ಚಿಂತಾಮಣಿ:ಪ್ರಸಿದ್ದ ವೆಂಕಟರಮಣಸ್ವಾಮಿ ಪುಣ್ಯಕ್ಷೇತ್ರ ಆಲಂಬಗಿರಿಯ ಶ್ರೀಲಕ್ಷ್ಮೀ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಶ್ರೀವರಮಹಾಲಕ್ಷ್ಮೀ ವ್ರತವನ್ನು ಶ್ರದ್ಧಾಭಕ್ತಿಗಳಿಂದ ಆಚರಿಸಲಾಯಿತು. ದೇವಾಲಯದ ಆವರಣದಲ್ಲಿರುವ ಲಕ್ಷ್ಮೀ ದೇವಾಲಯದ ಮುಂಭಾಗದಲ್ಲಿ ಸಾಮೂಹಿಕವಾಗಿ ವರಮಹಾಲಕ್ಷೀ ಪೂಜಾವ್ರತದ ನಡೆಸಲಾಯಿತು.

ಗ್ರಾಮಸ್ಥರು ಮತ್ತು ಸುತ್ತ ಮುತ್ತಲಿನ ಗ್ರಾಮಗಳ ಸುಹಾಸಿನಿಯರು ವರಮಹಾಲಕ್ಷ್ಮೀ ವ್ರತಾಚರಣೆಯಲ್ಲಿ ಪಾಲ್ಗೊಂಡಿದ್ದರು. ವರಮಹಾಲಕ್ಷ್ಮೀ ವ್ರತಾಚರಣೆಗೆ ಬಂದಿದ್ದ ಸುಹಾಸಿನಿಯರಿಗೆ ಕೈವಾರದ ಶ್ರೀಯೋಗಿನಾರೇಯಣ ಮಠದ ವತಿಯಿಂದ ಪೂಜಾ ಸಾಮಾಗ್ರಿಗಳನ್ನು ನೀಡಲಾಗಿತ್ತು. ಸರ್ವಾಲಂಕೃತವಾದ ಪೀಠದಲ್ಲಿ ವರಮಾಹಲಕ್ಷ್ಮೀಯನ್ನು ಕೂರಿಸಿ ನೂತನ ವಸ್ತ್ರಾಭರಣ ಹಾಗೂ ವಿವಿಧ ಬಗೆಯ ಹೂಗಳಿಂದ, ಅಮ್ಮನವರನ್ನು ಸಿಂಗರಿಸಲಾಗಿತ್ತು. ಲಕ್ಷ್ಮೀ ದೇವಾಲಯದ ಅರ್ಚಕ ವೃಂದದವರು ಸುಹಾಸಿನಿತರ ಕೈಯಲ್ಲಿ ಕುಂಕುಮಾರ್ಚನೆ ಮಾಡಿಸಿ ಸಾಲಾಂಕೃತ ಪೂಜೆ ಮಾಡಿಸುವ ಮೂಲಕ ವ್ರತಾಚರಣೆ ಮಾಡಿಸಿದರು.ಕೈವಾರ ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ.ಎಂ.ಆರ್.ಜಯರಾಮ್ ದಂಪತಿ ವರಮಹಾಲಕ್ಷ್ಮೀ ಪೂಜೆಯಲ್ಲಿ ಭಾಗವಹಿಸಿದ್ದರು.



