ನ್ಯೂಜ್ ಡೆಸ್ಕ್:ಬಳ್ಳಾರಿ ಈ ಹಿಂದೆ ಗಣಿ ದೂಳಿನಿಂದಲೇ ಸದಾ ಸುದ್ದಿಯಲ್ಲಿತ್ತು ಈಗ ಬಳ್ಳಾರಿ ರಾಜಕೀಯ ಪಾರುಪತ್ಯಕ್ಕಾಗಿ ರಕ್ತ-ಸಿಕ್ತ ಕದನ ಸಾಕ್ಷಿಯಾಗಿದೆ.
ಹೊಸ ವರ್ಷದ ದಿನವೇ ಪಿಸ್ತೂಲ್ ಸದ್ದಿನ ಶಬ್ದಕ್ಕೆ ಗಣಿ ನಾಡು ಬಳ್ಳಾರಿ ನಡುಗಿ ಹೋಗಿದೆ. ಬಳ್ಳಾರಿ ನಗರದಲ್ಲಿ ಇರುವ ಗಂಗಾವತಿ ಶಾಸಕ ಹಾಗು ಮಾಜಿ ಮಂತ್ರಿ ಜನಾರ್ದನ ರೆಡ್ಡಿ ಮನೆ ಬಳಿ ವಾಲ್ಮೀಕಿ ಪುತ್ಥಳಿ ಅನಾವರಣ ಸಂಬಂದಿತ ಕಾರ್ಯಕ್ರಮದ ಬ್ಯಾನರ್ ಕಟ್ಟಿದ ವಿಚಾರವನ್ನು ಮುಂದಿಟ್ಟುಕೊಂಡು ಮಾಜಿ ಮಂತ್ರಿ ಜನಾರ್ದನ ರೆಡ್ಡಿ ಹಾಗೂ ಬಳ್ಳಾರಿ ನಗರದ ಶಾಸಕ ಭರತ್ ರೆಡ್ಡಿ ಬೆಂಬಲಿಗರ ನಡುವೆ ಘರ್ಷಣೆ ನಡೆದಿದೆ. ಢಂ ಢಂ ಎಂದು ಗಾಳಿಯಲ್ಲಿ ಸುಮಾರು ಬಾರಿ ಫೈರಿಂಗ್ ಮಾಡಲಾಗಿದ್ದು ಕಲ್ಲು ತೂರಾಟ, ಖಾರದ ಪುಡಿ ಎರೆಚಾಟ, ದೊಣ್ಣೆಗಳಿಂದ ಪರಸ್ಪರ ಬಡಿದಾಡಿಕೊಂಡಿದ್ದಾರೆ ಎನ್ನುವುದು ಜಗಜಾಹಿರವಾಗಿದೆ.
ಜನವರಿ 01 ರಂದು ರಾತ್ರಿ ಬಳ್ಳಾರಿಯ ಪರಿಸ್ಥಿತಿ ಅದೆಷ್ಟರ ಮಟ್ಟಿಗೆ ಉದ್ವಿಗ್ನಗೊಂಡಿತ್ತು ಅಂದರೆ ಅಪ್ಪಟ ತೆಲಗಿನ ರಾಯಮಸೀಮೆ ಫ್ಯಾಕ್ಷನ್ ಸಿನಿಮಾಗಳ ಶೈಲಿಯಲ್ಲಿ ಫೈಟಿಂಗ್ ಮತ್ತು ಫೈರಿಂಗ್ ಆಗಿದ್ದು ಗಲಭೆಯಲ್ಲಿ ಅಮಾಯಕನೊರ್ವ ಮೃತಪಟ್ಟಿದ್ದಾನೆ, ಆರಂಭದಲ್ಲಿ ಒಂದು ಬುಲೆಟ್ ಪತ್ತೆಯಾಗಿದ್ದು, ಮಾಜಿ ಮಂತ್ರಿ ಜನಾರ್ದನ ರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆಯಾಗಿದೆ ಎನ್ನಲಾಗಿದೆ.
ರೆಡ್ಡಿ ಬಂದ ಅಂತ ಸಿಗ್ನಲ್ ಕೊಟ್ಟು ಫೈರ್ ಮಾಡಿದ್ದಾರೆ!
