ಮದುವೆಯಾಗಲು ಹೆಣ್ಮಕ್ಕಳೆ ಸಿಗುತ್ತಿಲ್ಲ ವಧು ದಕ್ಷಿಣೆ ನೀಡುವಂತ ಪರಿಸ್ಥಿತಿ ಏರ್ಪಟ್ಟಿದೆ ಎಂದು ಯುವಕರು ಪರಿತಪಿಸುತ್ತಿದ್ದಾರೆ. ಇಂತಹ ಕಾಲದಲ್ಲಿ ವರದಕ್ಷಿಣೆ ಪಡೆದು ಭರ್ಜರಿಯಾಗಿ ಮದುವೆ ಮಾಡಿಕೊಂಡು ತಾಳಿ ಕಟ್ಟಿ ಹೊಸಿಲು ಮೆಟ್ಟಿಸಿ ಮನೆ ತುಂಬಿಸಿಕೊಂಡ ಹೆಣ್ಣಿಗೆ ಸೈಟು ಮತ್ತಷ್ಟು ಹಣ ತರಲು ಒತ್ತಾಯಿಸಿ ವರದಕ್ಷಿಣೆ ಕಿರುಕುಳ ನೀಡಿದಲ್ಲದೆ ಆಕೆ ಸ್ವಯಂ ಆತ್ಮಹತ್ಯೆ ಮಾಡಿಕೊಳ್ಳುವಂತ ಪರಿಸ್ಥಿತಿ ನಿರ್ಮಾಣ ಮಾಡಿದ ಧಾರುಣ ಘಟನೆ ದೊಡ್ದಬಳ್ಳಾಪುರದಲ್ಲಿ ನಡೆದಿದೆ.

ದೊಡ್ದಬಳ್ಳಾಪುರ:ಗಂಡನ ಮನೆಯವರ ಹಿಂಸೆ ಹಾಗು ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತ ಉಪನ್ಯಾಸಕಿಯೊಬ್ಬಳು ಸೆಲ್ಫಿ ವೀಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡ ಧಾರುಣ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಬಳಿ ಇರುವಂತ ವಿಶ್ವೇಶ್ವರಯ್ಯ ಪಿಕ್ ಅಪ್ ಡ್ಯಾಂನಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡು ಮೃತ ಪಟ್ಟಿರುವ ಉಪನ್ಯಾಸಕಿಯನ್ನು ದೊಡ್ಡಬಳ್ಳಾಪುರದ ಸೋತೇನಹಳ್ಳಿ ನಿವಾಸಿ ಪುಷ್ಪವತಿ (23) ಎಂದು ಗುರುತಿಸಲಾಗಿದ್ದು ಈಕೆಯ ಪೋಷಕರಿಗೆ 4 ಜನ ಹೆಣ್ಣು ಮಕ್ಕಳಿದ್ದು, ಮೃತಳು ಕೊನೆಯವರಾಗಿದ್ದು ಈಕೆಯನ್ನು ದೊಡ್ಡಬಳ್ಳಾಪುರ ತಪಸೀಹಳ್ಳಿ ಗ್ರಾಮದ ವೇಣು ಎಂಬಾತನಿಗೆ ಕಳೆದ 2024ರ ನವೆಂಬರ್ನಲ್ಲಿ ದೊಡ್ಡ ಮಟ್ಟದಲ್ಲಿ ವರದಕ್ಷಿಣೆ ಕೊಟ್ಟು ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದರಂತೆ ಮದುವೆಯಾದ ವೇಣು ಹೆಂಡತಿ ಜೊತೆ ಸಂಸಾರ ಮಾಡದೆ ಸಬೂಬು ಹೇಳಿಕೊಂಡು ದಿನ ದೂಡುತ್ತಿದ್ದನಂತೆ ಅನುಮಾನ ಗೊಂಡ ಪತ್ನಿ ಸಮಸ್ಯೆ ಎನಾದರು ಇರಬೇಕು ವೈದ್ಯರಿಗೆ ತೋರಿಸೋಣ ಎಂದರು ಸ್ಪಂದಿಸದೆ ನಿರ್ಲಕ್ಷ್ಯಿಸುತ್ತ ಬಂದಿದ್ದಾನೆ ಈ ವಿಚಾರವಾಗಿ ಗಂಡ ವೇಣು ತಾಯಿ ಭಾರತಿ ಹಾಗು ಮಾವ ಗೋವಿಂದಪ್ಪನ ಬಳಿ ಸಮಸ್ಯೆ ಹೇಳಿದ್ದಾಳೆ ಅದಕ್ಕೆ ಅವರು ಮಗನ ಪರ ವಹಿಸಿಕೊಂಡು ವಾದಿಸಿದ್ದಾರೆ ದೊಡ್ಡಬಳ್ಳಾಪುರದಲ್ಲಿರುವ ನಿವೇಶನ ಕೊಟ್ರೆ ಮಾತ್ರ ನಮ್ಮ ಮಗ ನಿನ್ನ ಜೊತೆ ಸಂಸಾರ ಮಾಡುತ್ತಾನೆ ಎಂದಿದ್ದರಂತೆ.
ನಿನಗೆ ಮಗು ಮಾಡಿಕೊಳ್ಳುವ ಅರ್ಜೆಂಟ್ ನಮ್ಮ ಚಿಕ್ಕ ಮಗ ನಿನ್ನ ಗಂಡನ ತಮ್ಮನ ಜೊತೆ ಮಲಗು ಎಂದು ಅಘಾತಕಾರಿಯಾಗಿ ಹೇಳಿದ್ದರಂತೆ.
