ಶ್ರೀನಿವಾಸಪುರ:ರಾಜ್ಯ ಸಾರಿಗೆ ಸಂಸ್ಥೆ ನೌಕರರ ಮುಷ್ಕರದ ಹಿನ್ನಲೆಯಲ್ಲಿ ಇಂದು ಶ್ರೀನಿವಾಸಪುರದಲ್ಲಿ ಸಾರಿಗೆ ಸಂಸ್ಥೆ ಬಸ್ಸುಗಳು ರಸ್ತೆಗೆ ಇಳಿಯಲಿಲ್ಲ, ಪ್ರಯಾಣಿಕರು ಇಲ್ಲದೆ ಬಸ್ ನಿಲ್ದಾಣ ಬಿಕೋ ಎನ್ನುತ್ತಿದ್ದವು ಬಸ್ಸುಗಳು ಡಿಪೊದಲ್ಲೆ ಉಳಿದುಕೊಂಡಿವೆ. ಮುಂಜಾನೆ ಒಂದೇರಡು ಬಸ್ಸುಗಳು ಸಂಚಾರ ಆರಂಭಿಸಿತಾದರೂ ನೌಕರರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಬಸ್ಸುಗಳನ್ನು ವಾಪಸ್ ಡಿಪೊಗೆ ಬಿಟ್ಟು ನೌಕರರು ವಾಪಸ್ ಹೋದರೆಂದು ಹೇಳಲಾಗುತ್ತಿದೆ.
ಡಿಮ್ಯಾಂಡ್ ಏನು?
ವೇತನ ಹಿಂಬಾಕಿ(ಅರಿಯರ್ಸ್), ವೇತನ ಹೆಚ್ಚಳಕ್ಕೆ ಒತ್ತಾಯಿಸಿ ರಾಜ್ಯ ಸಾರಿಗೆ ಸಂಸ್ಥೆಗಳ ನೌಕರರು ಸರ್ಕಾರದ ಜೊತೆ ನಡೆಸಿದ ಸಂಧಾನ ಸಭೆ ವಿಫಲವಾಗಿದ್ದು ಇಂದು ಮುಂಜಾನೆಯಿಂದಲೆ ಸಾರಿಗೆ ನೌಕರರು ಕೆಎಸ್ಆರ್ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ, ಕರೆಯ ಮೆರೆಗೆ ಕೆಲಸಕ್ಕೆ ಹಾಜರಾಗದೆ ನೌಕರರು ಮುಷ್ಕರಕ್ಕಿಳಿದಿದ್ದಾರೆ.ಇದರಿಂದ ಶ್ರೀನಿವಾಸಪುರ ಅಥಾವ ಕೋಲಾರೆ ಅಲ್ಲ ರಾಜ್ಯದಾದ್ಯಂತ ಮುಷ್ಕರ ನಡೆಸಿದ್ದು ಬಸ್ಗಳ ಸೇವೆಯಲ್ಲಿ ವ್ಯತ್ಯುಯವಾಗಿ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಏರ್ಪಟ್ಟಿದೆ.
ಸಿ.ಎಂ ಜೊತೆಗೆ ಆದ ಮಾತು ಕಥೆ ಏನು?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಎರಡು ಗಂಟೆಗಳ ಕಾಲ ನಡೆದಂತ ಸಭೆಯಲ್ಲಿ ವೇತನ ಹೆಚ್ಚಳ ಮತ್ತು 38 ತಿಂಗಳ ಅರಿಯರ್ಸ್ ಬಾಕಿ ಬಗ್ಗೆ ಚರ್ಚೆಯಾಗಿದ್ದು ಹಿಂದಿನ ಸಭೆಯೊಂದರಲ್ಲಿ ಸರ್ಕಾರ 38 ತಿಂಗಳ ಅರಿಯರ್ಸ್ ಪಾವತಿಸಲು ಸಾಧ್ಯವಿಲ್ಲ ತಿಳಿಸಿ, ನೌಕರರು ನಾಲ್ಕು ವರ್ಷ ಕಾಯಬೇಕು ಎಂಬುದಾಗಿ ಸೂಚಿಸಿತ್ತು.ಈಗಾಗಲೇ 16 ತಿಂಗಳಿನಿಂದ ಮಾತುಕತೆಗಳು ನಡೆದಿರುವ ಹಿನ್ನೆಲೆಯಲ್ಲಿ, ಮತ್ತೆ ಮುಖ್ಯಮಂತ್ರಿಗಳು 14 ತಿಂಗಳ ಬಾಕಿ ಹಣವನ್ನು ಪಾವತಿಸುವ ಭರವಸೆ ನೀಡಿದ್ದಾರೆ. ಆದಾಗ್ಯೂ, ವೇತನ ಪರಿಷ್ಕರಣೆಯನ್ನು ವಿಧಾನಸಭೆಯ ಅಧಿವೇಶನದ ಬಳಿಕ ಚರ್ಚಿಸುವುದಾಗಿ ಮುಂದೂಡಿರುವುದನ್ನು ಸಂಘಟನೆ ಒಪ್ಪಿಲ್ಲ ಎಂದು ಹೇಳಲಾಗಿದೆ.
