ನ್ಯೂಜ್ ಡೆಸ್ಕ್:ಕನ್ನಡ ಚಿತ್ರ ರಂಗದ ದೊಡ್ಮನೆ ಸೊಸೆ ಹ್ಯಾಟ್ರಿಕ್ ಹಿರೋ ಶಿವರಾಜಕುಮಾರ್ ಪತ್ನಿ ಗೀತಾ ಅವರು ಇನ್ಮುಂದೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದಾರೆ.
2024ರ ಶಿವಮೊಗ್ಗ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ನಿಂದ ನಿಂತು ಸೋತಿದ್ದ ಅವರು ಶಿವಮೊಗ್ಗದ ಕಾಂಗ್ರೆಸ್ ಕಚೇರಿಯಲ್ಲಿ ನಡೆದಂತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಗೀತಾ ಶಿವರಾಜ್ ಕುಮಾರ್, ನಾನು ಚುನಾವಣೆಗಳಲ್ಲಿ ಸ್ಪರ್ಧಿಸಲ್ಲ. ಆದರೆ ನಿಮ್ಮೆಲ್ಲರ ಜೊತೆ ಇರುತ್ತೇನೆ. ಮುಂದಿನ ಚುನಾವಣೆಗೂ ಬಂದು ಪ್ರಚಾರ ಮಾಡುತ್ತೇನೆ ಎಂದು ಹೇಳಿದರು. ಮಹಿಳೆಯರು ಯಾರೂ ಅಬಲೆಯೆರಲ್ಲ, ಎಲ್ಲರೂ ಸಬಲೆಯರು. ಮಹಿಳೆಯರಿಗೆ ಶಕ್ತಿ ನೀಡಿದರೆ ಎಂತಹ ಕೆಲಸವನ್ನಾದರೂ ಮಾಡುತ್ತಾರೆ. ಇನ್ನು ನಿಮಗೆ ಯಾವುದೇ ಸಮಸ್ಯೆ, ಕಷ್ಟಗಳಿದ್ದರೂ ಸಚಿವ ಮಧು ಬಂಗಾರಪ್ಪ ಅವರನ್ನು ಕಂಡು ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳಿ ಎಂದು ಹೇಳಿದರು.

ಶಿವಮೊಗ್ಗ ಲೋಕಸಭಾಕ್ಷೇತ್ರ ಮೊದಲಿನಿಂದಲೂ ಕಾಂಗ್ರೆಸ್ ಭದ್ರಕೋಟೆಯಾಗಿತ್ತು 1996 ರಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಕರ್ನಾಟಕ ವಿಕಾಸ ಪಕ್ಷದಿಂದ ಸ್ಪರ್ದಿಸಿ ಮೊದಲಬಾರಿಗೆ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿದ್ದರು ನಂತರದಲ್ಲಿ 1998 ರಲ್ಲಿ ಭಾರತೀಯಯ ಜನತಾ ಪಕ್ಷದ ಆಯನೂರು ಮಂಜುನಾಥ್ ಗೆಲವು ಸಾದಿಸಿದ್ದರು ನಂತರ 1999 ರಲ್ಲಿ ಮತ್ತೆ ಬಂಗಾರಪ್ಪ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾಯಿತರಾದರೆ ನಂತರ ಬಿಜೆಪಿ ಸೇರಿದ ಬಂಗಾರಪ್ಪ 2004 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಗೆಲವು ಸಾಧಿಸುತ್ತಾರೆ ಮತ್ತೆ 2005 ಚುನಾವಣೆ ವೇಳೆಗೆ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಗೆಲ್ಲುತ್ತಾರೆ ಪಕ್ಷಗಳನ್ನು ಬದಲಾಯಿಸಿದರು ಬಂಗರಪ್ಪನವರ ಮೂರು ಬಾರಿ ಹ್ಯಾಟ್ರಿಕ್ ಗೆಲವು ತಡೆಯಲು ಅವರ ರಾಜಕೀಯ ಪ್ರತ್ಯರ್ಥಿಗಳಿಗೆ ಸಾದ್ಯವಾಗಲಿಲ್ಲ ಅದರೆ 2009 ರಲ್ಲಿ ಬಂಗರಪ್ಪ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳದಿದ್ದು ಅವರನ್ನು ಬಿಜೆಪಿ ಅಭ್ಯರ್ಥಿಯಾಗಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮಗ ರಾಘವೇಂದ್ರ ಸುಮಾರು ಐವತ್ತು ಸಾವಿರ ಮತಗಳಿಂದ ಪರಾಜಯಗೋಳಿಸಿದರು.ಆ ನಂತರದಲ್ಲಿ ರಾಘವೇಂದ್ರ ಬಿಜೆಪಿ ಅಭ್ಯರ್ಥಿಯಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ನಿರಂತರವಾಗಿ ಗೆಲುವಿನ ನಗೆ ಬೀರುತ್ತಿದ್ದಾರೆ.
