ನ್ಯೂಜ್ ಡೆಸ್ಕ್: ಇಂಜಿನಿಯರ್ ಅಥವಾ ಡಾಕ್ಟರ್ ಆಗುವ ಕನಸು ಕಾಣುವ ಇಂದಿನ ಯುವ ಸಮುದಾಯಕ್ಕೆ ಸವಾಲು ಎನ್ನುವಂತೆ ಈ ಯುವಕ ತನ್ನ 15ನೇ ವಯಸ್ಸಿಗೆ ಹೈನುಗಾರಿಕೆ ಆರಂಭಿಸಿದ್ದಾನೆ ಈಗ ಅವನಿಗೆ 18 ವರ್ಷ ವಯಸ್ಸು ಅಂದು ತಾನು ಆಯ್ಕೆ ಮಾಡಿಕೊಂಡಿದ್ದ ಹೈನುಗಾರಿಕೆ ವ್ಯವಹಾರ ಇಂದು ತಿಂಗಳಿಗೆ 5 ರಿಂದ 6 ಲಕ್ಷ ರೂಪಾಯಿ ದುಡಿಯುತ್ತಿದೆ.ಅದನ್ನು ಸಕಾರ ಗೊಳಿಸಿ ಯಶಸ್ವಿಯಾದ ಯುವಕ ಪಂಜಾಬ್ನ ಸೋಹಲ್ಪ್ರೀತ್ ಸಿಂಗ್ ಸಿಧು.
ಇಂದಿನ ಯುವ ಸಮುದಾಯ what next ಮುಂದೇನು ಎಂಬ ಪ್ರಶ್ನೆಯೊಂದಿಗೆ ಹಲವಾರು ಕನಸುಗಳನ್ನು ಕಟ್ಟಿಕೊಳ್ಳುತ್ತಾರೆ. ಇನ್ನೂ ಕೆಲವರು ವಿದೇಶದಲ್ಲಿ ವ್ಯಾಸಾಂಗ ಮಾಡಿ ಅಲ್ಲೆ ಉದ್ಯೋಗ ಆರಸಿಕೊಳ್ಳುವ ಆಲೋಚನೆಯಲ್ಲಿ ಇರುತ್ತಾರೆ
ಪಂಜಾಬ್ನ ಈ ಯುವಕ ಯಾವ ಐಟಿ ಬಿಟಿಗೂ ಕಡಿಮೆ ಇಲ್ಲದಂತೆ ಹಸು ಹಾಗು ಎಮ್ಮೆ ಸಾಕಾಣಿಕೆಯಿಂದ ಪ್ರತಿ ತಿಂಗಳು 5 ರಿಂದ 6 ಲಕ್ಷ ರೂಪಾಯಿಗಳನ್ನು ಗಳಿಸುತ್ತಿದ್ದಾನೆ. ತನ್ನ 15 ನೇ ವಯಸ್ಸಲ್ಲಿ ಓಂದು ಜಾನವಾರದೊಂದಿಗೆ ಡೈರಿ ಫಾರ್ಮ್ ಆರಂಭಿಸಿದ ಸಿದ್ದು ಅದರಿಂದ ಬಂದ ಪ್ರತಿ ರೂಪಾಯಿಯನ್ನು ಅದರಲ್ಲೆ ವಿನಿಯೋಗಿಸುತ್ತ ಪಂಜಾಬ್ನ ಗ್ರಾಮೀಣ ಪ್ರದೇಶದ ದೊಡ್ಡ ಹೈನೋದ್ಯಮಿಯಾಗುವ ಕನಸು ಕೊಟ್ಟಿಕೊಂಡು ಸಾಕಾರ ಗೊಳಿಸಿ ಇಂದು ತಿಂಗಳಿಗೆ 6 ಲಕ್ಷ ಆದಾಯ ಗಳಿಸುತ್ತಿದ್ದಾನೆ.