ಇದೆಲ್ಲಾ ನಡೆದ ತಿಂಗಳ ಹಿಂದೆ ಗಂಡನ ಮನೆಯವರೆಲ್ಲಾ ಸೇರಿ ಪುಷ್ಪವತಿ ಮೇಲೆ ಹಲ್ಲೆ ನಡೆಸಿದ್ದು ಆಗ ಪುಷ್ಪವತಿ ತನ್ನ ತವರು ಮನೆಯಲ್ಲಿ ವಿಚಾರ ತಿಳಿಸಿ ನಂತರ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಈ ಎಲ್ಲಾ ಬೆಳವಣಿಗೆಯಲ್ಲಿ ತವರು ಮನೆಯಲ್ಲೇ ಉಳಿದುಕೊಂಡ ಪುಷ್ಪವತಿ ಉಪನ್ಯಾಸಕ ವೃತ್ತಿಗೆ ಸೇರಿಕೊಂಡಿದ್ದು ಕೆಲಸಕ್ಕೆ ಹೋಗಿ ಬರ್ತಿದ್ದ ಪುಷ್ಪವತಿಯನ್ನ ದೊಡ್ಡಬಳ್ಳಾಪುರದ ಡಿ ಕ್ರಾಸ್ ಬಸ್ಟಾಂಡ್ ಬಳಿ ಅಡ್ಡ ಹಾಕಿದ ಗಂಡ ವೇಣು ಆಕೆಯ ಮುಖಕ್ಕೆ ಉಗಿದು ಸಾರ್ವಜನಿಕರ ಎದುರೇ ನಮ್ಮ ಮೇಲೆಯೇ ಕಂಪ್ಲೇಂಟ್ ಕೊಡ್ತಿಯಾ? ನಿನಗೆ ನೋಡು ನಾನ್ ಒಂದು ಗತಿ ಕಾಣಿಸ್ತೀನಿ? ಮತ್ತೊಂದು ಮದುವೆ ಮಾಡ್ಕೊಂಡು ನಾನ್ ಏನ್ ಅಂತ ತೋರಿಸ್ತೀನಿ ಅಂತ ಹೆದರಿಸಿ ಬೆದರಿಕೆ ಹಾಕಿದ್ದನಂತೆ. ನಡೆದ ವಿಚಾರವನ್ನು ಮನೆಯಲ್ಲಿ ತಿಳಿಸಿದ್ದ ಪುಷ್ಪವತಿ ಮರುದಿನ ಎಂದಿನಂತೆ ಕಾಲೇಜಿಗೆ ಅಂತ ಹೋದವಳು ಮನೆಗೆ ವಾಪಾಸ್ ಬರಲಿಲ್ಲ ಎರಡು ದಿನ ಕಳೆದ ನಂತರ ಆಕೆಯ ಶವ ದೊಡ್ಡಬಳ್ಳಾಪುರ ಘಾಟಿ ಬಳಿಯ ವಿಶ್ವೇಶ್ವರಯ್ಯ ಪಿಕ್ ಅಪ್ ಡ್ಯಾಂನಲ್ಲಿ ಪತ್ತೆಯಾಗಿದೆ.
ಕಾಲೇಜಿಗೆ ಹೋದವಳು ಆತ್ಮಹತ್ಯೆಗೆ ಶರಣಾಗಿದ್ದಾಳೆ
ಉದ್ಯೊಗಕ್ಕೆ ಕಾಲೇಜಿಗೆ ಹೋದ ಮಗಳು ಮನೆಗೆ ಬರಲಿಲ್ಲ ಅಂತ ಕುಟುಂಬಸ್ಥರು ದೊಡ್ಡಬಳ್ಳಾಪುರ ಮಹಿಳಾ ಠಾಣೆಯಲ್ಲಿ ನೀಡುತ್ತಾರೆ ದೂರು ಪಡೆದ ಪೋಲಿಸರು ತನಿಖೆ ಕೈಗೊಂಡು ಮೊಬೈಲ್ ಲೊಕೇಷನ್ ಗೆ ಹಾಕಿದಾಗ ಮೊಬೈಲ್ ಡ್ಯಾಂ ಬಳಿ ಪತ್ತೆಯಾಗಿದ್ದು ಅಲ್ಲೆ ಮೃತದೇಹ ಸಿಕ್ಕಿದೆ ಮೊಬೈಲ್ನಲ್ಲಿ ಸೆಲ್ಫಿ ವೀಡಿಯೋ ಸಹ ಪತ್ತೆಯಾಗಿದ್ದು ಸೆಲ್ಫಿ ವೀಡಿಯೋ ಅನ್ವಯ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು, ಗಂಡ ವೇಣು ಹಾಗೂ ಮಾವ ಗೋವಿಂದಪ್ಪನನ್ನ ಬಂಧಿಸಿ, ಉಳಿದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಸೆಲ್ಫಿ ವೀಡಿಯೋ ದಾಖಲೆ
ಸಾಯುವ ಮುನ್ನ, ಮೃತ ಪುಷ್ಪಾ 8 ನಿಮಿಷಗಳ ವೀಡಿಯೊ ರೆಕಾರ್ಡ್ ಮಾಡಿದ್ದು, ಅದರಲ್ಲಿ ತನ್ನ ಪತಿ ವೇಣು, ಅತ್ತೆ ಭಾರತಿ, ಮಾವ ಗೋವಿಂದಪ್ಪ ಮತ್ತು ಮೈದುನ ನಾರಾಯಣಸ್ವಾಮಿ ಸೇರಿದಂತೆ ಇತರರ ಮೇಲೆ ಕಿರುಕುಳದ ಆರೋಪ ಹೊರಿಸಿದ್ದಾರೆ.



