ಶ್ರೀನಿವಾಸಪುರ: ಕೌಟಂಬಿಕ ಕಲಹದ ನ್ಯಾಯ ಪಂಚಾಯಿತಿಯಲ್ಲಿ ಮಾತನಾಡಿದ್ದ ವ್ಯಕ್ತಿ ಅನುಮಾನ್ಪದವಾಗಿ ಮೃತಪಟ್ಟಿರುತ್ತಾನೆ ಮೃತನ ಕಡೆಯವರು ಎದುರಾಳಿ ಮಾಡಿದ ಹಿನ್ನಲೆಯಲ್ಲಿ ಮನೆಗೆ ಬೆಂಕಿ ಹಚ್ಚಿರುವ ಘಟನೆ ತಾಲೂಕಿನ ಗೌವವಿಪಲ್ಲಿ ಪೋಲಿಸ್ ಠಾಣೆ ವ್ಯಾಪ್ತಿಯ ಕೋಡಿಪಲ್ಲಿ ಪಂಚಾಯಿತಿಯ ಕರಿಪಲ್ಲಿ ಗ್ರಾಮದಲ್ಲಿ ನಡೆದಿರುತ್ತದೆ.
ಮೃತ ವ್ಯಕ್ತಿಯನ್ನು ವೆಂಕಟರವಣಪ್ಪ (55) ಎಂದು ಗುರುತಿಸಲಾಗಿದೆ ಮೃತ ವ್ಯಕ್ತಿಯ ಮೊಮ್ಮಗಳ ಗಂಡ ಗಣೇಶನೆ ವೆಂಕಟರಮಣಪ್ಪನನ್ನು ಕೊಲೆಮಾಡಿರುವ ಶಂಕೆ ವ್ಯಕ್ತಪಡಿಸಲಾಗಿದೆ.ಕೊಲೆ ವಿಷಯ ಹೊರಬಿಳುತ್ತಿದ್ದಂತೆ ಮೃತನ ಮನೆಯವರು ಮೊಮ್ಮಗಳ ಗಂಡ ಗಣೇಶನ ಸೋದರ ಮಾವ ಲಚ್ಚನ್ನನ ಮನೆಗೆ ಬೆಂಕಿ ಹಾಕಿದ್ದು ಮನೆ ಹಾಗು ಪೀಠೋಪಕರಣಗಳು ಹಾಗೂ ಬಟ್ಟೆಗಳು ಭಸ್ಮವಾಗಿದೆ
ಮೃತನ ಮೊಮ್ಮಗಳಾದ ಶೋಬಾಳನ್ನು ಚಿಂತಾಮಣಿ ತಾಲೂಕಿನ ಬಟ್ಟಲಪಲ್ಲಿ ಮಾವುಕೆರೆ ಗ್ರಾಮದ ಗಣೇಶನಿಗೆ ಕೊಟ್ಟು ವಿವಾಹ ಮಾಡಲಾಗಿತ್ತು ದಾಂಪತ್ಯ ಜೀವನದ ಕುರಿತಾಗಿ ದಂಪತಿ ನಡುವಿನ ಜಗಳಕ್ಕೆ ಎರಡು ದಿನಗಳ ಹಿಂದಿನ ರಾತ್ರಿ ಗ್ರಾಮದಲ್ಲಿ
ನ್ಯಾಯ ಪಂಚಾಯತಿ ಮಾಡಲಾಗಿದೆ ಈ ಸಂದರ್ಭದಲ್ಲಿ ಎರಡು ಕುಟುಂಬದವರ ನಡುವೆ ಮಾತಿಗೆ ಚಕಮಕಿ ನಡೆದಿರುತ್ತದೆ ಇದು ಗಲಾಟೆಗೆ ತಿರುಗಿದೆ ಇದರಿಂದ ಮೊಮ್ಮಗಳ ಗಂಡ ಗಣೇಶ್ ಹಾಗೂ ಸಹಚರರು ವೆಂಕಟರಣಪ್ಪನನ್ನು ತಳ್ಳಾಡಿದ್ದು ಇದರಿಂದ ಗಾಯಗೊಂಡ ವೆಂಕಟರಮಣಪ್ಪ ಮೃತರಾಗಿದ್ದಾರೆ ಎನ್ನಲಾಗಿದೆ ಇದರಿಂದ ರೊಚ್ಚಿಗೆದ್ದ ಮೃತ ವ್ಯಕ್ತಿಯ ಕಡೆಯವರು ಗಣೇಶನ ಸೋದರ ಮಾವ ಲಚ್ಚನ್ನನ ಮನೆಗೆ ಬೆಂಕಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಪೋಲಿಸರು ಹೇಳುತ್ತಾರೆ.
ಘಟನಾ ಸ್ಥಳಕ್ಕೆ ಕೋಲಾರ ಅಡಿಷನಲ್ ಎಸ್ ಪಿ ಸಚಿನ್,ಮುಳಬಾಗಿಲು ಡಿ.ವೈ.ಎಸ್.ಪಿ ಜಯಶಂಕರ್,ಗೌವನಪಲ್ಲಿ ವೃತ್ತ ನೀರಿಕ್ಷಕ ಜಯಾನಂದ ಭೇಟಿ ನೀಡಿ ಪರಿಶೀಲನೆ ಮಾಡಿದ್ದು,ಮುನ್ನೆಚ್ಚರಿಕೆಯಾಗಿ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Saturday, April 26