ಮಾಜಿ ಮಂತ್ರಿ ಜನಾರ್ದನ ರೆಡ್ಡಿ ಹೇಳೋ ಪ್ರಕಾರ ಇದೊಂದು ಪಕ್ಕಾ ಪ್ರೀಪ್ಲಾನ್ಡ್ ಅಟ್ಯಾಕ್. ನನ್ನ ಕಾರು ಬಂದು ನಿಲ್ಲುತ್ತಿದ್ದಂತೆ, ಅಲ್ಲಿ ನಿಂತಿದ್ದವರು ರೆಡ್ಡಿ ಬಂದ ಅಂತ ಜೋರಾಗಿ ಕೂಗಿದರು ಇದು ಫೈರಿಂಗ್ ಮಾಡೋಕೆ ಕೊಟ್ಟ ಮೆಸೇಜ್ ಆಗಿದ್ದು ನಾನು ಕಾರಿನಿಂದ ಕೆಳಗೆ ಇಳಿಯುತ್ತಿದ್ದಂತೆ ಗುಂಡು ಹಾರಿಸಿದ್ರು. ನನ್ನನ್ನೇ ಟಾರ್ಗೆಟ್ ಮಾಡಿ ಮುಗಿಸೋಕೆ ಈ ಪ್ಲಾನ್ ನಡದಿತ್ತು ಅಂತ ರೆಡ್ಡಿ ಆತಂಕದಿಂದ ಹೇಳುತ್ತಾರೆ.
ಹೈಕೋರ್ಟ್ ಜಡ್ಜ್ ಅಥವಾ ಸಿಬಿಐ ತನಿಖೆ ಆಗಲಿ!
ಇದು ಸಣ್ಣ ಕೇಸ್ ಅಲ್ಲ, ಇದರ ಹಿಂದೆ ದೊಡ್ಡ ಷಡ್ಯಂತ್ರ ಇದೆ. ಸತ್ಯ ಹೊರಗೆ ಬರಬೇಕು ಅಂದ್ರೆ ಒಂದು ಹೈಕೋರ್ಟ್ ಜಡ್ಜ್ ನೇತೃತ್ವದಲ್ಲಿ ತನಿಖೆ ಆಗಲಿ, ಇಲ್ಲಾಂದ್ರೆ ಕೇಸ್ ಅನ್ನು ಸಿಬಿಐ (CBI) ಗೆ ಕೊಡಿ” ಅಂತ ಜನಾರ್ದನ ರೆಡ್ಡಿ ಸರ್ಕಾರವನ್ನ ಒತ್ತಾಯ ಮಾಡಿದ್ದಾರೆ.ಅವರೆ ಖುದ್ದಾಗಿ ಹೋಗಿ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ,ನ್ಯಾಯ ಸಿಗೋವರೆಗೂ ನಾನು ಹಿಂದೆ ಸರಿಯಲ್ಲ ಎಂದು ಖಡಾ ಖಂಡಿತವಾಗಿ ಹೇಳಿದ್ದಾರೆ.
ಕನ್ನಡ ಮಾಧ್ಯಗಳಿಗಿಂತಲೂ ಹೆಚ್ಚಾಗಿ ತೆಲಗು ಮಾಧ್ಯಮಗಳು ಬಳ್ಳಾರಿ ರೆಡ್ಡಿಗಳ ಕದನವನ್ನು ಇದು ಎರಡು ರೆಡ್ಡಿ ಕುಟುಂಬಗಳ ಫ್ಯಾಕ್ಷನ್ ರಾಜಕೀಯದ ಕಥೆ ಎಂದು ತಮ್ಮದೇ ಶೈಲಿಯಲ್ಲಿ ಫ್ಯಾಕ್ಷನ್ ರಾಜಕಾರಣಕ್ಕೆ ಹೋಲಿಸಿ ಪುಂಕಾನು ಪುಂಕವಾಗಿ ಬಿಂಬಿಸಲಾಗುತ್ತಿದೆ.
ಯಾರು ಈ ನಾ.ರ.ಭರತ್ ರೆಡ್ಡಿ?
