ಶ್ರೀನಿವಾಸಪುರ:ಸಣ್ಣ ಪುಟ್ಟ ರೈತರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ವಿನಾಕಾರಣ ತೊಂದರೆ ಕೊಡುತ್ತಿದ್ದಾರೆ ಎಂದು
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ರೈತರು ಇಂದು ಶ್ರೀನಿವಾಸಪುರದ ಅರಣ್ಯ ಇಲಾಖೆಯ ಕಚೇರಿ ಮುಂದೆ ಧರಣಿ ನಡೆಸಿ ಪ್ರತಿಭಟಿಸಿದರು. ಐವತ್ತು ಅರವತ್ತು ವರ್ಷಗಳ ಹಿಂದೆ ಖರೀದಿ ಮಾಡಿ ಸಾಗುವಳಿ ಮಾಡುತ್ತಿರುವ ಸಣ್ಣ ಪುಟ್ಟ ರೈತರ ಜಮೀನುಗಳನ್ನು ಪದೇ ಪದೇ ಸೆಟಲೈಟ್ ಸರ್ವೆ ನೆಪದಲ್ಲಿ ಗುರುತು ಹಾಕಿ ಅರ್ದ ಎಕರೆ ಮೂಕ್ಕಾಲು ಎಕರೆ ಬಿಡಬೇಕು ಎಂದು ತೊಂದರೆ ನೀಡುತ್ತಿದ್ದಾರೆ ಆರೋಪಿಸಿದರು.
ದಶಕಗಳ ಹಿಂದೆಯೆ ಅರಣ್ಯ ಇಲಾಖೆ ತಮ್ಮ ಅರಣ್ಯ ಭೂಮಿಯನ್ನು ಗಡಿ ಗುರುತು ಮಾಡಿ ಕಲ್ಲು ನೆಟ್ಟಿದ್ದರು ಈಗ ಮತ್ತೆ ಹೊಸದಾಗಿ ಸೆಟಲೈಟ್ ಸರ್ವೆ ಹೆಸರಿನಲ್ಲಿ ಕಿರುಕಿಳ ನೀಡುತ್ತಿದ್ದಾರೆ ಎಂದು ದೂರಿದ ರೈತರು ಇತ್ತಿಚಿಗೆ ಕಾಡು ಪ್ರಾಣಿಗಳಿಂದ ಆಗುತ್ತಿರುವ ಉಳಪಟಗಳಿಂದ ರೈತರು ನಷ್ಟಕ್ಕೆ ಒಳಗಾಗಿರುವ ಬಗ್ಗೆ ಅರಣ್ಯ ಇಲಾಖೆಯವರು ಬೇಜವಾಬ್ದಾರಿತನ ತೊರುತ್ತಿದ್ದಾರೆ ಎಂದರು.
ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ
ರೈತ ಸಂಘದ ಪ್ರತಿಭಟನೆ ಮಾಹಿತಿ ಇದ್ದರು ಅರಣ್ಯ ಇಲಾಖೆ ಕಚೇರಿಯಲ್ಲಿ ರೈತರ ಅಹವಾಲು ಸ್ವೀಕರಿಸಲು ಅಧಿಕಾರಿಗಳು ಇಲ್ಲದೆ ರೈತರಿಗೆ ಅಪಮಾನ ಮಾಡುತ್ತಿದ್ದಾರೆ ಎಂದು ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ನಂಬಿಹಳ್ಳಿ ಶ್ರೀರಾಮರೆಡ್ಡಿ.
ಅರಣ್ಯ ಇಲಾಖೆ ಅಧಿಕಾರಿಗಳ ಧೋರಣೆ ವಿರುದ್ದ ಆಕ್ರೋಶ ಗೊಂಡ ರೈತರು ತಾಲೂಕು ಕಚೇರಿ ಮುಂಬಾಗದಲ್ಲಿ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪೋಲಿಸ್ ಇಲಾಖೆ ಇನ್ಸಪೇಕ್ಟರ್ ನಾರಯಣಸ್ವಾಮಿ ಹಾಗು ತಾಲೂಕು ಕಚೇರಿ ಶೀರಸ್ತೆದಾರ್ ಅವರು ರೈತರ ಮನವೊಲಿಸಿ ಅವರಿಂದ ಅಹವಾಲು ಸ್ವೀಕರಿಸಿದರು.ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯ ಮುಖಂಡ ವೀರಬದ್ರಸ್ವಾಮಿ,ಮೌಲಾ,ಈರಪ್ಪ ಮುಂತಾದವರು ಇದ್ದರು.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Sunday, April 27