ಪಂಜಾಬ್ ರಾಜ್ಯದ ಬರ್ನಲಾದ ಸೆಹ್ನಾ ಗ್ರಾಮದ ಬಲ್ಬೀರ್ ಸಿಂಗ್ ಸಿಧು ಅವರ ಏಕೈಕ ಪುತ್ರ ಸೋಹಲ್ಪ್ರೀತ್ ಮುಕ್ತ ಶಾಲೆಯಲ್ಲಿ(open school) 12 ನೇ ತರಗತಿವರಿಗೂ ಅಭ್ಯಾಸ ಮಾಡಿ ಉತ್ತೀರ್ಣರಾಗಿದ್ದಾನೆ.ಮುಂದೆ ಪಶು ವೈದ್ಯಕೀಯ ಕೋರ್ಸ್ ಓದಲು ನಿರ್ಧರಿಸಿರುವ ಸೋಹಲ್ಪ್ರೀತ್ ಆರಂಭದಲ್ಲಿ ಒಂದು ಹಸುವಿನೊಂದಿಗೆ ಸ್ವಂತವಾಗಿ ಹೈನೋದ್ಯಮ ಮಾಡಲು ಮನೆಯವರ ಮನವೊಲಿಸಿದ್ದಾನೆ ಆ ಸಮಯಕ್ಕೆ ಅವರ ಮನೆಯಲ್ಲಿ ಐದು ಎಮ್ಮೆಗಳೊಂದಿಗೆ ಚಿಕ್ಕದಾದ ಡೈರಿ ಫಾರ್ಮ್ ಇತ್ತು ಸೋಹಲ್ ಮನೆಯವರಿಂದ 1.20 ಲಕ್ಷ ರೂಪಾಯಿ ಪಡೆದು ಮೊದಲ ಎಮ್ಮೆ ಖರೀದಿ ಮಾಡಿದ್ದಾನೆ ಅದರ ನಿರ್ವಹಣೆ ತಾನೆ ಮಾಡುವ ಮೂಲಕ ಅದರಿಂದ ಗಳಿಸಿದ ಮೊದಲ ವರ್ಷದ ಹಣವನ್ನು ಮತ್ತೆ ಅದರಲ್ಲೇ ಹೂಡಿಕೆ ಮಾಡುವ ಮೂಲಕ ಮತ್ತಷ್ಟು ಜಾನುವಾರುಗಳನ್ನು ಖರೀದಿ ಮಾಡಿದ್ದಾನೆ.
ನನ್ನ ಕುಟುಂಬದವರು ಮನೆ ಖರ್ಚಿಗಾಗಿ ಹಸುಗಳನ್ನು ಸಾಕುತ್ತಿದ್ದರು ಇದರಿಂದ ನನಗೂ ಬಾಲ್ಯದಿಂದಲೂ ಡೈರಿ ಫಾರ್ಮಿಂಗ್ನಲ್ಲಿ ಆಸಕ್ತಿ ಹೊಂದಿದ್ದೆ, ಈಗ ಮೂರು ವರ್ಷಗಳ ನಂತರ ನಮ್ಮ ಬಳಿ 55 ಎಮ್ಮೆಗಳು, 15 ಹಸುಗಳು, 50 ಸಣ್ಣ ಕರುಗಳು ಇವೆ. ಒಟ್ಟು 120 ಜಾನುವಾರಗಳು ನಮ್ಮ ಬಳಿ ಇವೆ. ಅವುಗಳಲ್ಲಿ 53 ಮುರ್ರಾ ಎಮ್ಮೆಗಳು, ಪಂಜಾಬ್ ಪ್ರಾಂತ್ಯದ ಎರಡು ನೀಲಿ ರವಿ ಎಮ್ಮೆಗಳು, 12 ಹೋಲ್ಸ್ಟೈನ್ ಫ್ರೀಸಿಯನ್ (HF) ಹಸುಗಳು, ಎರಡು ಜೆರ್ಸಿ ಹಸುಗಳು ಮತ್ತು ಒಂದು ಸಹಿವಾಲ್ ಸೇರಿ ನಾನಾ ರೀತಿಯ ಅಪರೂಪದ ದೇಶೀ ತಳಿಗಳು ಇದ್ದು ಇವೆಲ್ಲವೂ ಹಾಲು ನೀಡುತ್ತಿದ್ದು ಮುಂದಿನ ವರ್ಷ ಇನ್ನಷ್ಟು ಎಮ್ಮೆಗಳು ಕರು ಹಾಕುವ ನಿರೀಕ್ಷೆಯಿದೆ ಮತ್ತು ಸೋಹಲ್ಪ್ರೀತ್ ಅಂದಾಜಿನ ಪ್ರಕಾರ ಆ ಹೊತ್ತಿಗೆ ಸುಮಾರು 100 ಪ್ರಾಣಿಗಳು ಹಾಲು ನೀಡಲು ಶುರು ಮಾಡುತ್ತವೆ. 500 ರಿಂದ 550 ಎಮ್ಮೆಗಳನ್ನು ಸಾಕುವುದು ನನ್ನ ಕನಸು ಎಂದು ಹೇಳಿಕೊಂಡಿದ್ದಾನೆ.
