ಶ್ರೀನಿವಾಸಪುರ ಪಟ್ಟಣದ ಎಂ.ಜಿ.ರಸ್ತೆಯಲ್ಲಿ ತರಕಾರಿ ಅಂಗಡಿಗಳಿಗೆ ತನ್ನದೆ ಆದ ಇತಿಹಾಸ ಇದೆ ಇದು ಇಂದು ನಿನ್ನೆಯದಲ್ಲಿ ಐದು ದಶಕಕ್ಕೂ ಹೆಚ್ಚು ಹಳೆಯ ತರಕಾರಿ ಮಾರುಕಟ್ಟೆ ಎನ್ನಬಹುದು. ಇಲ್ಲಿ ತರಕಾರಿ ಮಾರುಕಟ್ಟೆ ಪ್ರಾಂರಭಿಸಿದ್ದು ತರಕಾರಿ ವ್ಯಾಪರಸ್ಥರಲ್ಲ ಬದಲಾಗಿ ತರಕಾರಿ ಬೆಳೆದ ರೈತರೆ ತಾವು ಬೆಳೆದ ತರಕಾರಿ ಮತ್ತು ಹಣ್ಣುಗಳನ್ನು ಮಂಕರಿಯಲ್ಲಿ ತಂದು ರೈತರು ಇಲ್ಲಿ ಮಾರಾಟ ಶುರುಮಾಡಿದರು.

ಶ್ರೀನಿವಾಸಪುರ:ಪಟ್ಟಣ ಆಗೆಲ್ಲ ದೊಡ್ಡದಾಗಿ ಬೆಳೆದಿರಲಿಲ್ಲ ಊರು ಅಂದರೆ ಎಂ.ಜಿ.ರಸ್ತೆ ದಕ್ಷಿಣಕ್ಕೆ ಹೋದರೆ ಸಿಗುವ ಮುಳಬಾಗಿಲು ವೃತ್ತ, ಅಲ್ಲಿ ಎಡಕ್ಕೆ ತಿರುಗಿ ಹೋದರೆ ಅಲ್ಲೊಂದು ಇಲ್ಲೊಂದು ಮನೆಗಳು ಕಾಣುತ್ತಿದ್ದ ಹಳೇಪೇಟೆ,ಸುತ್ತಾಕಿ ಬಂದರೆ ವಲ್ಲಭಾಯ್ ರಸ್ತೆ,ಈಗಿನ ನೆಹರು ರಸ್ತೆ,ದಾಟಿ ಎಂ.ಜಿ.ರಸ್ತೆಯಲ್ಲಿ ಉತ್ತರಕ್ಕೆ ಹೋದರೆ ಬಸ್ ನಿಲ್ದಾಣವೃತ್ತ ಮುಂದೆ ಹೋದರೆ ತಾಲೂಕು ಆಫಿಸ್ ಇನ್ನಂದಷ್ಟು ಮುಂದೆ ಸಾಗಿದರೆ ಮಿಡ್ಲಸ್ಕೂಲ್,ಇನ್ನೊಂದೆರಡು ಹೆಜ್ಜೆ ಹಾಕಿದರೆ ಎಲೆಕ್ಟ್ರಿಕ್ ಆಫಿಸ್ ಅದಾದ ಮೆಲೆ ಕೊನೆ ಅಂದರೆ ಹೈಸ್ಕೂಲ್,ಬಸ್ಟಾಂಡ್ ನಿಂದ ಚಿಂತಾಮಣಿ ಕಡೆ ಹೋದರೆ ಅರಣ್ಯ ಇಲಾಖೆ ಕಚೇರಿ ಎನ್.ಇ.ಎಸ್ ಕ್ವಾಟ್ರಸ್ ಚಿಂತಾಮಣಿ ಸರ್ಕಲ್ ಇಷ್ಟೆ ಶ್ರೀನಿವಾಸಪುರ ಪಟ್ಟಣ.


