ಶ್ರೀನಿವಾಸಪುರ:ಊರು ಬಿಟ್ಟು ಯಾರು ವಲಸೆ ಹೋಗಬೇಡಿ ಇಲ್ಲೆ ಹಳ್ಳಿಯಲ್ಲಿ ಬದುಕು ಕಟ್ಟಿಕೊಳ್ಳಿ ಎಲ್ಲೋ ದೂರದ ನಗರಗಳಿಗೆ ವಲಸೆ ಹೋದರೆ ಅಲ್ಲಿ ಯಾವ ಕೆಲಸ ಮಾಡಲು ಸಾಧ್ಯವಾಗುತ್ತದೆ ಸೆಕ್ಯೂರಿಟಿ ಅಥಾವ ಪಾನಿ ಪೂರಿ ಹಾಕುವಂತ ಕೆಲಸ ಸಿಗುತ್ತದೆ, ಭೂಮಿ ಮೇಲೆ ಯಾರು ಅಥಾವ ಏನು ಶಾಶ್ವತ ಅಲ್ಲ,ಇರುವಷ್ಟು ಕಾಲ ಇಲ್ಲೆ ಪ್ರೀತಿ ವಿಶ್ವಾಸ ಸಹಬಾಳ್ವೆಯಿಂದ ಬದುಕು ಸವಿಸಬಹುದು ಎಲ್ಲವನ್ನು ರಾಜಕೀಕರಣ ಮಾಡುವುದು ಸೂಕ್ತ ಅಲ್ಲ ಎಲ್ಲರೂ ಅಣ್ಣ-ತಮ್ಮಂದಿರಂತೆ ಬಾಳಿ ಮುಂದಿನ ದಿನಗಳಲ್ಲಿ ನಿಮ್ಮ ಜೊತೆಗೆ ಸದಾ ಕಾಲ ಇರುತ್ತೇನೆ ನಿಮ್ಮ ಕಷ್ಟ-ಸುಖಗಳಿಗೆ ಭಾಗಿಯಾಗುತ್ತೇನೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ K. R. Ramesh Kumar ಹೇಳಿದರು. ಅವರು ತಾಲೂಕಿನ ಲಕ್ಷ್ಮೀಸಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ಯಾಗತ್ತೂರು ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡದ ಮೊದಲನೆ ಮಹಡಿ ಉದ್ಘಾಟಿಸಿ ಮಾತನಾಡಿದರು.
ಎಲ್ಲರೂ ನನ್ನವರೇ ಯಾರು ಕೆಟ್ಟವರು ಅಂತ ನಾನು ಎಕ್ಸರೇ ಮಾಡಿ ನೋಡುವ ಅವಶ್ಯಕತೆ ನನಗೆ ಬೇಗಿಲ್ಲ ಎಲ್ಲರೂ ಒಳ್ಳೆಯವರೆ ತಂದೆ-ತಾಯಿ ಬದುಕಿರುವಾಗಲೆ ಮಕ್ಕಳು ಅವರನ್ನು ಚೆನ್ನಾಗಿ ಗಮನಿಸಿಕೊಳ್ಳಿ ಉತ್ತಮವಾಗಿ ಊಟ ತಿಂಡಿ ನೀಡಿ,ಅಪ್ಯಾಯತೆಯಿಂದ ನೋಡಿಕೊಳ್ಳಿ ಅವರ ಕಾಲವಾದ ನಂತರ ಜನರನ್ನು ಕರೆದು ಜಬರ್ ದಸ್ತ್ ಆಗಿ ತಿಥಿ ಊಟ ಹಾಕುವ ಬದಲು ಬದುಕಿದ್ದಾಗಲೇ ಚೆನ್ನಾಗಿ ನೋಡಿಕೊಳ್ಳಿ, ಎಂದು ಮಾರ್ಮಕವಾಗಿ ನುಡಿದ ಅವರು ಕ್ಷೇತ್ರದಲ್ಲಿ ಶಾಶ್ವತ ಕೆಲಸ ಮಾಡಿದಾಗ ನಮ್ಮ ನಂತರವೂ ಜನ ನಮ್ಮನ್ನು ನೆನೆಸಿಕೊಳ್ಳುತ್ತಾರೆ. ನಿವೆಲ್ಲರೂ ಆಶೀರ್ವಾದ ಮಾಡಿ, ಗೌರವಯುತವಾಗಿ ಬದುಕಲು ಅವಕಾಶ ಕೊಡಿ ಕಲ್ಪಿಸಿ ಬಯಲು ಸೀಮೆ ಜಿಲ್ಲೆಗಳ ಅಂತರ್ಜಲವೃದ್ದಿಗಾಗಿ ಆರಂಭಿಸಿರುವಂತ ಕೆ.