ಶ್ರೀನಿವಾಸಪುರ:ಯಾರು ಏನೆ ಅಪಪ್ರಚಾರ ಮಾಡಿದರು ಯಾವುದೇ ಕಾರಣಕ್ಕೂ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರವನ್ನು ಬಿಟ್ಟುಹೋಗುವ ಪ್ರಶ್ನೆ ಇಲ್ಲ ನನ್ನನ್ನು ಬೆಂಬಲಿಸುವ ಮುಖಂಡರ ಅಭಿಪ್ರಾಯದಂತೆ 2023 ಚುನಾವಣೆಯಲ್ಲಿ ಸ್ಪರ್ದಿಸುವುದು ಗ್ಯಾರಂಟಿ ಎಂದು ಗುಂಜೂರುಶ್ರೀನಿವಾಸರೆಡ್ಡಿ ಹೇಳಿದರು ಅವರು ಇಂದು ಜೆಡಿಎಸ್ ಮತ್ತು ಕಾಂಗ್ರೆಸ್ ಮುಖಂಡರನ್ನು ತಮ್ಮ ಬಣಕ್ಕೆ ಸೇರ್ಪಡೆಮಾಡಿಕೊಂಡು ಮಾತನಾಡಿದರು ಕ್ಷೇತ್ರವನ್ನು ಕಳೆದ ನಲವತ್ತು ವರ್ಷಗಳಿಂದ ನಿರ್ಲಕ್ಷ್ಯಸಿದ ಪರಿಣಾಮ ಅಭಿವೃದ್ದಿಯಲ್ಲಿ ಹಿಂದುಳಿದಿದೆ ಇಲ್ಲಿನ ಜೀವನಾಡಿ ಬೆಳೆಯಾದ ಮಾವಿಗೆ ಶಾಶ್ವತ ಮಾರುಕಟ್ಟೆ ಒದಗಿಸಲು ಸಾದ್ಯವಾಗಿಲ್ಲ ರೈತಾಪಿ ಜನರ ಬವಣೆ ತಿರಿಸಲು ಪ್ರಯತ್ನವೆ ನಡೆಸದ ಇಲ್ಲಿ ಆಡಳಿತ ನಡೆಸುವಂತವರು ನೀರು ತಂದಿದ್ದೇವೆ ಎಂದು ಕ್ಷೇತ್ರದ ಜನರನ್ನು ಯಾಮಾರಿಸಲು ಹೋರಟಿದ್ದಾರೆ ಇವರ ನಿಜಸ್ವರೂಪ ಏನೆಂಬುದು ಮತ್ತು ನೀರಿನ ಗುಣಮಟ್ಟದ ಎಂತಹದು ಎಂದು ಅರಿತಿರುವ ಜನತೆ ತೀವ್ರವಾಗಿ ಬೇಸರ ಗೊಂಡಿದ್ದಾರೆ ನಾಲ್ಕುದಶಕಗಳ ರಾಜಕಾರಣದ ವಿರುದ್ದ ಮತದಾರರು ಹೊಸಬದಲಾವಣೆ ತರಬೇಕು ಎಂದು ಮುಂದಾಗಿದ್ದಾರೆ ಚುನಾವಣೆ ಹೊತ್ತಿಗೆ ಮತ್ತಷ್ಟು ಬದಲಾವಣೆ ಕ್ಷೇತ್ರದಲ್ಲಿ ಕಾಣಬಹುದಾಗಿದೆ ಎಂದು ಹೇಳಿದರು.
