ಶ್ರೀನಿವಾಸಪುರ: ಗ್ರಾಮೀಣ ಜನರ ಹಾಗೂ ರೈತರ ಅನುಕೂಲಕ್ಕಾಗಿ ಈ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಸರ್ಕಾರ ಜಾರಿಗೆ ತಂದಿದ್ದು ಇದರ ಉಪಯೋಗವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಕೋಲಾರ ಜಿಲ್ಲಾಧಿಕಾರಿ ವೆಂಕಟರಾಜು ಹೇಳಿದರು ಅವರು ತಾಲೂಕು ಕಸಬಾ ಹೋಬಳಿ ಜೆ.ತಿಮ್ಮಸಂದ್ರ ಪಂಚಾಯಿತಿ ಅಲವಾಟ ಗ್ರಾಮದಲ್ಲಿ ಆಯೋಜಿಸಿದ್ದ ಜಿಲ್ಲಾಧಿಕಾರಿ ನಡೆ ಹಳ್ಳಿಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಜನರ ಸಣ್ಣಪುಟ್ಟ ಸಮಸ್ಯೆಗಳಿಗೆ ಜಿಲ್ಲಾಧಿಕಾರಿ ಕಚೇರಿ, ತಹಸೀಲ್ದಾರ್ ಕಚೇರಿಗೆ ಅಲೆಯುವ ಪರಿಸ್ಥಿತಿಯನ್ನು ನಿವಾರಿಸಲು ರಾಜ್ಯ ಸರ್ಕಾರ ಮಹತ್ವಾಕಾಂಕ್ಷಿಯಾಗಿ ಜಿಲ್ಲಾಧಿಕಾರಿಗಳ ನಡೆ-ಹಳ್ಳಿ ಕಡೆ ಎಂಬ ಕಾರ್ಯಕ್ರಮವನ್ನು ರೂಪಿಸಿದ್ದು ಪ್ರತಿ ತಿಂಗಳ ಮೂರನೇ ಶನಿವಾರ ಒಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮಕ್ಕೆ ಭೇಟಿ ನೀಡಿಕಾರ್ಯಕ್ರಮ ರೂಪಿಸಿ ಸ್ಥಳದಲ್ಲಿಯೆ ಪರಿಹಾರ ಸೂಚಿಸಲಾಗುತ್ತಿದೆ ಎಂದರು.
ಸಾರ್ವಜನಿಕರು ಯಾವುದೇ ಇಲಾಖೆಗೆ ಸಂಬಂಧಿಸಿದಂತೆ ಸಮಸ್ಯೆಗಳು ಇದ್ದಲ್ಲಿ ಈ ಕಾರ್ಯಕ್ರಮದಲ್ಲಿ ಅರ್ಜಿಗಳನ್ನು ಕೊಡಬಹುದು ಸಾದ್ಯವಾದರೆ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಇತ್ಯರ್ಥ ಮಾಡಲಾಗುವುದು ಸಾದ್ಯವಾಗದಿದ್ದರೆ ಆದ್ಯತೆ ಮೇರೆಗೆ ಸಮಸ್ಯೆಗಳನ್ನು ಬಗೆ ಹರಿಸುವುದಾಗಿ ಭರವಸೆ ನೀಡಿದರು.
ತಹಶೀಲ್ದಾರ್ ಶರೀನ್ ತಾಜ್ ಮಾತನಾಡಿ, ಗ್ರಾಮ ವಾಸ್ತವ್ಯಕ್ಕೆ ಆಯ್ಕೆ ಮಾಡಿಕೊಂಡ ಆಲವಟ್ಟ ಗ್ರಾಮದಲ್ಲಿ ಸುಮಾರು 1075 ಜನ ಸಂಖ್ಯೆಯನ್ನು ಒಳಪಟ್ಟಿದ್ದು, 231 ಮನೆಗಳಿವೆ.ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಗುರುತಿನ ಚೀಟಿಗೆ ಆಧಾರ್ ಜೋಡಣೆ ಕಾರ್ಯ ಶೇ.99 ರಷ್ಟು ಗುರಿ ಸಾಧಿಸಲಾಗಿದೆ.ಗ್ರಾಮಕ್ಕೆ ಮಂಜೂರಾಗಿರುವ 5 ಸ್ಮಶಾನಗಳಲ್ಲಿ 1 ಸ್ಮಶಾನವು ಒತ್ತುವರಿಗೆ ಒಳಗಾಗಿದ್ದು, ಪ್ರಸ್ತುತ ಒತ್ತುವರಿಯನ್ನು ತೆರವುಗೊಳಿಸಿ ಆದೇಶಿಸಿರುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಕೆಲ ಪಲಾನುಭವಿಗಳಿಗೆ ವೃದ್ಯಾಪವೇತನ ಹಾಗೂ ವಿಧವಾ ವೇತನ ವಿವಿದ ಯೊಜನೆಗಳ ಆದೇಶ ಪತ್ರಗಳನ್ನು ವಿತರಣೆ ಮಾಡಿದರು.
ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಅಂಗವಾಗಿ ಗ್ರಾಮದಲ್ಲಿ ಉಚಿತ ಆರೋಗ್ಯ ಶಿಬಿರ,ಉಚಿತ ಕೋವಿಡ್ ಲಸಿಕೆ ಅಭಿಯಾನ ಉಚಿತ ಜಾನುವಾರು ಶಿಬಿರ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದಲ್ಲಿ ಪ್ರೊಬೆಷನರಿ ಐ.ಎ.ಎಸ್ ಅಧಿಕಾರಿ ವಿನಾಯಕ್,ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ಪ,ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಡಾ.ಎಂ.ಶ್ರೀನಿವಾಸನ್, ಕೃಷಿ ಇಲಾಖೆಯ ರಘು, ತಾಲ್ಲೂಕು ಆರೋಗ್ಯಾಧಿಕಾರಿ ಡಾ|| ವಿಶ್ವನಾಥ್ರೆಡ್ಡಿ, ಜೆ.ತಿಮ್ಮಸಂದ್ರ ಪಂಚಾಯಿತಿ ಅಧ್ಯಕ್ಷೆ ಕಲ್ಲೂರುಮಂಜುಳಾ, ಉಪಾಧ್ಯಕ್ಷ ನಾಗೇಶ್ ಪಂಚಾಯಿತಿ ಸದಸ್ಯೆ ಭಾರತಮ್ಮ ಅಭಿವೃದ್ಧಿ ಅಧಿಕಾರಿ ವಿನೋದಾರೆಡ್ದಿ,ಕಂದಾಯ ಇಲಾಖೆ ನೀರಿಕ್ಷಕ ಮುನಿರೆಡ್ದಿ ಜೆ.ತಿಮ್ಮಸಂದ್ರ ಗ್ರಾಮ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಮುದ್ದಣ್ಣ, ರೇಷ್ಮೆ ಇಲಾಖೆಯ ಉಪ ನಿರ್ದೇಶಕ ಕಾಳಪ್ಪ, ಸಹಾಯಕ ನಿರ್ದೇಶಕ ವಿ.ಕೃಷ್ಣಪ್ಪ,ಲೋಕೋಪಯೋಗಿ ಇಲಾಖೆಯ ಎಂ.ನಾರಾಯಣಸ್ವಾಮಿ ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Sunday, April 27