ಶ್ರೀನಿವಾಸಪುರ:ಕೋಲಾರ,ಬೆಂಗಳೂರು ಗ್ರಾಮಾಂತರ,ಹಾಸನ, ಮಂಡ್ಯ,ತುಮಕೂರು, 5+23 ಸೀಟು ಹಂಚಿಕೆಯ ಸೂತ್ರದ ಅಡಿಯಲ್ಲಿ ವನ್ನು ಬಿಜೆಪಿ-ಜೆಡಿಎಸ್ ಮೈತ್ರಿ ಬಹುತೇಕ ಫೈನಲ್ ಎನ್ನುವ ಮಾತು ಕೇಳಿಬರುತ್ತಿದೆ.
ಜೆಡಿಎಸ್ ಭದ್ರಕೋಟೆಯಾಗಿರುವ ಕೋಲಾರ ಮೀಸಲು ಕ್ಷೇತ್ರ ಸೇರಿದಂತೆ ಮಂಡ್ಯ, ಬೆಂಗಳೂರು ಗ್ರಾಮಾಂತರ, ಹಾಸನ,ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಗಳಲ್ಲಿ ತನ್ನ ಸಾಂಪ್ರದಾಯಿಕ ಪ್ರಾಭಲ್ಯ ಹೊಂದಿರುವ ಜೆಡಿಎಸ್ ಐದು ಕ್ಷೇತ್ರಗಳನ್ನು ಉಳಸಿಕೊಳ್ಳಲು ಜೆಡಿಎಸ್ ಶತಾಯಗತಾಯ ಪ್ರಯತ್ನ ನಡೆಸಿ ಅದನ್ನು ಮೈತ್ರಿ ಧರ್ಮದಲ್ಲಿ ಬಿಜೆಪಿ ವರಿಷ್ಟರ ಬಳಿ ಕೇಳಿತ್ತು ಅದರಂತೆ ರಾಜ್ಯ ಬಿಜೆಪಿ ನಾಯಕರ ಅಭಿಪ್ರಾಯವನ್ನು ಪಡೆದಂತ ಬಿಜೆಪಿ ವರಿಷ್ಠರು, ಕೇಂದ್ರ ಗೃಹಮಂತ್ರಿ ಅಮಿತ್ ಷಾ ಗಮನಕ್ಕೆ ತಂದಿದ್ದರು ಅದರಂತೆ ಅಮಿತ್ ಷಾ ತಾವೆ ಆಸಕ್ತಿ ತೋರಿ ದೆಹಲಿಯ ಪೊಲಿಟಿಕಲ್ ಅನಾಲಿಸ್ಟ ತಂಡದ ಕೈಯಲ್ಲಿ ಸರ್ವೆ ಮಾಡಿಸಿದ್ದು ಒಂದು ತಿಂಗಳ ಅವಧಿಯಲ್ಲಿ ಮಾಡಿಸಿರುವ ಸರ್ವೆಯಲ್ಲಿ ಐದು ಕ್ಷೇತ್ರಗಳಲ್ಲಿ ಜೆಡಿಎಸ್ ಗೆ ಅನಕೂಲಕರವಾದ ವಾತವರಣ ಇದೆ ಎನ್ನವ ಮಾಹಿತಿ ಲಭ್ಯವಾಗಿದಿಯಂತೆ,ಸರ್ವೆ ವರದಿಯಂತೆ ಐದು ಕ್ಷೇತ್ರಗಳನ್ನು ಜೆಡಿಎಸ್ ಗೆ ನೀಡಲಾಗುತ್ತಿದೆ ಎನ್ನುವ ಮಾಹಿತಿ ಹೊರ ಬಿದಿದ್ದೆ.ಬೆಂಗಳೂರು ಗ್ರಾಮಾಂತರ ಅಥಾವ ಮಂಡ್ಯದಲ್ಲಿ ಸ್ವತಃ ಕುಮಾರಸ್ವಾಮಿ ನಿಲ್ಲುವ ಕುರಿತಂತೆ ಬಿಜೆಪಿ ಸರ್ವೆಯಲ್ಲಿ ಪಾಸಿಟಿವ್ ರಿಸಲ್ಟ್ ಬಂದಿರುವ ಬಗ್ಗೆ ಹೇಳಲಾಗುತ್ತಿದೆ.
ಮುಳಬಾಗಿಲು ಶಾಸಕ ಲೋಕಸಭಾ ಚುನಾವಣಾ ಅಕಾಂಕ್ಷಿ.
ಕೋಲಾರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ದಿಸಲು ಮುಳಬಾಗಿಲು ಜೆಡಿಎಸ್ ಶಾಸಕ ಸಮೃದ್ಧಿಮಂಜುನಾಥ್ ಆಸಕ್ತಿ ತೋರಿದ್ದಾರೆ ಈ ಕುರಿತಂತೆ ತಮ್ಮ ನಿಲವನ್ನು ಜೆಡಿಎಸ್ ವರಿಷ್ಟರ ಮುಂದೆ ವ್ಯಕ್ತಪಡಿಸಿದ್ದು, ಮೂರು ದಿನಗಳ ಹಿಂದೆ ಚಿಂತಾಮಣಿಯ ಮಾಜಿ ಶಾಸಕ ಕೃಷ್ಣಾರೆಡ್ಡಿ ಮನೆಯಲ್ಲಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ತಾವು ಲೋಕಸಭಾ ಚುನಾವಣೆಯಲ್ಲಿ ಸ್ಪರ್ದಿಸುವ ಬಗ್ಗೆ ಮಾಧ್ಯಮದವರ ಮುಂದೆ ಬಹಿರಂಗ ಪಡಿಸಿದ್ದಾರೆ.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Monday, April 28