ಬಳ್ಳಾರಿ ಜನಾರ್ದನರೆಡ್ಡಿ ಗಣಿರೆಡ್ಡಿ ಎಂದು ಕರ್ನಾಟಕದ ಬಹುತೇಕರಿಗೆ ಚಿರಪರಿಚಿತ ಹೆಸರು,ಆದರೆ ನಾ.ರ.ಭರತ್ ರೆಡ್ಡಿ ಕುರಿತು ಬಹುತೇಕರಿಗೆ ತಿಳಿಯದ ಹೆಸರು 1990 ರಲ್ಲಿ ಹುಟ್ಟಿದ ಭರತ್ ರೆಡ್ಡಿ ಈಗಿನ್ನೂ 35 ವರ್ಷ ಬಿಸಿ ರಕ್ತದ ಯುವರಾಜಕಾರಣಿ ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ಬಳ್ಳಾರಿ ಸಹಕಾರಿ ಬ್ಯಾಂಕ್ ನಿರ್ಡೇಶಕ ಹಾಲಿ ಬಳ್ಳಾರಿ ನಗರದ ಶಾಸಕ. ಇವರದೂ ರಾಜಕೀಯ ಕುಟುಂಬವೆ ಇವರ ತಂದೆ ನಾ.ರ.ಸೂರ್ಯನಾರಯಣರೆಡ್ಡಿ ಮೂಲತಃ ಬಳ್ಳಾರಿಯವರೆ ಗ್ರಾನೈಟ್ ಉದ್ಯಮಿ ಜೊತೆಗೆ ಮೈನಿಂಗ್ ಧಣಿ ಬಳ್ಳಾರಿ ಜಿಲ್ಲೆಯ ಕುರಗೊಡನಲ್ಲಿ 2004 ರಲ್ಲಿ ಜೆ.ಡಿ.ಎಸ್ ಪಕ್ಷದಿಂದ ಶಾಸಕರಾಗಿದ್ದರಲ್ಲದೆ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ರಾಜಕೀಯ ಕಾರ್ಯದರ್ಶಿ ಆಗಿ ಕ್ಯಾಬಿನೆಟ್ ಮಂತ್ರಿ ಸ್ಥಾನಮಾನ ಪಡೆದಿದ್ದರು.ಇವರ ಮಗನೆ ನಾ.ರ.ಭರತ್ ರೆಡ್ಡಿ ಎಲ್ಲಾ ರಾಜಕಾರಣಿಗಳ ಮಕ್ಕಳಂತೆ ಭರತ್ ರೆಡ್ಡಿ ಸಹ ವಿದೇಶದಲ್ಲಿ ಮಾಸ್ಟರ್ ಡಿಗ್ರಿ ಪಡೆದಿದ್ದು 2014 ರಲ್ಲಿ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಸ್ಪರ್ದಿಸಿ ಭರ್ಜರಿ ಗೆಲವು ಸಾಧಿಸಿ ರಾಜಕೀಯ ಪ್ರವೇಶ ಪಡೆದು 2023 ವಿಧಾನಸಭೆ ಚುನಾವಣೆಯಲ್ಲಿ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ದಿಸಿ ತಮ್ಮ ಸಮೀಪದ ಪ್ರತಿಸ್ಪರ್ದಿ ಜನಾರ್ದನ ರೆಡ್ಡಿ ಅವರ ಪತ್ನಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಸ್ಪರ್ದಿಸಿದ್ದ ಲಕ್ಷ್ಮಿ ಅರುಣಾ ರೆಡ್ಡಿ ವಿರುದ್ದ ಗೆಲವು ಸಾದಿಸಿ ಮುಯ್ಯಿ ತಿರಿಸಿಕೊಂಡಿದ್ದಾರೆ.ನಾರಾ ಭರತ್ ರೆಡ್ಡಿಗೆ ಅವರ ಚಿಕ್ಕಪ್ಪ ಹಾಗು ಪ್ರಭಾವಿ ರಾಜಕಾರಣಿ ನಾರಾ ಪ್ರತಾಪ್ ರೆಡ್ಡಿ ಮತ್ತು ಸತಿಶ್ ರೆಡ್ಡಿ ಎಂಬವರು ಬೆನ್ನಿಗಿದ್ದಾರೆ ಹೀಗಾಗಿ ಈಗಿನ ಸಂದರ್ಭದಲ್ಲಿ ನಾ.ರ.ಭರತ್ ರೆಡ್ಡಿ ಎಲ್ಲಾ ರಿತಿಯಲ್ಲೂ ಸ್ಟ್ರಾಂಗ್ ಎನ್ನುವ ಮಾತು ಕೇಳಿಬರುತ್ತಿದೆ.