ಕ್ಷೇತ್ರದಲ್ಲಿ ನನ್ನ ಪರವಾಗಿ ದೊರೆಯುತ್ತಿರುವ ಜನಬೆಂಬಲ ಕಂಡು ಕೆಲ ಕಿಡಿಗೇಡಿಗಳು ನನ್ನ ವಿರುದ್ದ ಅಪಪ್ರಚಾರಕ್ಕೆ ಮುಂದಾಗಿದ್ದಾರೆ ಜನತೆ ಯಾವುದೇ ಅಪಪ್ರಚಾರಕ್ಕೆ ಕಿವಿಗೊಡಬೇಡಿ ಯಾರು ಎನು ಹೇಳಿದರು ಕ್ಷೇತ್ರದ ಜನರ ಅಶಿರ್ವಾದದಿಂದ ಸ್ಪರ್ದೆ ಮಾಡುವ ನಿರ್ಧಾರ ಅಚಲ ಎಂದರು.
ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಪೆದ್ದರೆಡ್ಡಿರಾಜೇಂದ್ರಪ್ರಸಾದ್ ಮಾತನಾಡಿ ಕ್ಷೇತ್ರದಲ್ಲಿ ನಲವತ್ತು ವರ್ಷಗಳಿಂದ ರಾಜಕಾರಣ ಮಾಡಿಕೊಂಡು ಬಂದವರ ವಿರುದ್ದ ಜನತೆ ಬೆಸೆತ್ತಿದ್ದಾರೆ ನಲವತ್ತು ವರ್ಷದ ಇಲ್ಲಿನ ರಾಜಕೀಯಕ್ಕೆ ಇತೀಶ್ರಿ ಹಾಡಬೇಕು ಎಂದು ಕ್ಷೇತ್ರದ ಮತದಾರರು ಬದಲಾವಣೆ ಬಯಸಿದ್ದಾರೆ ಇದಕ್ಕೆ ಈಗ ಕಾಲಕೂಡಿಬಂದಿದೆ ಮುಂದಿನ ಚುನಾವಣೆಯಲ್ಲಿ ಕಾರ್ಯಕರ್ತರ ಒಮ್ಮತದ ನಿರ್ಧಾರದೊಂದಿಗೆ ಗುಂಜೂರುಶ್ರೀನಿವಾಸರೆಡ್ಡಿ ಸ್ಪರ್ದಿಸುತ್ತಾರೆ ಈ ಬಗ್ಗೆ ಯಾರಿಗೂ ಯಾವ ಅನುಮಾನಗಳು ಬೇಡ ಎಂದರು
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಅತ್ತಿಕುಂಟೆರಾಜಶೇಖರರೆಡ್ದಿ ಮಾತನಾಡಿ ಜನಾಭಿಪ್ರಾಯ ವ್ಯಕ್ತಪಡಿಸಲು ದಿನಗಳು ಹತ್ತಿರವಾಗುತ್ತಿದೆ ಕ್ಷೇತ್ರದಲ್ಲಿ ಆಶ್ಚರ್ಯಕರವಾದ ಫಲಿತಾಂಶ ಹೊರಬರಲಿದೆ ಎಂದರು. ಪುರಸಭೆ ಮಾಜಿ ಸದಸ್ಯ ಮಹಮದ್ ಆಲಿ ಪಠಾಣ್ ಶಫಿಉಲ್ಲಾ,ಪಟೇಲ್ ಶಫಿ,ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷ ದೊರೆಸ್ವಾಮಿ,ಮುದುವಾಡಿ ಹೊಸಹಳ್ಳಿ ಚಂದ್ರಪ್ಪ,ಬಂಗವಾದಿ ನಾಗರಾಜಗೌಡ,ಶ್ರೀರಾಮ್ ಮುಂತಾದವರು ಇದ್ದರು.
ಇದೇ ಸಂದರ್ಭದಲ್ಲಿ ಯಲ್ದೂರಿನ ನಾಯಕರ ಬೀದಿಯ ಹಲವಾರು ಯುವಕರು ಮುಖಂಡರು ಜೆಡಿಎಸ್-ಕಾಂಗ್ರೆಸ್ ತೊರೆದು ಗುಂಜೂರುಶ್ರೀನಿವಾಸರೆಡ್ಡಿ ಬಣಕ್ಕೆ ಸೇರ್ಪಡೆಯಾದರು.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Sunday, April 27