ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಗಾಯತ್ರಿ ಮುತ್ತಪ್ಪ ವಿತರಣೆ
ಶ್ರೀನಿವಾಸಪುರ:ಕಳೆದ ವಾರ ಸುರಿದಂತ ಧಾರಕಾರ ಮಳೆಯಿಂದ ಶ್ರೀನಿವಾಸಪುರ ಪಟ್ಟಣದ ಸಂತೆ ಮೈದಾನದಲ್ಲಿನ ಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿದ್ದಂತಹ ಆಹಾರ ಪದಾರ್ಥಗಳು ಬಟ್ಟೆ ವಿದ್ಯಾರ್ಥಿಗಳ ಪುಸ್ತಕಗಳು ಸಹ ಸಂಪೂರ್ಣವಾಗಿ ನೀರು ಪಾಲಾಗಿತ್ತು.
ಈ ಬಗ್ಗೆ ಸ್ಥಳೀಯರ ಸಮಸ್ಯೆಗಳನ್ನು ಕೇಳುವವರೆ ಇಲ್ಲದಂತಾಗಿದ್ದು ಈ ಸಂದರ್ಭದಲ್ಲಿ ಮಾಹಿತಿ ತಿಳಿದುಕೊಂಡ ಕೋಲಾರ ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಗಾಯತ್ರಿ ಮುತ್ತಪ್ಪ ಪಟ್ಟಣದ ಸಂತೆ ಮೈದಾನಕ್ಕೆ ಭೇಟಿ ಕೊಟ್ಟು ಸ್ಥಳೀಯರೊಂದಿಗೆ ಮಾತನಾಡಿ ಸಮಸ್ಯೆಗಳನ್ನು ಆಲಿಸಿದ ಅವರು ಆರಂಭಿಕವಾಗಿ ಮಕ್ಕಳ ಶಿಕ್ಷಣಕ್ಕೆ ಅಗತ್ಯವಿರುವ ನೋಟ್ ಪುಸ್ತಕಗಳು ಬ್ಯಾಗಗಳು ಲೇಖನಿ ಸಾಮಗ್ರಿಗಳನ್ನು ಸುಮಾರು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಗಾಯತ್ರಿ ಮುತ್ತಪ್ಪ ಮಾತನಾಡಿ ಕಳೆದ ವಾರ ಸುರಿದ ಧಾರಕಾರ ಮಳೆಯಿಂದ ಮನೆಗಳಿಗೆ ನುಗ್ಗಿದ ನೀರು ಇಲ್ಲಿನ ಜನರ ಬದಕನ್ನು ಅಸ್ತವ್ಯಸ್ತ ಗೋಳಿಸಿದೆ ಶಾಲಾ ಮಕ್ಕಳ ಪುಸ್ತಕಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದ್ದು ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗುವುದು ಬೇಡ ಎಂದು ನೋಟ್ ಪುಸ್ತಕಗಳು ಹಾಗೂ ಲೇಖನಿ ಸಾಮಗ್ರಿಗಳನ್ನು ವಿತರಣೆ ಮಾಡುತ್ತಿದ್ದೇವೆ ಇದನ್ನು ಪಡೆದಂತ ವಿದ್ಯಾರ್ಥಿಗಳು ಇವುಗಳನ್ನು ಸದುಪಯೋಗ ಪಡಿಸಿಕೊಂಡು ಶೈಕ್ಷಣಿಕವಾಗಿ ಪ್ರಗತಿ ಸಾಧಿಸುವಂತೆ ಕಿವಿಮಾತು ಹೇಳಿದ ಅವರು ವಿದ್ಯಾರ್ಥಿಗಳಿಗೆ ಒಳ್ಳೆಯದಾಗಲಿ ಎಂದರು.
ಸಮಸ್ಯೆ ಶಾಸಕರ ಗಮನಕ್ಕೆ ತರುತ್ತೇವೆ
ಸಂತೆ ಮೈದಾನದ ಸಮಸ್ಯೆ ಕುರಿತು ಶಾಸಕರ ಜೊತೆ ಹಾಗೂ ಸಂಸದರೊಂದಿಗೆ ಮಾತನಾಡುತ್ತೇವೆ ಆದಷ್ಟು ಬೇಗ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮಾಡುವುದಾಗಿ ಹೇಳಿದರು.ಈ ಸಂದರ್ಭದಲ್ಲಿ ಮುಖಂಡರಾದ ಪೂಲುಶಿವಾರೆಡ್ಡಿ, ಕಾರ್ ಬಾಬು, ರಮೇಶ್, ಆನಂದರೆಡ್ಡಿ, ಪುರಸಭೆಮುನಿಸ್ವಾಮಿ ಮುಂತಾದವರು ಇದ್ದರು



