ಶ್ರೀನಿವಾಸಪುರ:ಕೌಟುಂಬಿಕ ಕಲಹದಿಂದ ಬೆಸೆತ್ತ ಗೃಹಣಿಯುಬ್ಬಳು ಕೃಷಿಹೊಂಡದಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟಣೆ ತಾಲೂಕಿನ ಕಸಬಾ ಹೋಬಳಿ ಕೊಡಿಚೆರುವು ಗ್ರಾಮದಲ್ಲಿ ಇಂದು ನಡೆದಿದೆ.
ಮೃತ ಮಹಿಳೆ ಕೊಡಿಚೆರುವು ಗ್ರಾಮದ ವರಲಕ್ಷ್ಮಿ (35) ಎಂದು ಗುರತಿಸಲಾಗಿದೆ.ಮೃತ ಮಹಿಳೆ ತನ್ನ ಸಹೋದರ ಸಂಬಂದಿಯ ಗೃಹ ಉದ್ಯಮದಮಕ್ಕೆ ಬೆನ್ನುಲುಬಾಗಿ ಇದ್ದಳು.ವರಲಕ್ಷ್ಮಿ ಗ್ರಾಮದಲ್ಲಿ ಅಂಗಡಿ ಇಟ್ಟುಕೊಂಡಿರುವ ತನ್ನ ಪತಿ ರವಿ ಹಾಗು ಮಕ್ಕಳೊಂದಿಗೆ ವಾಸವಾಗಿದ್ದಳು ಪತಿ-ಪತ್ನಿ ನಡಿವೆ ಆಗಾಗ ಸಣ್ಣ ಪುಟ್ಟ ವಿಚಾರಕ್ಕೆ ಜಗಳ ಆಗುತಿತ್ತು ಮಂಗಳವಾರ ತಡ ರಾತ್ರಿ ಪತಿ-ಪತ್ನಿ ನಡುವೆ ಸಣ್ಣ ಮಟ್ಟದಲ್ಲಿ ಜಗಳ ಆಗಿದೆ ತಡರಾತ್ರಿ ಕುಟುಂಬದ ಸದಸ್ಯರು ಕೂಡಿ ಇಬ್ಬರನ್ನು ಸಮಾಧಾನ ಪಡಿಸಿ ಬುದ್ದಿ ಹೇಳಿ ಹೋಗಿದ್ದಾರೆ ಇದಾದ ನಂತರ ಅಂದಾಜು ಮದ್ಯರಾತ್ರಿ ಸಮಯದಲ್ಲಿ ಇದ್ದಕ್ಕಿದ್ದಂತೆ ಸಹೋದರ ಸಂಬಂದಿ ಹಾಗು ಕುಟುಂಬದ ಸದಸ್ಯರಿಗೆ ವರಲಕ್ಷ್ಮಿ ಫೋನ್ ಮಾಡಿ ಅಪ್ಪಯ್ಯ ಮಕ್ಕಳನ್ನು ಚನ್ನಾಗಿ ನೋಡಿಕೊಳ್ರೋ ಎಂದು ಹೇಳಿ ಮೊಬೈಲ್ ಸ್ವೀಚ್ ಆಫ್ ಮಾಡಿದ್ದಾಳೆ ಕೊರೆವ ಚಳಿಯಲ್ಲಿ ಬೆಚ್ಚಗೆ ಮಲಗಿದ್ದ ಕುಟುಂಬದ ಸದಸ್ಯರು ಏಕಾಏಕಿ ಬೆವತು ಹೋಗಿದ್ದಾರೆ ತಕ್ಷಣ ಎಚ್ಚೆತ್ತ ಕುಟುಂಬಿಕರು ಎದ್ದು ನೋಡಿದಾಗ ವರಲಕ್ಷ್ಮಿ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ ಅನುಮಾನ ಗೊಂಡ ಅವರು ಗ್ರಾಮವನ್ನೆಲ್ಲ ಹುಡುಕಾಡಿದ್ದಾರೆ ಗ್ರಾಮಕ್ಕೆ ಹೊಂದಿಕೊಂಡು ಇರುವ ಕೃಷಿಹೊಂಡಗಳ ಬಳಿ ಬ್ಯಾಟರಿ ಸಹಾಯದೊಂದಿಗೆ ನೋಡಿದ್ದಾರೆ ಎಲ್ಲೂ ಕಾಣಸಿಗದಿದ್ದಾಗ ವಾಪಸ್ಸಾಗಿದ್ದಾರೆ ಬೆಳಿಗ್ಗೆ ಗ್ರಾಮದ ಹೊರಲವಲಯದ ಕೃಷಿಹೊಂಡದಲ್ಲಿ ಮಹಿಳೆ ಶವ ಪತ್ತೆಯಾಗಿದೆ ಗ್ರಾಮದಲ್ಲಿ ಸುದ್ಧಿ ಹರಿದಾಡಿ ನೋಡಿದಾಗ ಅಲ್ಲಿ ವರಲಕ್ಷ್ಮಿ ಶವವಾಗಿ ತೆಲಿದ್ದಾಳೆ,ಸಣ್ಣ ವೈಮನಸ್ಸಿಗೆ ಆತ್ಮಹತ್ಯೆಯೇ ಪರಿಹಾರನಾ ಎಂಬ ಮಾತು ಗ್ರಾಮದೆಲ್ಲಡೆ ಕೇಳಿ ಬಂದ ಮಾತಾಗಿತ್ತು.
ಆತ್ಮಹತ್ಯೆ ಘಟನೆ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Sunday, April 27