ಬಳ್ಳಾರಿ ಗಾಲಿಜನಾರ್ದನರೆಡ್ಡಿ ಗಣಿ ಧಣಿ ಎಂದೇ ಫೇಮಸ್ ಇನ್ನೂ ಬಳ್ಳಾರಿ ನಗರ ಶಾಸಕ ನಾ.ರ.ಭರತ್ ರೆಡ್ಡಿ ಇವರಿಬ್ಬರ ಕುಟುಂಬಗಳ ನಡುವಿನ ಶತ್ರುತ್ವ ವೈರತ್ವಕ್ಕೆ ಎರಡು ದಶಕಗಳ ಇತಿಹಾಸ ಇದ್ದು ಕುಟುಂಬಗಳ ನಡುವೆ ಇರುವ ಶತ್ರುತ್ವ ಸೇಡು ಮುಯ್ಯಿ ತೆಲುಗಿನ ರಾಯಲಸೀಮ ಸಿನಿಮಾಗಳ ಕಥೆಗಳಷ್ಟೇ ರೋಚಕ ಎನ್ನುತ್ತಾರೆ ಸ್ಥಳೀಯರು.
90ರ ದಶಕದಲ್ಲಿ ಬಳ್ಳಾರಿ ಪ್ರದೇಶದಲ್ಲಿ ಗಣಿಗಾರಿಕೆ ಮೂಲಕ ಜನಾರ್ದನ ರೆಡ್ಡಿ ಬ್ರದರ್ಸ್ ಬೆಳಕಿಗೆ ಬಂದಿದ್ದು, 2000ರ ಆರಂಭದಲ್ಲಿ ಬಿಜೆಪಿ ಮೂಲಕ ರಾಜಕೀಯಕ್ಕೆ ಕಾಲಿಟ್ಟಿದ್ದರು ಆ ಸಂದರ್ಭದಲ್ಲಿ ಸೂರ್ಯನಾರಾಯಣ ರೆಡ್ಡಿ. ಕೆಲಸ ನಿಮಿತ್ತ ಸರಕಾರಿ ಕಚೇರಿಗೆ ಹೋಗಿದ್ದಾಗ, ಅಲ್ಲಿದ್ದ ಅಧಿಕಾರಿಗಳು ಸೂರ್ಯನಾರಾಯಣರೆಡ್ಡಿ ಗೌರವದಿಂದ ನಡಸಿಕೊಂಡಿದ್ದನ್ನು ಅಲ್ಲೆ ಇದ್ದ ಜನಾರ್ದನ ರೆಡ್ಡಿಗೆ ಸಹಿಸೋಕೆ ಆಗಲಿಲ್ಲವಂತೆ ಹಾಗಾಗಿ ಸೂರ್ಯನಾರಾಯಣ ರೆಡ್ಡಿ ಶಾಸಕರಾಗಿದ್ದಾಗ ಸಂದರ್ಭದಲ್ಲಿ ಉದ್ಯಮಿಗಳಾಗಿದ್ದ ನಮಗೆ ಗೌರವ ಕೊಡಲಿಲ್ಲ ಎಂಬ ಹಠಕ್ಕೆ ಬಿದ್ದ ಜನಾರ್ದನ ರೆಡ್ಡಿ,ಅಂದಿನ ಯುವ ಮುಖಂಡ ಇಂದಿನ ಮಾಜಿ ಮಂತ್ರಿ ಶ್ರೀರಾಮುಲು ಬೆಂಬಲ ಪಡೆದು ರಾಜಕೀಯವಾಗಿ ಪ್ರಭಲರಾಗಿ 2004 ರಲ್ಲಿ ಬಿಜೆಪಿ ಟಿಕೆಟ್ ಪಡೆದ ಜನಾರ್ದನ ರೆಡ್ಡಿ ಬಳ್ಳಾರಿ ಕ್ಷೇತ್ರದಿಂದ ಗೆದ್ದರು ಇವರ ಬೆನ್ನಿಗೆ ಅಂದು ಕೇಂದ್ರ ಸಚಿವೆ ದಿ.ಸುಷ್ಮಾಸ್ವರಾಜ್ ನಿಂತಿದ್ದು ಜನಾರ್ದನರೆಡ್ಡಿ ಆನೆ ಬಲ ಬಂದಂತಾಗಿ ರಿಪಬ್ಲಿಕ್ ಆಫ್ ಬಳ್ಳಾರಿ ಎಂಬಂತೆ ಈಡಿ ಬಳ್ಳಾರಿಯನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡು ಪ್ರಾಬಲ್ಯ ಮೆರೆದಿದ್ದರು.