ಬಂಗಾರಪ್ಪನ ಮಕ್ಕಳಿಗೆ ಸಿಗದ ಶಿವಮೊಗ್ಗ ಲೋಕಸಭಾ ಗೆಲವು
2014 ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕೆ ಇಳದಿದ್ದ ನಟ ಶಿವರಾಜಕುಮಾರ್ ಪತ್ನಿ ಗೀತಾ ಮೂರನೆ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು ನಂತರ 2018 ರ ಚುನಾವಣೆಯಲ್ಲಿ ಈಗಿನ ಕಾಂಗ್ರೆಸ್ ಸರ್ಕಾರದ ಶಿಕ್ಷಣ ಸಚಿವ ಮಧುಬಂಗಾರಪ್ಪ ಜೆಡಿಎಸ್ ಅಭ್ಯರ್ಥಿಯಾಗಿ ಬಿಜೆಪಿ ಅಭ್ಯರ್ಥಿ ಬಿ.ಯೈ.ರಾಘವೇಂದ್ರ ಅವರ ವಿರುದ್ದ ಹಣಾಹಣಿ ಸೇಣಸಾಟ ನಡೆಸಿದರು ಸುಮಾರು ಐವತ್ತು ಸಾವಿರ ಮಗಳಿಂದ ಪರಾಭವ ಗೊಂಡರು 2019 ರ ಚುನಾವಣೆಯಲ್ಲಿ ಸುಮಾರು ಎರಡು ಲಕ್ಷ ಮತಗಳ ಸೋಲು ಕಂಡರು ನಂತರದ ಬೆಳವಣಿಗೆಯಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಮಧುಬಂಗಾರಪ್ಪ ಮಂತ್ರಿಯಾಗಿ 2024 ಲೋಕಸಭಾ ಚುನಾವಣೆಯಲ್ಲಿ ತಮ್ಮ ಸಹೋದರಿ ಗೀತಾ ಶಿವರಾಜ್ ಕುಮಾರ್ ಅವರನ್ನು ಚುನಾವಣೆ ಅಖಾಡಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಇಳಿಸಿದ್ದರು ಆದರೂ ಗೀತಾ ಅವರು ಎರಡು ಲಕ್ಷಗಳ ಮತಗಳಿಂದ ಸೋತರು.2009,2018,2019,2024 ಈ ನಾಲ್ಕು ಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿ ಬಿ.ಯೈ.ರಾಘವೇಂದ್ರ ಗೆಲವು ಸಾಧಿಸಿದ್ದು ಈ ಎಲ್ಲಾ ಚುನಾವಣೆಯಲ್ಲೂ ಬಂಗಾರಪ್ಪ ಹಾಗು ಅವರ ಮಕ್ಕಳೆ ಎದುರಾಳಿಗಳಾಗಿದಿದ್ದು ವಿಶೇಷ.