ರೈತರೆ ಅಸ್ತಿತ್ವಕ್ಕೆ ತಂದ ತರಕಾರಿ ಮಾರುಕಟ್ಟೆ
ಇಂತಹ ಸಣ್ಣ ಪಟ್ಟಣದಲ್ಲಿ ಎಲ್ಲೂ ಸೂಕ್ತವಾದ ಜಾಗವಿಲ್ಲದ ಕಾರಣ ಅನಿವಾರ್ಯ ಪರಿಸ್ಥಿತಿಯಲ್ಲಿ ಸುಮಾರು ಐವತ್ತು ವರ್ಷಗಳಿಗೂ ಹಿಂದೆ ರೈತರೆ ಅಸ್ತಿತ್ವಕ್ಕೆ ತಂದ ತರಕಾರಿ ಮಾರುಕಟ್ಟೆ ಇತಿಹಾಸ. ಶ್ರೀನಿವಾಸಪುರದ ಎಂ.ಜಿ.ರಸ್ತೆಯ ತರಕಾರಿ ಅಂಗಡಿಗಳು ಇರುವ ಸ್ಥಳದಲ್ಲಿ ಅಂದು ಗ್ರಂಥಾಲಯ ಛಾವಡಿ, ರತ್ನಪ್ಪನವರ ಅಂಗಡಿ ಬಿಟ್ಟರೆ ಇಲ್ಲಿ ಯಾವುದೆ ವಾಣಿಜ್ಯ ಅಥಾವ ವ್ಯವಹಾರಿಕ ಕೇಂದ್ರಗಳು ಇರಲಿಲ್ಲ(ಈಗಲೂ ಇಲ್ಲ) ಹಾಗಾಗಿ ಈ ಸ್ಥಳದಲ್ಲಿ ಹೆಚ್ಚಿನ ಜನಸಂದಣಿ ಸೇರುತ್ತಿರಲಿಲ್ಲ ಅದು ಪಟ್ಟಣದ ಮಧ್ಯಭಾಗವಾಗಿತ್ತು. ಪಟ್ಟಣದ ರಾಜಾಜಿರಸ್ತೆ ವಲ್ಲಭಾಯ್ ರಸ್ತೆ ಬಸ್ ನಿಲ್ದಾಣ ಭಾಗದಿಂದ ಮುಳಬಾಗಿಲು ವೃತ್ತ ಹಳೆಪೇಟೆ ಯಾವುದೆ ಭಾಗದಿಂದ ಬರುವಂತವರಿಗೆ ಇದು ಕೇಂದ್ರವಾಗಿ ಭೌಗೋಳಿಕವಾಗಿ ಕೇಂದ್ರ ಸ್ಥಳವಾಗಿ ಸಮಾನ ದೂರದಲ್ಲಿತ್ತು “Center of a place”. ಹಾಗಾಗಿ ಈಗಿನ ತರಕಾರಿ ಮಾರುಕಟ್ಟೆ ರಸ್ತೆ ಬದಿಯಲ್ಲಿ ಇದ್ದಂತ ಕಾಲಿ ಜಾಗದಲ್ಲಿ ಮುಂಜಾನೆ ನಸುಕಿನಲ್ಲಿ ಹಳ್ಳಿಗಳಿಂದ ರೈತರು ತಾವೇ ಬೆಳೆದ ತರಕಾರಿಗಳನ್ನು ಮಂಕರಿಗಳಲ್ಲಿ ತಂದು ರಸ್ತೆ ಬದಿ ಕುಳಿತು ಮಾರಾಟ ಮಾಡಿಕೊಳ್ಳುತ್ತಿದ್ದರು.