ಪ್ರಸ್ತುತ ಯಾವುದೇ ಸಮಯದಲ್ಲಿ 50ರಿಂದ 55 ಎಮ್ಮೆಗಳು ಹಾಲು ಕರೆಯುವುದಕ್ಕೆ ಇರುತ್ತವೆ. 15 ರಿಂದ 20 ಎಮ್ಮೆಗಳು ಗರ್ಭ ಧರಿಸಿವೆ. ಜೊತೆಗೆ ಸೋಹಲ್ಪ್ರೀತ್ ಶೀಘ್ರದಲ್ಲೇ ತಮ್ಮ ಗಳಿಕೆಯಿಂದ ಇನ್ನೂ 30 ಎಮ್ಮೆಗಳನ್ನು ಖರೀದಿಸಲು ಯೋಜನೆ ರೂಪಿಸಿಕೊಂಡಿದ್ದು ತಮ್ಮ ಮಕ್ಕಳನ್ನು ವಿದೇಶಕ್ಕೆ ಕಳುಹಿಸಲು ಬಯಸುವ ಅನೇಕ ಕುಟುಂಬಗಳ ಪೋಷಕರಿಗಿಂತ ಭಿನ್ನವಾಗಿ ಆಲೋಚಿಸಿ ಯಶಸ್ಸು ಕಂಡಿರುವ ಸೋಹಲ್ಪ್ರೀತ್ ತಮ್ಮ ನಿಲುವನ್ನು ನನ್ನ ಹೆತ್ತವರಿಗೆ ಮೊದಲೇ ಹೇಳಿದ್ದನಂತೆ ನನ್ನನ್ನು ವಿದೇಶಕ್ಕೆ ಕಳುಹಿಸಲು ಹಣ ಖರ್ಚು ಮಾಡಬೇಡಿ. ನನ್ನ ವ್ಯವಹಾರದಲ್ಲಿ ಹೂಡಿಕೆ ಮಾಡುವ ಮೂಲಕ ಇಲ್ಲಿ ನನಗೆ ಬೆಂಬಲ ನೀಡಿ ಎಂದಿದ್ದನಂತೆ.
ಆತನ ಮಾತನ್ನು ನಾವು ನಂಬಲಿಲ್ಲ, ಆದರೆ ಆತನ ಆಸಕ್ತಿ ನಮಗೆ ಅವನೇನು ಎಂಬುದನ್ನು ಮನವರಿಕೆ ಮಾಡಿತು ಎಂದು ಆತನ ಪೋಷಕರು ಹೇಳುತ್ತಾರೆ.ಪ್ರಸ್ತುತ ಇವರ ಫಾರ್ಮ್ನಲ್ಲಿ ದಿನಕ್ಕೆ 650ರಿಂದ 700 ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಇದನ್ನು ಅವರು ಬರ್ನಲ್ನಲ್ಲಿರುವ ಖಾಸಗಿ ಸಂಸ್ಥೆಗೆ ಮಾರುತ್ತಿದ್ದಾರೆ. ಎಮ್ಮೆ ಹಾಲನ್ನು ಲೀಟರ್ಗೆ 65ರಿಂದ 70 ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಹಾಗೂ ಹಸುವಿನ ಹಾಲಿಗೆ 28 ರಿಂದ 42 ರೂಪಾಯಿ ಸಿಗುತ್ತಿದೆ. ಬರೀ ಎಮ್ಮೆಗಳ ಹಾಲೇ ದಿನಕ್ಕೆ 400 ಲೀಟರ್ ಸಿಗುತ್ತದೆ. ಹೀಗಾಗಿ ತಿಂಗಳಿಗೆ 10 ಲಕ್ಷ ಮೌಲ್ಯದ ಹಾಲು ಮಾರಾಟವಾಗುತ್ತದೆ. ಅದರಲ್ಲಿ ಶೇಕಡಾ 40 ವೆಚ್ಚವಾಗಿದ್ದರೆ ಶೇಕಡಾ 60ರಷ್ಟು ಆದಾಯ ಬರುತ್ತದೆ ಎನ್ನುತ್ತಾರೆ.