ಸಿ. ವ್ಯಾಲಿ ಯೋಜನೆ 2ನೆ ಹಂತದ ಶುದ್ದೀಕರಣಕ್ಕೆ ಮುಖ್ಯ ಮಂತ್ರಿಗಳ ಬಳಿ ಮನವಿ ಮಾಡಿದ್ದೆ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿಗಳು ಗೃಹ ಕಚೇರಿಯಲ್ಲಿ 2ನೆ ಹಂತದ ಶುದ್ದೀಕರಣಕ್ಕೆ ಚಾಲನೆ ನಿಡಿದ್ದಾರೆ,ಡಿಸೆಂಬರ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದ್ದು, ಮುಂದಿನ ವರ್ಷದಲ್ಲಿ ನಮ್ಮ ಜಿಲ್ಲೆಗಳ ಕೆರೆಗಳು ಸಂಪೂರ್ಣವಾಗಿ ತುಂಬಲಿದೆ, ಇದರಿಂದಾಗಿ ರೈತರ ಬದುಕು ಹಸನಾಗಲಿದೆ
ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಅಂತರ್ಜಲ ಮಟ್ಟ ಗಣನೀಯವಾಗಿ ಏರಿಕೆಯಾಗಲಿದೆ,ಈ ಭಾಗದ ಕೆರೆಗಳಿಗೆ ನೀರು ಬರುವುದರಿಂದ ರೈತರು ಬೆಳೆಗಳನ್ನು ಬೆಳೆಯುವುದರ ಜೊತೆಗೆ ಹೈನುಗಾರಿಕೆ, ರೇಷ್ಮೆ, ಮೀನು ಕೃಷಿ ಚಟುವಟಿಕೆಗಳಲ್ಲಿ ತೊಡಗಲು ತುಂಬಾ ಸಹಕಾರಿಯಾಗಲಿದೆ ಎಂದರು.
2026ರ ವೇಳೆಗೆ ಎತ್ತಿನಹೊಳೆ ನೀರು
ಬಯಲು ಸೀಮೆಯ ಜಿಲ್ಲೆಗಳ ಅಂತರ್ಜಲ ವೃದ್ದಿಗೆ ನಾನು ಹಿಂದೆ ಅಧಿಕಾರದಲ್ಲಿದ್ದಾಗ ಕೈಗೊಂಡ ಯೋಜನೆಗಳು ಈ ಭಾಗದ ರೈತರ ಜೀವನಮಟ್ಟವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದ್ದು ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳ ಮಹತ್ವದ ಯೋಜನೆಯಾದ ಎತ್ತಿನಹೊಳೆಯ ಕೆಲಸ ಶೇಕಡ 80 ರಷ್ಟು ಮುಗಿದಿದೆ, ಉಳಿದ 20 ರಷ್ಟು ಬಾಕಿ ಇದ್ದು, ನೀರಿನ ಶೇಖರಣಾ ಘಟಕಕ್ಕೆ 4 ಸಾವಿರ ಎಕರೆ ಭೂಮಿ ಬೇಕಾಗಿರುವುದರಿಂದ ಸ್ವಲ್ಪ ತಾಂತ್ರಿಕ ಸಮಸ್ಯೆ ಉಂಟಾಗಿದ್ದು, ಇದೂ ಸಹ ಇತ್ಯರ್ಥವಾಗು ಹಂತದಲ್ಲಿದೆ,2026 ರಲ್ಲಿ ನೂರಕ್ಕೆ ನೂರ ರಷ್ಟು ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀರು ಬರಲಿದೆ ಎಂದರು.