ಮಳೆಯಿರಲಿ ಚಳಿ ಇರಲಿ ನಸುಕಿನಲ್ಲಿ ತಾಜ ದಂಟಿನ ಸೊಪ್ಪು ಸೇರಿದಂತೆ ಸಂಪ್ರದಾಯಿಕ ತರಕಾರಿ ಇಲ್ಲಿಗೆ ಮಾರಾಟಕ್ಕೆ ತರುತ್ತಿದ್ದರು,ಮುಂದೆ ಹಾಲು ಮೊಸರು,ಹಳ್ಳಿತುಪ್ಪ ಹಾಗು ಬೆಣ್ಣೆಯಂತ ಪದಾರ್ಥಗಳನ್ನು ಇಲ್ಲಿಗೆ ತಂದು ಮಾರುತ್ತಿದ್ದರು ಇಲ್ಲಿ ಬಂದರೆ ತಾಜ ತರಕಾರಿಗಳು ಬೆಣ್ಣೆ-ತುಪ್ಪ ಸಿಗುತ್ತವೆ ಎಂದು ಪ್ರಚಾರ ಪಡೆದು, ಕೊಳ್ಳುವರ ಸಂಖ್ಯೆ ಹೆಚ್ಚಾಯಿತು ಸಣ್ಣ ಮಟ್ಟದಲ್ಲಿ ತರಕಾರಿ ಬೆಳೆಯುತ್ತಿದ್ದ ರೈತರು ವಾಣಿಜ್ಯ ಬೆಳೆಯಾಗಿ ತರಕಾರಿ ಬೆಳೆಯಲು ಶುರುಮಾಡಿದರು ಕೆಲಸ ಕಾರ್ಯ ಹೆಚ್ಚಾಯಿತು ಜನರು ಬರುವುದು ಹೆಚ್ಚಾಯಿತು ರೈತರು ತಾವು ಖುದ್ದಾಗಿ ತರಕಾರಿ ಮಾರಲು ಸಾಧ್ಯವಾಗದೆ ಮೂಲೆಗಳಲ್ಲಿ ತಂದೆ ತರಕಾರಿಗಳನ್ನು ದಲ್ಲಾಲರಿಗೆ ಮಾರಾಟ ಮಾಡಿ ಹೋಗುತ್ತಿದ್ದರು ದಲ್ಲಾಲರು ತಾವು ರೈತರಿಂದ ಖರೀದಿಸಿದ ತರಕಾರಿಗಳನ್ನು ಮಾರಾಟಮಾಡಲು ತರಕಾರಿ ಅಂಗಡಿಗಳನ್ನು ಪ್ರಾರಂಭಿಸಿದರು ಮುಂದೆ ಅದು ಬೆಳೆಯುತ್ತ ಹತ್ತಾರು ತರಕಾರಿ ಅಂಗಡಿಗಳಾಯಿತು ಈಗ ಐದಾರು ಅಂಗಡಿಗಳು ಮಾತ್ರಾ ಇವೆ. ಮುಂದೆ 15-20 ವರ್ಷಗಳ ಹಿಂದೆ ಬಸ್ ನಿಲ್ದಾಣದ ಮುಂಭಾಗದಲ್ಲಿ ಒಂದೇರಡು ತರಕಾರಿ ಮಂಡಿಗಳು ಆರಂಭವಾಯಿತು ಅದು ಈಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣಕ್ಕೆ ಸ್ಥಳಾಂತರ ಆಗಿದೆ. ಆದರೆ ತರಕಾರಿಗಳನ್ನು ಮಾರುವ ಅಂಗಡಿಗಳು ಪಟ್ಟಣದ ಬಹುತೇಕ ವೃತ್ತಗಳಲ್ಲಿ ತರಕಾರಿ ತಲೆ ಎತ್ತಿವೆ. ಆದರೂ ಊರಿನ ಹಳಬರಿಗೆ ತರಕಾರಿ ಮಾರುಕಟ್ಟೆ ಅಂದರೆ ಜಾಗದ ಗುರುತು ತಲೆಗೆ ಹತ್ತುತ್ತದೆ.



