ನ್ಯೂಜ್ ಡೆಸ್ಕ್:ರಾಜ್ಯದ ಎಲ್ಲಾ ಕೆಲಸಗಳಲ್ಲೂ ಹಿಂದಿಯವರದೆ ಮೆಲೂಗೈ ಆಗಿದೆ ಅದು ಮಾಲ್ ಇರಬಹುದು ಆಫಿಸ್ ಬಾಯ್ ಆಗಿರಬಹುದು ಸಾಫ್ಟವೇರ್, ಬಯೋಟೆಕ್ನಾಲಜಿ, ಫೈನಾನ್ಸ್, ಎಚ್ಆರ್ ಉದ್ಯೋಗ ಕ್ಷೇತ್ರಗಳಲ್ಲಿ ಹಿಂದಿಯವರ ಕಾರುಬಾರು ಜೋರಾಗಿದೆ, ಕಾರ್ಪೆಂಟರಿಂಗ್, ಪೈಟಿಂಗ್, ಬ್ಯಾಂಕಿಂಗ್, ಟ್ರಾನ್ಸಪೋರ್ಟ್ ಕ್ಷೇತ್ರಕ್ಕೂ ವಿಸ್ತರಿಸಲಾರಂಭಿಸಿದ್ದು ಗ್ರಾಮೀಣ ಭಾಗದಲ್ಲಿ ಇಟ್ಟಿಗೆ ಭಟ್ಟಿ, ಹಸು ಸಾಕಾಣಿಕೆ ಕೃಷಿ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಹಿಂದಿ ವಾಲಗಳದೆ ಪಾರು ಪತ್ಯೆ.
ಬೆಂಗಳೂರಿನ ಹೋಟೆಲ್ ಗಳಿಗೂ ಹಿಂದಿ ವಾಲಗಳು ಎಂಟ್ರಿ ಕೊಟ್ಟಿದ್ದು ಆರಂಭದಲ್ಲಿ ಸ್ವಚ್ಚತೆಯಲ್ಲಿ ಮಾತ್ರ ಇದ್ದ ಇವರ ಕಾರ್ಯ ಇತ್ತಿಚಿಗೆ ದರ್ಶಿನಿ ಹೋಟೆಲ್ ಉಡುಪಿ ಹೋಟೆಲ್ ಫಾಸ್ಟ್ ಫುಡ್ ಸೆಂಟರ್ ಗಳಲ್ಲಿ ಹಿಂದಿ ಭಾಷಿಕರು ಕೌಂಟರ್ ನಿಂದ ಹಿಡಿದು ಎಲ್ಲಾ ಕಡೆ ವಿಭಾಗಗಳಲ್ಲೂ ತುಂಬಿದ್ದಾರೆ.
ನಮ್ಮ ರಾಜ್ಯದ ಹೆಮ್ಮೆಯ ತಿಂಡಿಗಳಾದ ಇಡ್ಲಿ ವಡೆ ದೋಸೆ ಸೇರಿದಂತೆ ಇನ್ನಿತರೆ ತಿಂಡಿ ತಿನಿಸುಗಳನ್ನು ಮಾಡುವಲ್ಲಿ ಹಿಂದಿವಾಲಗಳು ಸೈ ಎನಿಸಿಕೊಂಡಿದ್ದಾರಂತೆ ಹಿಗೆಂದು ಕೆಲ ಹೋಟೆಲ್ ಮಾಲಿಕರು ಹೇಳುತ್ತಾರೆ.
ಹಿಂದೆಲ್ಲಾ ದರ್ಶಿನಿ ಹೋಟೆಲ್ ಗಳು ಕರಾವಳಿ ಭಾಗದವರದೆ ಹೆಚ್ಚಾಗಿತ್ತು ಅಲ್ಲಿ ಅಡುಗೆ ಭಟ್ಟರಿಂದ ಹಿಡಿದು ಕ್ಲೀನರ್ ತನಕ, ತಮ್ಮ ಊರುಗಳಿಂದ ಕಾರ್ಮಿಕರನ್ನು ಕರೆದುಕೊಂಡು ಬರುತ್ತಿದ್ದು ವಾಡಿಕೆಯಾಗಿತ್ತು ಬೆರೆಯಾರುಗೂ ಅವಕಾಶವೆ ಇರಲಿಲ್ಲ ಈಗ ಎಕಾಏಕಿ ಹಿಂದಿವಾಲಾಗಳಿಗೆ ಕೆಲಸ ಸೇರಿಕೊಳ್ಳಲು ಸಂದರ್ಭ ಒದಗಿದೆ. ಇದು ಸ್ಥಳೀಯರಿಗೆ ಎಚ್ಚರಿಕೆಯ ಗಂಟೆ ಭಾರಿಸಿದಂತೆ ಎಂಬ ಅಭಿಪ್ರಾಯ ಮೂಡುತ್ತಿದೆ ಎನ್ನುವ ಮಾತು ಎಲ್ಲಡೆ ಕೇಳಿಬರುತ್ತಿದೆ. ಮಾಲಿಕರಿಂದ ಹಿಡಿದು ಎಲ್ಲರೂ ಹಿಂದಿಯವರನ್ನು ಭಯ್ಯಾ ಎಂದೆ ಕರೆಯುವುದು ಇದು ಸಾಮನ್ಯ.
