ಶ್ರೀನಿವಾಸಪುರ:ಕೆ.ಎಸ್,ಎ.ಎಸ್ ಉಪ ನಿರ್ದೇಶಕರು ರಾಜ್ಯ ಲೆಕ್ಕ ಪತ್ರ ಇಲಾಖೆ ಹಾಲಿ ಕೋಲಾರ ಜಿಲ್ಲಾ ಪಂಚಾಯಿತಿಯ ಲೆಕ್ಕಾಧಿಕಾರಿ ಆಗಿರುವ ಬಿ.ಎಸ್.ಗಂಗಾಧರ್ ಅವರಿಗೆ ಬೆಂಗಳೂರು ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿದೆ. ಬೆಂಗಳುರು ಕೇಂದ್ರ ವಿಶ್ವ ವಿದ್ಯಾಲಯದ ವಾಣಿಜ್ಯ ವಿಭಾಗದ ಮಾಜಿ ಡಿನ್ ಮತ್ತು ಅಧ್ಯಕ್ಷರು ಅದ ಡಾ.ಎಂ.ಮುನಿರಾಜು ಅವರ ಮಾರ್ಗದರ್ಶನದಲ್ಲಿ ವಾಣಿಜ್ಯ ವಿಭಾಗದಲ್ಲಿ ಲೆಕ್ಕಪತ್ರಗಳು ಮತ್ತು ಲೆಕ್ಕ ಪರಿಶೋಧನೆ ಕುರಿತಾಗಿ ಮಹಾಪ್ರಭಂದನೆ ಮಂಡನೆಗೆ ಬೆಂಗಳೂರು ವಿಶ್ವವಿದ್ಯಾಲಯ ಡಾಕ್ಟರೇಟ್ ನೀಡಿ ಗೌರವಿಸಿದೆ.ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆಯ ಉಪ ನಿರ್ದೇಸಕರಾಗಿರುವ ಗಂಗಾಧರ್ ಶ್ರೀನಿವಾಸಪುರ ತಾಲೂಕಿನ ರಾಯಲ್ಪಾಡು ಹೋಬಳಿಯ ಬಸನಪಲ್ಲಿ ಎಂಬ ಕುಗ್ರಾಮದ ರೈತಾಪಿ ಕುಟುಂಬದ ಕುಡಿ ಗ್ರಾಮದ ಸುಬ್ಬನ್ನ ಮತ್ತು ಮಲ್ಲಮ್ಮ ಕೃಷಿಕ ದಂಪತಿಯ ತೃತೀಯ ಪುತ್ರ ಆಗಿರುವ ಈಗಲೂ ಆಂಧ್ರ ಗಂಡಿಯಂಚಿನ ಗ್ರಾಮ ಬಸನಪಲ್ಲಿಯಿಂದ ತಾವು ಅಧಿಕಾರಿಯಾಗಿರುವ ತಮ್ಮ ಕಾರ್ಯಕ್ಷೇತ್ರದ ಕೋಲಾರ ಜಿಲ್ಲಾ ಪಂಚಾಯಿತಿ ಕಚೇರಿಗೆ ಹೋಗಿಬರುತ್ತಾರೆ ರಜಾ ದಿನಗಳಲ್ಲಿ ತಮ್ಮ ಜಮೀನಿನಲ್ಲಿ ಕುಟುಂದ ಸದಸ್ಯರೊಂದಿಗೆ ದಿನ ಪೂರ್ತಿ ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಾರೆ.
ಗಂಗಾಧರ್ ಕೆ.ಎಸ್,ಎ.ಎಸ್ ಅಧಿಕಾರಿಯಾಗಿ ವ್ಯಾಸಾಂಗದ ಕುರಿತಾಗಿ ನಿರಂತರವಾಗಿ ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದಾರೆ.
Trending
- ಶ್ರೀನಿವಾಸಪುರ:ಕಸ ಹಾಕುವ ವಿಚಾರಕ್ಕೆ ಜಗಳ ಒಬ್ಬನ ಕೊಲೆ!
- ಶ್ರೀನಿವಾಸಪುರ:ವೇಶ್ಯಾವಾಟಿಕೆ ದಂಧೆ ಪೊಲೀಸ್ ದಾಳಿ, ಕಿಂಗ್ ಪಿನ್ ಮಹಿಳೆ ಬಂಧನ!
- ಶ್ರೀನಿವಾಸಪುರ:ವಾಹನ ಡಿಕ್ಕಿಯಾಗಿ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಪೇದೆ ನಿಧನ!
- ಶ್ರೀನಿವಾಸಪುರ:ಕರ್ನಾಟಕ ಬ್ಯಾಂಕ್ ಉದ್ಯೋಗಿ ಅಪಘಾತದಲ್ಲಿ ಸಾವು!
- ಲಂಚ ಪಡೆಯುತ್ತಿದ್ದ ಬಿಜೆಪಿ ಶಾಸಕ ಲೋಕಾಯುಕ್ತ ಬಲೆಗೆ!
- ಯಾವ ಐಟಿ-ಬಿಟಿ ಗೂ ಕಡಿಮೆ ಇಲ್ಲ,Dairy Farm ಆದಾಯ ಲಕ್ಷಗಟ್ಟಲೆ!
- ಬೆಂಗಳೂರಿನಲ್ಲಿ ಕುಬೇರರು ವಾಸಿಸುವ“ಬಿಲಿಯನೇರ್ಸ್ ಸ್ಟ್ರೀಟ್”ಎಲ್ಲಿದೆ?
- ಶ್ರೀನಿವಾಸಪುರ:ನೌಕರರ ಸಂಘದ ಹಾಲಿ-ಮಾಜಿ ಅಧ್ಯಕ್ಷರ ನಡುವೆ ಬಿದಿ ಜಗಳ!
Saturday, March 7