ಹಾಲು ಒಕ್ಕೂಟದ ನಿರ್ದೇಶಕ ಕಲ್ಲೂರು ಮಂಜು ಮಾತನಾಡಿ ರಾಜಕೀಯ ಚುನಾವಣೆಗಷ್ಟೆ ಮೀಸಲಿಡಿ ಅದರಲ್ಲೂ ಸಹಕಾರ ಸಂಘಗಳ ಹಾಲಿನ ವಿಚಾರದಲ್ಲಿ ರಾಜಕೀಯ ಮಾಡಬಾರದು, ಹಾಲು ಅಮೃತಕ್ಕೆ ಸಮಾನ, ನನಗೆ ಎಲ್ಲರೂ ಪಕ್ಷ ಬೇದ ಮರೆತು ನನಗೆ ಆಶೀರ್ವಾದ ಮಾಡಿದ್ದಾರೆ,ಹಾಲಿಗೆ ಜಾತಿ ಬೇದ ಏನೂ ಇಲ್ಲ, ಪ್ರತಿಯೊಬ್ಬರೂ ಹಾಲನ್ನು ಸರ್ಕಾರಿ ಡೈರಿಗೆ ಹಾಕಿ, ಒಕ್ಕೂಟದಿಂದ ಬರುವ ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳಿ ಎಂದರು. ಮತ್ತೊಬ್ಬ ನಿರ್ದೇಶಕ ಹನುಮೇಶ್ ಮಾತನಾಡಿ ಹಾಲು ಉತ್ಪಾದಕರು ಖಾಸಗಿ ಡೈರಿಯ ವ್ಯಾಮೋಹ ಬಿಡಬೇಕು ಅಲ್ಲಿ ಯಾವುದೇ ಸೌಲಭ್ಯಗಳು ಸಿಗುವುದಿಲ್ಲ, ಉತ್ತಮ ಹಾಲು ಹಾಕುವುದರ ಮೂಲಕ 15 ದಿನಗಳೊಳಗೆ ನಿಮ್ಮ ಖಾತೆಗೆ ಹಣ ಪಡೆದುಕೊಳ್ಳಿ ಹಾಲಿನ ವಿಚಾರವಾಗಿ ರಾಜಕೀಯ ಮಾಡಬೇಡಿ ನಿಮ್ಮೂರಿನ ನಿಮ್ಮದೆ ಡೈರಿಯನ್ನು ಅಭಿವೃದ್ಧಿ ಮಾಡಿ ನೀವು ವೈಯುಕ್ತಿಕವಾಗಿ ಅಭಿವೃದ್ಧಿಯಾಗುವಂತೆ ಸಲಹೆ ಇತ್ತರು.
ಶ್ಯಾಗತ್ತೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಸ್.ವಿ. ಸುಧಾಕರ್ ಮಾತನಾಡಿ,ಆರಂಭದಲ್ಲಿ ಶ್ಯಾಗತ್ತೂರು ಗ್ರಾಮದ ಹಾಲು ಉತಾದಕರು ಲಕ್ಷ್ಮೀಸಾಗರದ ಡೈರಿಗೆ ಹಾಲು ಹಾಕುತ್ತಿದ್ದು,ನಂತರದಲ್ಲಿ ಇಲ್ಲೆ ಹಾಲು ಡೈರಿ ಮಾಡಲಾಯಿತು ಮೊದಮೊದಲು ಕೇವಲ 40 ಲೀಟರ್ ಹಾಲನ್ನು ಡೈರಿಗೆ ಹಾಕಲಾಗುತ್ತಿತ್ತು,ಈಗ ದಿನಕ್ಕೆ 8-10 ಕ್ಯಾನು ಹಾಲು ರೈತರಿಂದ ಡೈರಿಗೆ ಬರುತ್ತಿದೆ ಆದಾಯ ಹೆಚ್ಚಿದೆ ಈಗ್ಗೆ ಹತ್ತು ವರ್ಷಗಳ ಹಿಂದೆ ಡೈರಿಗೆ ಸ್ವಂತ ಕಟ್ಟಡ ನಿರ್ಮಾಣ ಮಾಡಲಾಯಿತು ಈಗ ಮೊದಲನೆ ಅಂತಸ್ತು 14 ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಿಸಿದ್ದು, ಇದರಲ್ಲಿ 8.5 ಲಕ್ಷ ರೂಗಳನ್ನು ಕೋಮುಲ್, ಧರ್ಮಸ್ಥಳ, ಮತ್ತು