ಈ ಮದ್ಯೆ ಕ್ಷೇತ್ರ ಮರುವಿಂಗಡನೆಯಲ್ಲಿ ಕುರುಗೊಡು ವಿಧಾನಸಭಾ ಕ್ಷೇತ್ರ ಹರಿದು ಹಂಚಿಹೋಗುತ್ತದೆ ಒಂದಷ್ಟು ಭಾಗ ಕಂಪ್ಲಿ ಮತ್ತಷ್ಟು ಭಾಗ ಬಳ್ಳಾರಿಗೆ ಸೇರ್ಪಡೆ ಆಗುತ್ತದೆ ಸೂರ್ಯನಾರಯಣರೆಡ್ಡಿಗೆ ಕ್ಷೇತ್ರ ಇಲ್ಲದೆ ರಾಜಕೀಯವಾಗಿ ಹಿನ್ನಡೆ ಅನುಭವಿಸುತ್ತಾರೆ ಇತ್ತ ಜನಾರ್ದನರೆಡ್ಡಿ ಪ್ರಾಭಲ್ಯ ದಿನೆ ದಿನೆ ಏರುತ್ತ ಸಾಗುತ್ತದೆ ಇದು ಎರಡು ಕುಟುಂಬಗಳ ನಡುವಿನ ಸೇಡು ವೈರತ್ವ ಮತ್ತಷ್ಟು ಮಗದಷ್ಟು ಬಿಗಡಾಯಿಸುತ್ತ ಸಾಗುತ್ತಿರುವಾಗ 2007ರಲ್ಲಿ ಜಾತ್ಯತೀತ ಹೆಸರಿನ ಒಂದಷ್ಟು ಮಾಜಿ ಶಾಸಕರ ಗುಂಪು ಜೆಡಿಎಸ್ ತೊರೆದು ಎಂ.ಪಿ.ಪ್ರಕಾಶ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರಿದವರಲ್ಲಿ ನಾ.ರ.ಸೂರ್ಯನಾರಯಣರೆಡ್ಡಿ ಸಹ ಒಬ್ಬರು ಕಾಂಗ್ರೆಸ್ ಪಕ್ಷ ಸೇರಿದ ಸೂರ್ಯನಾರಯಣರೆಡ್ಡಿ ಕಾಂಗ್ರೆಸ್ ನಲ್ಲಿ ನೆಲೆ ಕಂಡುಕೊಳ್ಳಲು ಹೆಣಗಾಡುತ್ತಿರುವಾಗ 2010 ರಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರ ‘ಬಳ್ಳಾರಿ ಚಲೋ’ ಪಾದಯಾತ್ರೆ ಕೂಡ ನಡೆಯಿತು. ಅಪ್ಪನ ಬೆಂಬಲಕ್ಕೆ ನಿಂತವ ಮಗ ನಾರಾ ಭರತ್ ರೆಡ್ಡಿ, ಅಪ್ಪನಿಗಾಗಿ ಭರತ್ ರೆಡ್ಡಿ, ಜನಾರ್ದನ ರೆಡ್ಡಿ ಅವರ ವಿರುದ್ಧ ಹೋರಾಡುತ್ತಲೇ ಬಂದಿದ್ದಾರೆ.ಮುಂದೆ 2023 ರಲ್ಲಿ ಬಳ್ಳಾರಿ ಕ್ಷೇತ್ರದಲ್ಲಿ ಸ್ಪರ್ದಿಸಲು ಅಪ್ಪ ಸೂರ್ಯನಾರಯಣರೆಡ್ಡಿ ಆಕಾಂಕ್ಷಿಯಾಗಿದ್ದರೆ ಕಾಂಗ್ರೆಸ್ ಹೈಕಮಾಂಡ್ ಮಗ ಭರತ್ ರೆಡ್ಡಿಗೆ ಸ್ಪರ್ದಿಸಲು ಅವಕಾಶ ಕಲ್ಪಿಸಿತು ಅಪ್ಪನ ನೆರಳಲ್ಲಿ ಭರತ್ ರೆಡ್ಡಿ ಗೆದ್ದು ಶಾಸಕರಾದರು.
