ಶ್ರೀನಿವಾಸಪುರ:ಅಣ್ಣ-ತಂಗಿಯರ ಬಂಧವು ಸಹೋದರತೆಯ ಅನನ್ಯ ಬಾಂಧವ್ಯವಾಗಿದ್ದು, ರಕ್ಷಾಬಂಧನದಂತಹ ಹಬ್ಬಗಳ ಮೂಲಕ ತಂಗಿ ಅಣ್ಣನ ರಕ್ಷಣೆ ಮತ್ತು ಅಣ್ಣ ತಂಗಿಯರ ಒಳಿತನ್ನು ಬಯಸುವಂತ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಹೊಂದಿರುವ ಧರ್ಮ ಎಂದು ಭೈರವೇಶ್ವರ ವಿಧ್ಯ ಸಂಸ್ಥೆ ನಿರ್ದೇಶಕ ಕಲ್ಲೂರುವೆಂಕಟರೆಡ್ಡಿ ಹೇಳಿದರು
ಅವರು ಪಟ್ಟಣದ ಪತಂಜಲಿ ಯೋಗ ಶಿಕ್ಷಣ ಸಮಿತಿ ಯೋಗ ಮಂದಿರದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಶ್ರೀನಿವಾಸಪುರ ಶಾಖೆಯಿಂದ ನೂಲು ಹುಣ್ಣಿಮೆ ಅಂಗವಾಗಿ ಏರ್ಪಡಿಸಿದ್ದ ರಕ್ಷಾ ಬಂಧನ ಹಾಗು ಮಾತೃಭೋಜನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಾತೃಭೋಜನ ಸನಾತನ ಸಂಸ್ಕೃತಿಯ ಪ್ರತೀಕ ಅನ್ನ ಇಟ್ಟವರು ತಾಯಿಗೆ ಸಮಾನ, ವಾತ್ಸಲ್ಯ ಮೂರ್ತಿಯ ಕೈತುತ್ತು ಮಕ್ಕಳ ಸರ್ವಾಂಗಿಣ ಅಭಿವೃದ್ಧಿಗೆ ಸಂಕೇತ ಇಂತಹ ವೈಶಿಷ್ಟ ನಮ್ಮ ಧರ್ಮದಲ್ಲಿ ಮಾತ್ರ ಕಾಣಲು ಸಾಧ್ಯ ಪ್ರಪಂಚದಲ್ಲಿ ತಂತ್ರಜ್ಞಾನ ಎಷ್ಟೆ ಬೆಳೆದರು ಪ್ರತಿ ಮಹಿಳೆಯನ್ನು ಗೌರವದಿಂದ ಕಾಣೂವ ಮೂಲಕ ನಮ್ಮ ದೇಶದ ಸಂಸ್ಕೃತಿ ಸಂಸ್ಕಾರ ಪರಂಪರೆಯನ್ನು ಅಳವಡಿಸಿಕೊಂಡು ಸಾಗುವ ಅಗತ್ಯತೆ ಇದೆ ಎಂದರು.
ಸರಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಭೈರೇಗೌಡ ಮಾತನಾಡಿ ಇಂದು ಜನರು ಒತ್ತಡ ಮುಕ್ತ ಜೀವನ ಸಾಗಿಸಲು ಯೋಗ ಅದ್ಭುತವಾದ ಮದ್ದು ಸನಾತನ ಸಂಸೃತಿಯಿಂದ ಬಂದಂತ ಯೊಗವನ್ನು ಪ್ರತಿಯೊಬ್ಬರು ತೊಡಗಿಸಿಕೊಂಡು ಯೋಗ ಕಲಿತು ಆರೊಗ್ಯ ಕಾಪಾಡಿಕೊಳ್ಳುವಂತೆ ಸಲಹೆ ಇತ್ತರು.ಶಿಕ್ಷಕಿ ವರಲಕ್ಷ್ಮೀ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು ಭಾರತಿ, ಲಕ್ಷ್ಮಣರೆಡ್ಡಿ , ಚೌಡಪ್ಪ, ಶ್ರೀನಿವಾಸಗೌಡ ಮುಂತಾದವರು ಇದ್ದರು.ದೊಡ್ಡ ಸಂಖ್ಯೆಯಲ್ಲಿ ನೆರದಿದ್ದ ತಾಯಂದಿರು ತಾವು ತಂದಿದ್ದ ಭೋಜನವನ್ನು ಯೋಗ ಬಂಧುಗಳಿಗೆ ಕೈತುತ್ತು ನೀಡಿದರು.



