ಶ್ರೀನಿವಾಸಪುರ:ಮನೆಗೆ ತೆರಳುತ್ತಿದ್ದ ಗೃಹಣಿಯನ್ನು ತಡೆದ ಅಪರಿಚಿತರು ಪೋಲಿಸರೆಂದು ಪರಿಚಯಿಸಿಕೊಂಡು ಅಕೆಯ ಕತ್ತಿನಲ್ಲಿರುವ ಸರವನ್ನು ತಗೆಸಿ ಕದ್ದುಕೊಂಡು ಹೋಗಿರುವ ಘಟನೆ ಪಟ್ಟಣದ ಪ್ರವಾಸಿ ಮಂದಿರದ ಬಳಿ ನಡೆದಿರುತ್ತದೆ.
ರತ್ನಮ್ಮ ಎಂಬ ನಡುವಯಸ್ಸಿನ ಮಹಿಳೆ ಸಂಜೆ ಸಮಯದಲ್ಲಿ ಊರಿಂದ ಬಂದು ಕಾಲೇಜು ಬಳಿ ಬಸ್ಸಿಳಿದು ಮನೆ ಕಡೆಗೆ ನಡೆದುಕೊಂಡು ಹೋರಟಿದ್ದಾರೆ, ಪ್ರವಾಸಿ ಮಂದಿರದ ಬಳಿ ಸುಮಾರು ಮೂರು ಮಂದಿ ಇದ್ದರು ಎನ್ನಲಾದ ಅಪರಿಚಿತರು ಆಕೆಯನ್ನು ತಡೆದಿದ್ದಾರೆ ಆತ್ಮೀಯತೆಯಿಂದ ಅಕ್ಕ ಎಂದು ಮಾತನಾಡಿಸಿ ಮುಂದೆ ಕಳ್ಳರ ಗ್ಯಾಂಗ್ ಇದೆ ನಿಮ್ಮ ಕತ್ತಿನಲ್ಲಿರುವ ಬಂಗಾರದ ಸರವನ್ನು ತಗೆದು ನಿಮ್ಮ ಪರ್ಸಿನಲ್ಲಿ ಇಟ್ಟುಕೊಳ್ಳಿ ಹಿಂದೆ ನಮ್ಮ ಸಾಹೇಬರು ಇದ್ದಾರೆ ಅವರೆ ಹೇಳಿದ್ದು ಎಂದು ನಂಬಿಸಿದ್ದಾರೆ,ಗಾಭರಿಯಾದ ಮಹಿಳೆ ತಕ್ಷಣ ಕತ್ತಿನಲ್ಲಿದ್ದ ಸರ ತಗೆದು ಕೈಯಲ್ಲಿದ್ದ ಪರ್ಸಿನಲ್ಲಿ ಇಡಲು ಅಪರಿಚಿನ ಸಹಾಯ ಪಡೆದಿದ್ದಾರೆ ಇದನ್ನೆ ಅವಕಾಶ ಮಾಡಿಕೊಂಡ ಅಪರಿಚಿತರು ಪರ್ಸಿನ ಜಿಪ್ ತಗೆದಿದ್ದಾರೆ ಆಕೆ ಪರ್ಸಿನಲ್ಲಿ ಬಂಗಾರದ ಸರ ಇಡುವಾಗ ಕೈಚಳಕ ತೊರಿಸಿ ಸರವನ್ನು ಯಾಮಾರಿಸಿದ್ದಾರೆ,ನಂತರದಲ್ಲಿ ಸಾಹೇಬರು ಕರಿತಿದ್ದಾರೆ ನಾವು ಬರುತ್ತೇವೆ ಎಂದು ಹೋರಟು ಹೋಗಿದ್ದಾರೆ ಮನೆಗೆ ಹೋದ ಮಹಿಳೆ ಪರ್ಸ್ ತಗೆದು ನೋಡಿದಾಗ ಅದರಲ್ಲಿ ಬಂಗಾರದ ಸರ ಇಲ್ಲದ್ದು ನೋಡಿ ಗಲಿಬಿಲಿಗೊಂಡಿದ್ದಾಳೆ ತಡಬಡಾಯಿಸಿಕೊಂಡು ನಡೆದಂತ ವಿಚಾರವನ್ನು ಕುಟುಂಬಸ್ಥರರೊಂದಿಗೆ ಹಂಚಿಕೊಂಡು ಗೋಳಾಡಿದ್ದಾರೆ ನಂತರ ಶ್ರೀನಿವಾಸಪುರ ಠಾಣೆಯಲ್ಲಿ ದೂರು ನೀಡಿರುತ್ತಾರೆ.
ಇತ್ತಿಚಿಗೆ ಪಟ್ಟಣದಲ್ಲಿ ಸರಗಳ್ಳತನ ವಾಹನ ಕಳ್ಳತನ ಜೇಬುಗಳ್ಳತನಗಳು ಹೆಚ್ಚಾಗುತ್ತಿದ್ದರು ಪೋಲಿಸರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾರ್ವಜನಿಕರ ಆಕ್ರೋಶ.
Trending
- ಶ್ರೀನಿವಾಸಪುರ:ಕಸ ಹಾಕುವ ವಿಚಾರಕ್ಕೆ ಜಗಳ ಒಬ್ಬನ ಕೊಲೆ!
- ಶ್ರೀನಿವಾಸಪುರ:ವೇಶ್ಯಾವಾಟಿಕೆ ದಂಧೆ ಪೊಲೀಸ್ ದಾಳಿ, ಕಿಂಗ್ ಪಿನ್ ಮಹಿಳೆ ಬಂಧನ!
- ಶ್ರೀನಿವಾಸಪುರ:ವಾಹನ ಡಿಕ್ಕಿಯಾಗಿ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಪೇದೆ ನಿಧನ!
- ಶ್ರೀನಿವಾಸಪುರ:ಕರ್ನಾಟಕ ಬ್ಯಾಂಕ್ ಉದ್ಯೋಗಿ ಅಪಘಾತದಲ್ಲಿ ಸಾವು!
- ಲಂಚ ಪಡೆಯುತ್ತಿದ್ದ ಬಿಜೆಪಿ ಶಾಸಕ ಲೋಕಾಯುಕ್ತ ಬಲೆಗೆ!
- ಯಾವ ಐಟಿ-ಬಿಟಿ ಗೂ ಕಡಿಮೆ ಇಲ್ಲ,Dairy Farm ಆದಾಯ ಲಕ್ಷಗಟ್ಟಲೆ!
- ಬೆಂಗಳೂರಿನಲ್ಲಿ ಕುಬೇರರು ವಾಸಿಸುವ“ಬಿಲಿಯನೇರ್ಸ್ ಸ್ಟ್ರೀಟ್”ಎಲ್ಲಿದೆ?
- ಶ್ರೀನಿವಾಸಪುರ:ನೌಕರರ ಸಂಘದ ಹಾಲಿ-ಮಾಜಿ ಅಧ್ಯಕ್ಷರ ನಡುವೆ ಬಿದಿ ಜಗಳ!
Saturday, March 7