ಇತರೆ ಕಡೆಗಳಿಂದ ಕ್ರೂಡಿಕರಿಸಲಾಗಿದೆ ಇದಕ್ಕೆಲ್ಲ ರಮೇಶ್ ಕುಮಾರ್ ಅವರೆ ಪ್ರೇರಣೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತ್ ಮಾಜಿ ಸದಸ್ಯ ಮ್ಯಾಕಲ ನಾರಾಯಣಸ್ವಾಮಿ, ಹಾಲು ಒಕ್ಕೂಟದ ತಾಂತ್ರಿಕ ವ್ಯವಸ್ಥಾಪಕ ಡಾ: ಎಂ.ಪಿ. ಚೇತನ್,ವ್ಯವಸ್ಥಾಪಕ ಡಿ.ಎಂ. ಮುನಿರಾಜು,ಧರ್ಮಸ್ಥಳ ಯೋಜನೆಯ ಗ್ರಾಮೀಣ ಅಭಿವೃದ್ದಿ ಅಧಿಕಾರಿ ಶಿವಾನಂದ ಆಚಾರ್ಯ,ವಿಸ್ತೀರಣಾಧಿಕಾರಿ ವಿನಾಯಕ್ ಲಕ್ಷ್ಮೀಸಾಗರ ಗ್ರಾ.ಪಂ ಉಪಾಧ್ಯಕ್ಷ ಹರಿಕೃಷ್ಣ, ಶ್ಯಾಗತ್ತೂರು ಗ್ರಾಮದ ಸದಸ್ಯ ಎಸ್.ವಿ. ವಿವೇಕಾನಂದ, ಸುಬ್ಬಮ್ಮ, ನಾರಾಯಣಸ್ವಾಮಿ, ಮಾಜಿ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಮುಖಂಡರಾದ ಮುನಿಸ್ವಾಮಿ, ಅಶೋಕ್, ಬೀರಗಾನಹಳ್ಳೀ ಆದಿನಾರಾಯಣ್, ಶ್ರೀರಾಮಪ್ಪ, ಹಾಗೂ ಹಾಲು ಡೈರಿ ಕಾರ್ಯಕಾರಿ ಮಂಡಳಿ ಸದಸ್ಯರೂ, ಸಿಬ್ಬಂಧಿ ವರ್ಗ, ಮುಂತಾದವರು ಇದ್ದರು.
Trending
- ಶ್ರೀನಿವಾಸಪುರ:ಕಸ ಹಾಕುವ ವಿಚಾರಕ್ಕೆ ಜಗಳ ಒಬ್ಬನ ಕೊಲೆ!
- ಶ್ರೀನಿವಾಸಪುರ:ವೇಶ್ಯಾವಾಟಿಕೆ ದಂಧೆ ಪೊಲೀಸ್ ದಾಳಿ, ಕಿಂಗ್ ಪಿನ್ ಮಹಿಳೆ ಬಂಧನ!
- ಶ್ರೀನಿವಾಸಪುರ:ವಾಹನ ಡಿಕ್ಕಿಯಾಗಿ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಪೇದೆ ನಿಧನ!
- ಶ್ರೀನಿವಾಸಪುರ:ಕರ್ನಾಟಕ ಬ್ಯಾಂಕ್ ಉದ್ಯೋಗಿ ಅಪಘಾತದಲ್ಲಿ ಸಾವು!
- ಲಂಚ ಪಡೆಯುತ್ತಿದ್ದ ಬಿಜೆಪಿ ಶಾಸಕ ಲೋಕಾಯುಕ್ತ ಬಲೆಗೆ!
- ಯಾವ ಐಟಿ-ಬಿಟಿ ಗೂ ಕಡಿಮೆ ಇಲ್ಲ,Dairy Farm ಆದಾಯ ಲಕ್ಷಗಟ್ಟಲೆ!
- ಬೆಂಗಳೂರಿನಲ್ಲಿ ಕುಬೇರರು ವಾಸಿಸುವ“ಬಿಲಿಯನೇರ್ಸ್ ಸ್ಟ್ರೀಟ್”ಎಲ್ಲಿದೆ?
- ಶ್ರೀನಿವಾಸಪುರ:ನೌಕರರ ಸಂಘದ ಹಾಲಿ-ಮಾಜಿ ಅಧ್ಯಕ್ಷರ ನಡುವೆ ಬಿದಿ ಜಗಳ!
Saturday, March 7



