ಬೆಂಗಳೂರು:ಬೆಂಗಳೂರಿನ ಪ್ರಖ್ಯಾತ ಹಳೇಯ ಕೋಆಪರೇಟಿವ್ ಬ್ಯಾಂಕ್ ಗಳಲ್ಲಿ ಒಂದಾದ ದಿ. ಗ್ರೈನ್ ಮರ್ಚೆಂಟ್ಸ್ ಕೋ-ಆಪರೇಟಿವ್ ಬ್ಯಾಂಕ್ ನಿಯಮಿತದ(The GRAIN MERCHANTS CO-OPERATIVE BANK LTD)ನೂತನ ಅಧ್ಯಕ್ಷರಾಗಿ ಶ್ರೀನಿವಾಸಪುರ ತಾಲೂಕು ಯಲ್ದೂರಿನ ವಕೀಲ ಆನಂದಬಾಬು ಆಯ್ಕೆಯಾಗಿದ್ದಾರೆ.
ಬೆಂಗಳೂರು ನಗರದ ಚಾಮರಾಜಪೇಟೆಯ ಪಂಪಮಹಾಕವಿ ರಸ್ತೆಯಲ್ಲಿರುವ ದಿ. ಗ್ರೈನ್ ಮರ್ಚೆಂಟ್ಸ್ ಕೋಆಪರೇಟಿವ್ ಬ್ಯಾಂಕ್ 1927 ರಲ್ಲಿ ತನ್ನ ವಹಿವಾಟು ಪ್ರಾರಂಭಿಸಿದ್ದು ಬೆಂಗಳೂರಿನಾದ್ಯಂತ ಮೂರು ಶಾಖೆಗಳನ್ನು ಹೊಂದಿದೆ. 98 ವರ್ಷಗಳ ಹಳೆಯದಾದ ಸಹಕಾರಿ ತತ್ವದ ಬ್ಯಾಂಕ್ ವಾರ್ಷಿಕ ಸುಮಾರು 300 ಕೋಟಿ ರೂಪಾಯಿ ವಹಿವಾಟು ನಡೆಸಲಿದ್ದು ಕಮರ್ಷಿಯಲ್ ಬ್ಯಾಂಕುಗಳಂತೆ ಗ್ರಾಹಕರಿಗೆ ಎಲ್ಲಾ ರಿತಿಯ ಅನ್ಲೈನ್ ಸೇವೆಗಳನ್ನು ಗ್ರಾಹಕರಿಗೆ ನೀಡುತ್ತಿದೆ.
ಮೂಲತಃ ಯಲ್ದೂರಿನ ವಕೀಲ ಆನಂದಬಾಬು
ಶ್ರೀನಿವಾಸಪುರ ತಾಲೂಕಿನ ಯಲ್ದೂರಿನವರಾದ ವಕೀಲ ಆನಂದಬಾಬು ಯಲ್ದೂರಿನ ಹಿರಿಯ ರಾಜಕಾರಣಿ ಹಾಗು ಸಹಕಾರಿ ಧುರೀಣರಾಗಿದ್ದ ದಿ.ರಾಮಕೃಷ್ಣಪ್ಪನವರ ಮಗ ಕೃಷಿಕ ಕುಟುಂಬದ ಹಿನ್ನಲೆಯವರಾಗಿದ್ದು ಯಲ್ದೂರಿನ ರೇಷ್ಮೆ ಸಹಕಾರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು ತಮ್ಮ ಮಕ್ಕಳು ಸಹ ರಾಜಕಾರಣದಲ್ಲಿ ಉನ್ನತ ಸ್ಥಾನ ಪಡೆಯಬೇಕು ಎಂದು ಬಯಸಿದ್ದರು ಅದಕ್ಕಾಗಿ ಅನಂದಬಾಬು ಅವರನ್ನು ಬೆಂಗಳೂರಿನಲ್ಲಿ ಕಾನೂನು ಪದವಿ ಓದಿಸಿದ್ದರು.ಕಾನೂನ ಪದವಿ ಪಡೆದ ಅನಂದಬಾಬು ತಮ್ಮ ತಂದೆಯವರ ಆಶಯದಂತೆ ಹೈಕೋರ್ಟ್ ವಕೀಲರಾಗಿ ಸೇವೆ ಸಲ್ಲಿಸುತ್ತ ರಾಜಕೀಯ ಕ್ಷೇತ್ರದಲ್ಲೂ ಸಹ ಗುರುತಿಸಿಕೊಂಡಿದ್ದಾರೆ.
ಯಲ್ದೂರಿನ ವಕೀಲ ಆನಂದಬಾಬು ಗ್ರೈನ್ ಮರ್ಚೆಂಟ್ಸ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷರಾಗಿರುವುದಕ್ಕೆ ಶ್ರೀನಿವಾಸಪುರದ ಬೆರುಗಳು ಗೆಳೆಯರ ಬಳಗದ ವತಿಯಿಂದ ರಮೇಶ್ ಬಾಬು ಅಭಿನಂದನೆ ಸಲ್ಲಿಸಿದ್ದಾರೆ.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Saturday, April 26