ಶಾಲಾ ಕಾಲೇಜುಗಳಿಗೆ ರಜೆ
ರಾಜ್ಯ ಸಾರಿಗೆ ಸಂಸ್ಥೆ ನೌಕರರ ಮುಷ್ಕರದ ಹಿನ್ನಲೆಯಲ್ಲಿ ಹಳ್ಳಿಗಳಿಂದ ವಿದ್ಯಾರ್ಥಿಗಳು ಬರಲು ತೊಂದರೆ ಆಗುತ್ತದೆ ಎಂದು ಪಟ್ಟಣದಲ್ಲಿರುವ ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳ ಶಿಕ್ಷಣ ಸಂಸ್ಥೆಗಳು ರಜೆ ಘೋಷಣೆ ಮಾಡಿವೆ.
ಹೆಚ್ಚುವರಿ ಖಾಸಗಿ ಬಸ್ಸುಗಳು
ಸಾರಿಗೆ ಸಂಸ್ಥೆ ನೌಕರರ ಮುಷ್ಕರದ ಹಿನ್ನಲೆಯಲ್ಲಿ ಖಾಸಗಿ ಬಸ್ಸುಗಳಿಗೆ ಫುಲ್ ಕಲೆಕ್ಷನ್ ಆಗುತ್ತಿದೆ ಕೋಲಾರ ಚಿಂತಾಮಣಿ ಕಡೆ ಹೆಚ್ಚುವರಿಯಾಗಿ ಖಾಸಗಿ ಬಸ್ಸುಗಳು ಸಂಚಿರಿಸುತ್ತಿದ್ದು ಕೆಲಸಕ್ಕೆ ತೆರಳುವವರು ಖಾಸಗಿ ಬಸ್ಸುಗಳನ್ನು ಆಶ್ರಯಿಸುತ್ತಿದ್ದಾರೆ.ಚಿಂತಾಮಣಿಯಲ್ಲಿ ಬಂದ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಘಟಕದಿಂದ ಬೇರೆ ಜಿಲ್ಲೆಗಳಿಗೆ ಕೆಲ ಬಸ್ಗಳು ಸಂಚಾರ ನಡೆಸಲಾಗುತ್ತಿದ್ದೆ ಎನ್ನಲಾಗಿದೆ.
Trending
- ಶ್ರೀನಿವಾಸಪುರ:ಕಸ ಹಾಕುವ ವಿಚಾರಕ್ಕೆ ಜಗಳ ಒಬ್ಬನ ಕೊಲೆ!
- ಶ್ರೀನಿವಾಸಪುರ:ವೇಶ್ಯಾವಾಟಿಕೆ ದಂಧೆ ಪೊಲೀಸ್ ದಾಳಿ, ಕಿಂಗ್ ಪಿನ್ ಮಹಿಳೆ ಬಂಧನ!
- ಶ್ರೀನಿವಾಸಪುರ:ವಾಹನ ಡಿಕ್ಕಿಯಾಗಿ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಪೇದೆ ನಿಧನ!
- ಶ್ರೀನಿವಾಸಪುರ:ಕರ್ನಾಟಕ ಬ್ಯಾಂಕ್ ಉದ್ಯೋಗಿ ಅಪಘಾತದಲ್ಲಿ ಸಾವು!
- ಲಂಚ ಪಡೆಯುತ್ತಿದ್ದ ಬಿಜೆಪಿ ಶಾಸಕ ಲೋಕಾಯುಕ್ತ ಬಲೆಗೆ!
- ಯಾವ ಐಟಿ-ಬಿಟಿ ಗೂ ಕಡಿಮೆ ಇಲ್ಲ,Dairy Farm ಆದಾಯ ಲಕ್ಷಗಟ್ಟಲೆ!
- ಬೆಂಗಳೂರಿನಲ್ಲಿ ಕುಬೇರರು ವಾಸಿಸುವ“ಬಿಲಿಯನೇರ್ಸ್ ಸ್ಟ್ರೀಟ್”ಎಲ್ಲಿದೆ?
- ಶ್ರೀನಿವಾಸಪುರ:ನೌಕರರ ಸಂಘದ ಹಾಲಿ-ಮಾಜಿ ಅಧ್ಯಕ್ಷರ ನಡುವೆ ಬಿದಿ ಜಗಳ!
Saturday, March 7