ಯಾಕೆ ಹಿಂದಿ ಭಾಷಿಕರಿಗೆ ಆದ್ಯತೆ
ಸ್ಥಳಿಯರನ್ನು ಕೆಲಸಕ್ಕೆ ಇಟ್ಟುಕೊಂಡರೆ, ಅವರು ಯಾವಾಗ ಕೆಲಸ ಬಿಡುತ್ತಾರೋ ಎನ್ನುವ ಟೆನ್ಸನ್ ಇರುತ್ತದೆ, ದೂರದ ರಾಜ್ಯಗಳ ಹಿಂದಿಯವರನ್ನು ಕೆಲಕ್ಕೆ ಸೇರಿಸಿಕೊಂಡರೆ ಕನಿಷ್ಠ ವರ್ಷಕ್ಕೊಮ್ಮೆ ಇಲ್ಲವೇ ಎರಡು ಬಾರಿ ಮಾತ್ರ ಅವರು ತಮ್ಮ ಊರಿಗೆ ಹೋಗುತ್ತಾರೆ. ಅವರಿಗೆ ಮುಖ್ಯವಾಗಿ, ಊಟ ವಸತಿ ವ್ಯವಸ್ಥೆ ಮಾಡುವುದರಿಂದ, ಅವರು ಬೇರೆ ಉದ್ಯೋಗ ಅರಸಿ ಇತರಡೆ ಹೋಗುವುದಿಲ್ಲ. ಅವರು ಕನ್ನಡ ಕಲಿಯಬೇಕು ಎಂದು ನಾವೆಲ್ಲಾ ಅವರ ಜೊತೆ ಕನ್ನಡದಲ್ಲೇ ಮಾತುಕತೆ ನಡೆಸುತ್ತೇವೆ “ಎಂದು ಉದ್ಯಮಿಗಳು ಹೇಳುತ್ತಾರೆ.ಅದೇನೆಂದರೆ ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ನಿರುದ್ಯೋಗಿಗಳಿಗೆ ಕರ್ನಾಟಕ ಸಮೃದ್ದವಾಗಿದೆಯೆಂಬ ಅಭಿಪ್ರಾಯ ಇದೆ.
Trending
- ಶ್ರೀನಿವಾಸಪುರ:ಕಸ ಹಾಕುವ ವಿಚಾರಕ್ಕೆ ಜಗಳ ಒಬ್ಬನ ಕೊಲೆ!
- ಶ್ರೀನಿವಾಸಪುರ:ವೇಶ್ಯಾವಾಟಿಕೆ ದಂಧೆ ಪೊಲೀಸ್ ದಾಳಿ, ಕಿಂಗ್ ಪಿನ್ ಮಹಿಳೆ ಬಂಧನ!
- ಶ್ರೀನಿವಾಸಪುರ:ವಾಹನ ಡಿಕ್ಕಿಯಾಗಿ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಪೇದೆ ನಿಧನ!
- ಶ್ರೀನಿವಾಸಪುರ:ಕರ್ನಾಟಕ ಬ್ಯಾಂಕ್ ಉದ್ಯೋಗಿ ಅಪಘಾತದಲ್ಲಿ ಸಾವು!
- ಲಂಚ ಪಡೆಯುತ್ತಿದ್ದ ಬಿಜೆಪಿ ಶಾಸಕ ಲೋಕಾಯುಕ್ತ ಬಲೆಗೆ!
- ಯಾವ ಐಟಿ-ಬಿಟಿ ಗೂ ಕಡಿಮೆ ಇಲ್ಲ,Dairy Farm ಆದಾಯ ಲಕ್ಷಗಟ್ಟಲೆ!
- ಬೆಂಗಳೂರಿನಲ್ಲಿ ಕುಬೇರರು ವಾಸಿಸುವ“ಬಿಲಿಯನೇರ್ಸ್ ಸ್ಟ್ರೀಟ್”ಎಲ್ಲಿದೆ?
- ಶ್ರೀನಿವಾಸಪುರ:ನೌಕರರ ಸಂಘದ ಹಾಲಿ-ಮಾಜಿ ಅಧ್ಯಕ್ಷರ ನಡುವೆ ಬಿದಿ ಜಗಳ!
Saturday, March 7



