ್ತರ – ದಕ್ಷಿಣದ ದಿಕ್ಕಿನಲ್ಲಿ ಸುಮಾರು ಮೂವತ್ತು ಕಿಲೋ ಮೀಟರ್ ಉದ್ದನೆಯ ಮಾರ್ಗ ಹೊಂದಿದ್ದು ಇದು ಮತ್ತಷ್ಟು ವಿಸ್ತರಣೆಯಾಗುವತ್ತ ಸಾಗಿದೆ. ಬೆಂಗಳೂರು ನಗರಕ್ಕೆ ಹೊಂದಿಕೊಂಡಿರುವ ರಾಮನಗರ, ತುಮಕೂರು ಕೋಲಾರ ಹಾಗೂ ಚಿಕ್ಕಬಳ್ಳಾಪುರದವರೆಗೆ ಮೆಟ್ರೋ ಮಾರ್ಗ ವಿಸ್ತರಣೆಯಾಗುವ ಬಗ್ಗೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿಕೆ ನೀಡಿದ್ದು ಇದಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳು ಸಹ ಆರಂಭಗೊಂಡಿರುವುದಾಗಿ ಹೇಳಲಾಗುತ್ತಿದೆ.
ಗ್ರೇಟರ್ ಬೆಂಗಳೂರು ಅಥಾರಿಟಿ ಮತ್ತು ಮೆಟ್ರೊ ಮಾರ್ಗ ವಿಸ್ತರಣೆಗೆ ಸಂಬಂಧ
ಗ್ರೇಟರ್ ಬೆಂಗಳೂರು ಅಥಾರಿಟಿ ಮತ್ತು ಮೆಟ್ರೊ ಮಾರ್ಗದ ವಿಸ್ತರಣೆಗೆ ನಿಕಟ ಸಂಬಂಧಗಳಿದ್ದು ಮಹಾನಗರದ ಪ್ರಗತಿ ಮತ್ತು ಬೆಳವಣಿಗೆಗೆ ಮೂಲಭೂತಸೌಕರ್ಯ ಸಾರಿಗೆ ಸಂಪರ್ಕ. ಈ ದಿಶೆಯಲ್ಲಿ ಬೆಂಗಳೂರು ವಾಹನ ಸಾಂದ್ರತೆಯನ್ನು ಪರಿಣಾಮಕಾರಿಯಾಗಿ ತಡೆಯುವ ಸಾಮರ್ಥ್ಯ ಇರುವುದು ಇಂದಿನ ದಿನಕ್ಕೆ ಮೆಟ್ರೋ ರೈಲು ಯೋಜನೆಯಿಂದ ಸಾಧ್ಯ ಎನ್ನುತ್ತಾರೆ ತಜ್ಣರು.ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದಾಟಿ ಶೈಕ್ಷಣಿಕ ಮತ್ತು ಕೃಷಿ ಪ್ರಧಾನವಾಗಿ ಅಭಿವೃದ್ಧಿ ಹೊಂದುತ್ತ ಪ್ರವರ್ದಮಾನಕ್ಕೆ ಬರುತ್ತಿರುವ ಪ್ರಮುಖ ಜಿಲ್ಲಾ ಕೇಂದ್ರಗಳಾದ ಕೋಲಾರ ಚಿಕ್ಕಬಳ್ಳಾಪುರಕ್ಕೆ ಉತ್ತಮ ಸಾರಿಗೆ ವ್ಯವಸ್ಥೆ ದೊರೆತರೆ ಬೆಂಗಳೂರು ನಡುವಿನ ವಾಣಿಜ್ಯ ವ್ಯಾಪಾರ ಇನ್ನಿತರೆ ಆರ್ಥಿಕ ಚಟುವಟಿಕೆಗಳು ಶರವೇಗದಲ್ಲಿ ಅಭಿವೃದ್ಧಿಯಾಗುವ ಲೆಕ್ಕಾಚಾರ.