ವಿಧಾನ ಸಭೆ ಆದಿವೇಶನದಲ್ಲೂ ರೆಡ್ದಿಗಳ ಕದನ
ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಹಾಗೂ ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ನಡುವಿನ ಬಳ್ಳಾರಿ ಕಿತ್ತಾಟ ಸಧನದಲ್ಲೂ ಪ್ರತಿಧ್ವನಿಸಿದ್ದು 2023 ರ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಇಬ್ಬರು ಶಾಸಕರು ಸದನದಲ್ಲೇ ಪರಸ್ಪರವಾಗಿ ಏಕವಚನದಲ್ಲಿ ಬೈದಾಡಿಕೊಂಡಿದ್ದರು. ಇವರನ್ನು ನಿಯಂತ್ರಣ ಮಾಡಲು ಸ್ಪೀಕರ್ ಯು.ಟಿ ಖಾದರ್ ಹರಸಾಹಸ ಪಡಬೇಕಾಗಿ ಬಂದಿತ್ತು. ಕರ್ನಾಟಕ ತಾಯಿಗೆ ಮೋಸ ಮಾಡಿದವನು ನೀನು ರಾಜ್ಯದ ಗಡಿ ಭಾಗವನ್ನು ಆಂಧ್ರ ಪ್ರದೇಶಕ್ಕೆ ಸೇರಿಸಿದವನು ನೀನು ಸಧನದಲ್ಲಿ ಮಾತನಾಡುತ್ತೀಯಾ ಎಂದು ನಾರಾ ಭರತ್ ರೆಡ್ಡಿ ಏಕ ವಚನದಲ್ಲೇ ಜನಾರ್ದನ ರೆಡ್ಡಿ ವಿರುದ್ದ ವಾಗ್ದಾಳಿ ನಡೆಸಿದ್ದರು.
ರೆಡ್ಡಿ ಕುಟುಂಬಗಳ ನಡುವಿನ ಕದನ ಜನವರಿ 1, 2026 ರಂದು ಬಳ್ಳಾರಿಯಲ್ಲಿ ಬ್ಯಾನರ್ ಅಳವಡಿಸುವ ವಿಚಾರವಾಗಿ ಮತ್ತೆ ಮುನ್ನಲೆಗೆ ಬಂದಿದೆ ಎರಡು ಕುಟುಂಬಗಳ ಬೆಂಬಲಿಗರ ನಡುವೆ ಘರ್ಷಣೆ ನಡೆದಿದೆ. ಈ ಘಟನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಎಂಬುವವರು ಗುಂಡೇಟಿನಿಂದ ಮೃತಪಟ್ಟಿದ್ದಾರೆ. ಘಟನೆಯ ನಂತರ ಜನಾರ್ದನ ರೆಡ್ಡಿ ಅವರು, ನಾರಾ ಸೂರ್ಯನಾರಾಯಣ ರೆಡ್ಡಿ ಮತ್ತು ಅವರ ಪುತ್ರ ಭರತ್ ರೆಡ್ಡಿ ನನ್ನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದಾರೆ ಎಂದು ನೇರವಾಗಿ ಆರೋಪಿಸಿದರೆ ಇದಕ್ಕೆ ಪ್ರತಿಯಾಗಿ, ಜನಾರ್ದನ ರೆಡ್ಡಿ ಅವರೇ ಬಳ್ಳಾರಿಯಲ್ಲಿ ಶಾಂತಿ ಕದಡುತ್ತಿದ್ದಾರೆ ಎಂದು ನಾರಾ ಕುಟುಂಬ ಹೇಳಿದೆ.




41 ಜನರ ವಿರುದ್ಧ ದೂರು
ಬಳ್ಳಾರಿಯ ಜನಾರ್ದನ ರೆಡ್ಡಿ ಮನೆ ಮುಂದೆ ಗಲಾಟೆ ನಡೆದಿತ್ತು. ನನ್ನ ಮನೆ ಮೇಲೂ ಫೈರಿಂಗ್ ನಡೆದಿದೆ. ನನ್ನ ಮೇಲೂ ದಾಳಿ ಮಾಡಲು ಯತ್ನಿಸಿದ್ದಾರೆ ಎಂದು ಜನಾರ್ದನ ರೆಡ್ಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ರೆಡ್ಡಿ ಕೊಟ್ಟ ದೂರಿನ ಮೇರೆಗೆ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದು, ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಸೇರಿದಂತೆ 41 ಮಂದಿ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.



