ನ್ಯೂಜ್ ಡೆಸ್ಕ್:ಪರಮಾತ್ಮ ಮಹಾಶಿವನು ವಿರಾಜಮಾನನಾಗಿ ನೆಲೆಸಿರುವ ಅತ್ಯಂತ ಪವಿತ್ರವಾದ ಸ್ಥಳವಾಗಿರುವ ವಾರಣಾಸಿ ಕಾಶಿಯಲ್ಲಿ ಸೂರ್ಯಾಸ್ತಮಾನದ ಬಳಿಕ ಗಂಗಾ ನದಿ ತೀರದಲ್ಲಿ ನಡೆಯುವ ಗಂಗಾ ಆರತಿಯನ್ನು ಜೀವನದಲ್ಲಿ ಒಮ್ಮೆಯಾದರೂ ನೋಡಬೇಕು ಎಂಬುದು ಬಹುತೇಕ ಹಿಂದೂಗಳ ಕನಸು ಗಂಗಾ ನದಿ ತೀರದಲ್ಲಿ ಸಂಜೆ ಡಮರುಗ, ಶಂಖನಾದ ಹಾಗೂ ಗಂಗೆಯ ಕೀರ್ತನೆಯಲ್ಲಿ ನಡೆಯುವ ಆರತಿ ನೋಡುಗರನ್ನು ಭಕ್ತಿಪರವಶವಾಗುವಂತೆ ಮಾಡುತ್ತದೆ ಇದನ್ನು ಕಣ್ತುಂಬಿಕೊಳ್ಳಲು ದೇಶ- ವಿದೇಶದಿಂದ ಭಕ್ತರು ಆಗಮಿಸುತ್ತಾರೆ ವೈವಿದ್ಯಮಯವಾಗಿ ನಡೆಯುತ್ತಿದ್ದ ಗಂಗಾ ಆರತಿಯನ್ನು ಸದ್ಯದ ಪರಿಸ್ಥಿತಿಯಲ್ಲಿ ನಿಲ್ಲಿಸಲಾಗಿದೆ ಎಂದು ಹೇಳಲಾಗಿದೆ
ಪ್ರಯಾಗರಾಜ್ ಮಹಾಕುಂಭಮೇಳಕ್ಕೆ ಹೋಗುತ್ತಿರುವ ಭಕ್ತರು ಅಲ್ಲಿಂದ ಕಾಶಿ ವಿಶ್ವನಾಥ ದೇವಸ್ಥಾನವನ್ನು ನೋಡಲು ಹೋಗುತ್ತಿದ್ದಾರೆ ಪರಿಣಾಮ ವಾರಣಾಸಿಯಲ್ಲಿ ಅಧಿಕ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಿದ್ದು ಜನದಟ್ಟಣೆ ದಿನೆ ದಿನೆ ಹೆಚ್ಚಾಗುತ್ತಿದ್ದು ನಿತಂತ್ರಣಕ್ಕೆ ಸಮಸ್ಯೆ ಆಗುತ್ತಿರುವ ಹಿನ್ನಲೆಯಲ್ಲಿ ಗಂಗಾ ತಟದ ಘಾಟ್ಗಳಲ್ಲಿ ನಡೆಯುತ್ತಿದ್ದ ‘ಗಂಗಾ ಆರತಿ’ಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಗಂಗಾ ಆರತಿ ಇರಲ್ಲ ಘಾಟ್ ಗಳ ಬಳಿ ಬರಬೇಡಿ
ದಶಾಶ್ವಮೇಧ ಘಾಟ್ನಲ್ಲಿ ನಡೆಯುವ ಗಂಗಾ ಆರತಿ ಫೆಬ್ರವರಿ 5 ರವರೆಗೆ ಸಾರ್ವಜನಿಕರಿಗೆ ಸ್ಥಗಿತಗೊಳಿಸಲಾಗಿದೆ ಎಂದು ಗಂಗಾ ಸೇವಾ ನಿಧಿ ಅಧ್ಯಕ್ಷ ಸುಶಾಂತ್ ಮಿಶ್ರಾ ಶುಕ್ರವಾರ ತಿಳಿಸಿದ್ದಾರೆ. ಇದಲ್ಲದೆ, ಶೀತ್ಲಾ ಘಾಟ್, ಅಸ್ಸಿ ಘಾಟ್ ಮತ್ತು ಇತರ ಘಾಟ್ಗಳಲ್ಲಿ ಗಂಗಾ ಆರತಿ ಮಾಡುವ ಸಮಿತಿಗಳು ಸಹ ಫೆಬ್ರವರಿ 5 ರವರೆಗೆ ಸಾರ್ವಜನಿಕರು, ಮತ್ತು ಭಕ್ತರು ಘಾಟ್ಗಳ ಬಳಿಗೆ ಬಾರದಂತೆ ಮನವಿ ಮಾಡಲಾಗಿದೆ.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Saturday, April 26