ನ್ಯೂಜ್ ಡೆಸ್ಕ್: ಕನ್ನಡದ ಡಾ.ರಾಜ್ ಅಣ್ಣಾವ್ರ ಮೊಮ್ಮಗ,ರಾಘವೇಂದ್ರ ರಾಜ್ಕುಮಾರ್ ಅವರ ಕಿರಿಯ ಪುತ್ರ ಯುವ ರಾಜ್ಕುಮಾರ್ ನಟನೆಯ ಮೊದಲ ಸಿನಿಮಾ ‘ಯುವ’ ಬಗ್ಗೆ ಸಿನಿಪ್ರೇಮಿಗಳಿಗೆ ಬೆಟ್ಟದಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಯುವ ಸಿನಿಮಾದ ಟೈಟಲ್ ಟೀಸರ್ ಬಿಡುಗಡೆಯಾಗಿ ಸಿಕ್ಕಾಪಟ್ತೆ ವೈರಲ್ ಆಗಿದೆ,ಇದರಲ್ಲಿ ಯುವ ರಾಜ್ಕುಮಾರ್ ಅವರ ಮಾಸ್ ಲುಕ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಮೊದಲು ‘ಯುವ’ ಚಿತ್ರಕ್ಕೆ ತಮಿಳು, ಮಲಯಾಳಂನ ಖ್ಯಾತ ನಟಿಯರು ನಾಯಕಿಯಾಗಲಿದ್ದಾರೆ ಎನ್ನಲಾಗುತ್ತಿತ್ತು. ಮಾತುಗಳು ಕೇಳಿಬರುತಿತ್ತು ಈ ಎಲ್ಲಾ ಸುದ್ದಿಗಳಿಗೆ ಬ್ರೇಕ್ ಹಾಕಲಾಗಿದೆ ಚಿತ್ರಕ್ಕೆ ಅಚ್ಚ ಕನ್ನಡತಿ, ‘ಕಾಂತಾರ’ ಚಲುವೆ ಸಪ್ತಮಿ ಗೌಡ, ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಹೊಂಬಾಳೆ ಫಿಲ್ಮ್ಸ್ ಬ್ಯಾನರ್ನ ಸಿನಿಮಾ
ಕಾಂತಾರ ಸಿನಿಮಾದಲ್ಲಿ…..
ಮುದ್ದಾದ ಮಾಯಾಂಗಿ
ಮೌನದ ಸಾರಂಗಿ
ಮೋಹಕ ಮದರಂಗಿ
ಕನ್ನ ಹಾಕಿದೆ ಮುಂಗುರುಳ ಸೋಕಿ…. ಎಂದು ಯುವಕರ ಹೃದಯ ಗೆದ್ದಿದ ಸಿಂಗಾರ ಸಿರಿ ಅಂಗಾಲಿನಲೆ ಬಂಗಾರ ಅಗೆದ ಮಾಯೆ
ಸಪ್ತಮಿ ಗೌಡ,ನಾಯಕಿಯಾಗಿರುವ ಬಗ್ಗೆ ಅಧಿಕೃತ ಆಯ್ಕೆಯನ್ನು ಚಿತ್ರತಂಡ ಸೋಮವಾರ ಅನೌನ್ಸ್ ಮಾಡಿದೆ. ‘ಪಾಪ್ ಕಾರ್ನ್ ಮಂಕಿ ಟೈಗರ್’ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶ ಮಾಡಿರುವ ನಟಿ ಸಪ್ತಮಿ ಗೌಡ ‘ಕಾಂತಾರ’ ಚಿತ್ರದ ಮೂಲಕ ಜನಪ್ರಿಯರಾದರು. ಈಗ ಅದೇ ನಿರ್ಮಾಣ ಸಂಸ್ಥೆಯ ಹೊಸ ಸಿನಿಮಾದಲ್ಲಿ ಅವರು ನಾಯಕಿಯಾಗಿದ್ದಾರೆ. ಈ ಚಿತ್ರವನ್ನು ಅಪ್ಪು ಅವರ ನಟಿಸಿದ ಯುವರತ್ನ ಸಿನಿಮಾ ನಿರ್ದೇಶನ ಮಾಡಿದ ಸಂತೋಷ್ ಆನಂದ್ರಾಮ್ ನಿರ್ದೇಶನ ಮಾಡುತ್ತಿದ್ದಾರೆ.
