ಶ್ರೀನಿವಾಸಪುರ: ತಾಲೂಕಿನ ರಾಯಲ್ಪಾಡು ಹೋಬಳಿಯ ಯಂಡ್ರಕಾಯಿಲಗುಂಟ ಗ್ರಾಮದ ದೇವಾಲಯಕ್ಕೆ ಸಮಾಜಸೇವಕ ಗೂಂಜೂರುಶ್ರೀನಿವಾಸರೆಡ್ದಿ ಧ್ವನಿವರ್ಧಕ ಹಾಗು ಇತರೆ ಪರಿಕರಗಳು ಕೊಡುಗೆಯಾಗಿ ನೀಡಿದರು.
ಈ ಸಂದರ್ಬದಲ್ಲಿ ಮಾತನಾಡಿದ ಶ್ರೀನಿವಾಸರೆಡ್ದಿ ಗ್ರಾಮದ ಯುವಸಮುದಾಯ ನಮ್ಮ ಬಣಕ್ಕೆ ಸೇರ್ಪಡೆಯಾಗಿದ್ದು ಅವರು ಹಣ ಸೇರಿದಂತೆ ಇನ್ನಿತರೆ ಯಾವುದೆ ವೈಯುಕ್ತಿಕ ಆಮೀಷಕ್ಕೆ ಒಳಗಾಗದೆ ದೇವಾಲಯದ ಅಭಿವೃದ್ಧಿಗೆ ಸಹಕಾರ ನೀಡುವಂತೆ ಮನವಿ ಮಾಡಿದ್ದರು ಅದರಂತೆ ಆರಂಭಿಕವಾಗಿ ಧ್ವನಿವರ್ಧಕ ಸೇರಿದಂತೆ ಇನ್ನಿತರೆ ಪರಿಕರಗಳನ್ನು ಕೊಡುಗೆಯಾಗಿ ಕೊಡುತ್ತಿದ್ದೇವೆ ಮುಂದಿನ ದಿನಗಳಲ್ಲಿ ಗ್ರಾಮದ ಅಭಿವೃದ್ಧಿಗೆ ಸಂಪೂರ್ಣವಾದ ಸಹಕಾರ ನೀಡುವುದಾಗಿ ಹೇಳಿದರು.
ಇದೇ ಸಂದರ್ಬದಲ್ಲಿ ಹೋಳೂರು ಹೋಬಳಿಯ ಮಾರೇನಹಳ್ಳಿ ಗ್ರಾಮದ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯಕ್ಕೆ ಪೈಂಟ್ ಬಳಿಯಲು ಧನಸಹಾಯ ಮಾಡಿರುತ್ತಾರೆ.
ಈ ಕಾರ್ಯಕ್ರಮದಲ್ಲಿ ಜಿ.ಎಸ್.ಆರ್ ಬಣದ ಮುಖಂಡರಾದ ಎಪಿಎಂಸಿ ಮಾಜಿ ಅಧ್ಯಕ್ಷ ಪೆದ್ದರೆಡ್ಡಿರಾಜೇಂದ್ರಪ್ರಸಾದ್,ಪಠಾಣ್ ಷಫಿ,ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಅತ್ತಿಕುಂಟೆರಾಜಶೇಖರೆಡ್ದಿ,ಯಂಡ್ರಕಾಯಿಲಗುಂಟ ಗ್ರಾಮದ ವೆಂಕಟರಮಣ,ನರಸಿಂಹಯ್ಯ,ರವಣಪ್ಪ,ಮುಂತಾದವರು ಇದ್ದರು.
Trending
- ಶ್ರೀನಿವಾಸಪುರ:ಕಸ ಹಾಕುವ ವಿಚಾರಕ್ಕೆ ಜಗಳ ಒಬ್ಬನ ಕೊಲೆ!
- ಶ್ರೀನಿವಾಸಪುರ:ವೇಶ್ಯಾವಾಟಿಕೆ ದಂಧೆ ಪೊಲೀಸ್ ದಾಳಿ, ಕಿಂಗ್ ಪಿನ್ ಮಹಿಳೆ ಬಂಧನ!
- ಶ್ರೀನಿವಾಸಪುರ:ವಾಹನ ಡಿಕ್ಕಿಯಾಗಿ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಪೇದೆ ನಿಧನ!
- ಶ್ರೀನಿವಾಸಪುರ:ಕರ್ನಾಟಕ ಬ್ಯಾಂಕ್ ಉದ್ಯೋಗಿ ಅಪಘಾತದಲ್ಲಿ ಸಾವು!
- ಲಂಚ ಪಡೆಯುತ್ತಿದ್ದ ಬಿಜೆಪಿ ಶಾಸಕ ಲೋಕಾಯುಕ್ತ ಬಲೆಗೆ!
- ಯಾವ ಐಟಿ-ಬಿಟಿ ಗೂ ಕಡಿಮೆ ಇಲ್ಲ,Dairy Farm ಆದಾಯ ಲಕ್ಷಗಟ್ಟಲೆ!
- ಬೆಂಗಳೂರಿನಲ್ಲಿ ಕುಬೇರರು ವಾಸಿಸುವ“ಬಿಲಿಯನೇರ್ಸ್ ಸ್ಟ್ರೀಟ್”ಎಲ್ಲಿದೆ?
- ಶ್ರೀನಿವಾಸಪುರ:ನೌಕರರ ಸಂಘದ ಹಾಲಿ-ಮಾಜಿ ಅಧ್ಯಕ್ಷರ ನಡುವೆ ಬಿದಿ ಜಗಳ!
Saturday, March 7