ನಾನು ಅದೃಷ್ಟವಂತೆ
ಡಾ.ರಾಜ್ ಕುಟುಂಬದ ಕುಡಿ ನಟಿಸುತ್ತಿರುವ ‘ಯುವ’ ಸಿನಿಮಾದಲ್ಲಿ ನಾಯಕಿ ಆಗಿರುವುದಕ್ಕೆ ಸಂತಸ ವಾಗಿದೆ ಎಂದಿರುವ ಸಪ್ತಮಿ ಗೌಡ, ಸಂತೋಷ್ ಆನಂದ್ರಾಮ್ ನಿರ್ದೇಶನದಲ್ಲಿ ಕೆಲಸ ಮಾಡಬೇಕು ಎಂಬ ಆಸೆ ನನಗೆ ಬಹಳ ದಿನಗಳಿಂದ ಇತ್ತು. ಅದು ಈಗ ಈಡೇರುತ್ತಿದೆ. ಕಾಂತಾರ ಸಿನಿಮಾ ಮೂಲಕ ನನ್ನನ್ನು ಇಡೀ ದೇಶಕ್ಕೆ ಪರಿಚಯಿಸಿದ್ದ ಹೊಂಬಾಳೆ ಫಿಲ್ಮ್ಸ್. ಅದೇ ನಿರ್ಮಾಣ ಸಂಸ್ಥೆ, ಮತ್ತೊಂದು ಸಿನಿಮಾದಲ್ಲಿ ನನಗೆ ಅವಕಾಶ ನೀಡಿರುವುದು ಅತಿ ಹೆಚ್ಚು ಖುಷಿ ನೀಡಿದೆ. ಒಳ್ಳೊಳ್ಳೆಯ ಪಾತ್ರಗಳನ್ನು ನಾನು ನಿರೀಕ್ಷೆ ಮಾಡುತ್ತೇನೆ. ಅಂತಹ ಪಾತ್ರ ಈ ಚಿತ್ರದಲ್ಲಿದೆ. ಯುವ ಟೈಟಲ್ ಯೂತ್ಫುಲ್ ಆಗಿದೆ. ಇಂತಹ ಸಿನಿಮಾದಲ್ಲಿ ನಟಿಸುತ್ತಿರುವುದಕ್ಕೆ ನಿಜಕ್ಕೂ ನಾನು ಅದೃಷ್ಟವಂತೆ ಎನ್ನಬಹುದು..’ ಎಂದಿದ್ದಾರೆ.
‘ಕನ್ನಡ ಇಂಡಸ್ಟ್ರಿಗೆ ಅಣ್ಣಾವ್ರ ಕುಟುಂಬ ನೀಡಿರುವ ಕೊಡುಗೆ ಬಹಳ ದೊಡ್ಡದು. ಅಂಥ ಕುಟುಂಬದವರ ಜತೆಗೆ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಇದಕ್ಕಿಂತ ಇನ್ನೇನು ಬೇಕು ಹೇಳಿ. ನನ್ನ ತಂದೆ, ತಾಯಿ, ತಂಗಿ ಸೇರಿದಂತೆ ಇಡೀ ಕುಟುಂಬ ಈ ವಿಷಯಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ. ಪಾಪ್ ಕಾರ್ನ್, ಕಾಂತಾರ ಸಿನಿಮಾಗಳಲ್ಲಿ ಜನರು ನನ್ನನ್ನು ಬೇರೆ ಬೇರೆ ರೀತಿಯಲ್ಲಿ ನೋಡಿದ್ದರು. ಈಗ ಅದಕ್ಕಿಂತಲೂ ಭಿನ್ನ ಪಾತ್ರದಲ್ಲಿ ನಾನು ಕಾಣಿಸಿಕೊಳ್ಳಲಿದ್ದೇನೆ’ ಎನ್ನುವುದು ಸಪ್ತಮಿ ಗೌಡ ಮಾತು.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Saturday, April 26